ಮದುವೆಗೆ ಒಲ್ಲೆ ಎಂದ ಗಗನ ಸಖಿ ಕಿವಿ ಕತ್ತರಿಸಿದ್ದ ಪಾಗಲ್​ ಪ್ರೇಮಿ ಪೊಲೀಸರ ಮುಂದೆ ಶರಣು

ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ ಯುವತಿಯಿಂದಾಗಿ ತನ್ನ ಹೆಸರು ರೌಡಿಶೀಟರ್​ ಪಟ್ಟಿಗೆ ಸೇರಿತು ಎಂದು ಸೇಡು ತೀರಿಸಿಕೊಳ್ಳಲು ಮುಂದಾದ ಅಜಯ್​ ಈ ಕೃತ್ಯ ಎಸಗಿದ್ದಾನೆ

Seema.R | news18
Updated:May 17, 2019, 7:07 PM IST
ಮದುವೆಗೆ ಒಲ್ಲೆ ಎಂದ ಗಗನ ಸಖಿ ಕಿವಿ ಕತ್ತರಿಸಿದ್ದ ಪಾಗಲ್​ ಪ್ರೇಮಿ ಪೊಲೀಸರ ಮುಂದೆ ಶರಣು
ರೌಡಿ ಶೀಟರ್​ ಅಜಯ್​
Seema.R | news18
Updated: May 17, 2019, 7:07 PM IST
ಬೆಂಗಳೂರು (ಮೇ.17): ಮದುವೆಗೆ ನಿರಾಕರಿಸಿದ ಕಾರಣಕ್ಕೆ ಗಗನಸಖಿ ಕಿವಿ ಕತ್ತರಿಸಿದ ರೌಡಿಶೀಟರ್ ಜಾಕಿ​  ಪೊಲೀಸರ ಮುಂದೆ ಶರಣಾಗಿದ್ದಾನೆ.

ಈತನನ್ನು ಹುಡುಕಲು ಕೊಡಿಗೆಹಳ್ಳಿ ಪೊಲೀಸರು ವಿಶೇಷ ತಂಡ ರಚನೆ ಮಾಡಿತ್ತು. ಇದರಿಂದ ಬೆದರಿದ ರೌಡಿ ಅಜಯ್​ ಅಲಿಯಾಸ್​ ಜಾಕಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಘಟನೆ ಹಿನ್ನೆಲೆ

ಇಂಡಿಗೊ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು ಯುವತಿಯೊಂದಿಗೆ ಸ್ನೇಹ ಹೊಂದಿದ್ದಅಜಯ್​  ಮದುವೆಯಾಗುವಂತೆ ಕಳೆದ ಫೆಬ್ರವರಿಯಲ್ಲಿ ಆಕೆಗೆ ಮನವಿ ಮಾಡಿದ್ದ. ಆದರೆ, ಈ ಮನವಿಯನ್ನು ಆಕೆ ತಿರಸ್ಕರಿಸಿ ಎಚ್ಚರಿಕೆ ನೀಡಿದ್ದಳು. ಅಲ್ಲದೆ ಈ ಸಂಬಂಧ ಅಜಯ್​ ಮನೆಯವರಿಗೂ ದೂರು ನೀಡಿದ್ದಳಿ.

ಇದಾದ ಬಳಿಕವೂ ಗಗನಸಖಿಯನ್ನು ಈತ ಬೆಂಬಿಡದಂತೆ ಕಾಡಿದ್ದ. ಅಲ್ಲದೇ ಆಕೆ ಮನೆಗೂ ತೆರಳಿ ದಾಂಧಲೆ ಮಾಡಿದ್ದ. ಇದರಿಂದಾಗಿ ಗಗನಸಖಿ ಕುಟುಂಬ ಜಾಲಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈತನ ಹೆಸರನ್ನು ರೌಡಿ ಶೀಟರ್​ ಪಟ್ಟಿಗೆ ದಾಖಲಿಸಿದ್ದರು.

ಇದನ್ನು ಓದಿ: ಮೈಸೂರು ಶೂಟೌಟ್​ ಪ್ರಕರಣ; ಹಳೆ ನೋಟುಗಳ ಬದಲಾವಣೆಗಾಗಿ ಬಂದಿಳಿದಿದ್ದಾ ಮುಂಬೈ ಗ್ಯಾಂಗ್​​?ತನ್ನ ಹೆಸರು ರೌಡಿ ಶೀಟರ್​ ಪಟ್ಟಿಗೆ ದಾಖಲಾದ ಹಿನ್ನೆಲೆ ಸಿಟ್ಟಿಗೆ ಒಳಗಾದ ಅಜಯ್​ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ಈ ಘಟನೆ ನಡೆದಿದೆ. ಮೇ. 12ರಂದು ಗಗನಸಖಿ ಕ್ಯಾಬ್​ನಲ್ಲಿ ಬರುವಾಗ ಅಡ್ಡ ಹಾಕಿ ಕುಳಿತಿದ್ದಾನೆ. ಕಾರಿನ ಕ್ಯಾಬ್​ ಚಾಲಕನಿಗೂ ಹಲ್ಲೆ ಮಾಡಿದ ಈತ ನಿನ್ನಿಂದಾಗಿ ತಾನು ರೌಡಿ ಆದೆ. ನೀನು ನನ್ನ ಮದುವೆಯಾಗು ಎಂದು ಆಕೆಗೆ ಬೆದರಿಸಿದ್ದಾನೆ. ಈ ವೇಳೆ ಯುವತಿ ಮತ್ತೆ ನಕಾರ ಮಾಡಿದ್ದು, ಸಿಟ್ಟಾದ ಅಜಯ್​ ಆಕೆಯ ಕಿವಿ ಕತ್ತರಿಸಿದ್ದಾನೆ. ತಕ್ಷಣಕ್ಕೆ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪ್ರಕರಣ ಸಂಬಂದ ಯುವತಿ ಕೊಡಿಗೇಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

(ವರದಿ ; ಮಂಜು ಆರ್ಯ)

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ