ಮೈಸೂರು: 2023ರ ವಿಧಾನಸಭಾ ಚುನಾವಣೆಗೆ ಕರ್ನಾಟಕ (Karnataka assembly elections) ಸಜ್ಜಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಎಲೆಕ್ಷನ್ ಜ್ವರ ಹೆಚ್ಚಾಗುತ್ತಿದೆ. ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು (ticket aspirants) ಈಗಾಗಲೇ ವರಿಷ್ಠರ ಗಮನ ಸೆಳೆಯೋದಕ್ಕೆ, ಶಕ್ತಿ ಪ್ರದರ್ಶನ ಮಾಡಿ ಟಿಕೆಟ್ ಗಿಟ್ಟಿಸೋದಕ್ಕೆ ಸರ್ಕಸ್ ಶುರು ಮಾಡಿದ್ದಾರೆ. ಈ ನಡುವೆ ರೌಡಿ ಶೀಟರ್ಗಳು (rowdy sheeters) ಬಿಜೆಪಿ (BJP) ಸೇರುವುದಕ್ಕೆ ಮುಂದಾಗುತ್ತಿದ್ದಾರೆ. ಈಗಾಗಲೇ ಫೈಟರ್ ರವಿ (Fighter Ravi) ಬಿಜೆಪಿಗೆ ಸೇರಿದ್ದು, ನಾಗಮಂಗಲದಿಂದ (Nagamangala) ಟಿಕೆಟ್ ಬಯಸಿದ್ದಾನೆ ಎನ್ನಲಾಗಿದೆ. ಮತ್ತೋರ್ವ ರೌಡಿ ಶೀಟರ್ ಸೈಲೆಂಟ್ ಸುನೀಲ (Silent Sunil) ಬಿಜೆಪಿಗೆ ಸೇರುತ್ತಾನೆ ಎನ್ನಲಾಗಿದೆ. ಮತ್ತೊಂದೆಡೆ ರೌಡಿ ಶೀಟಲ್ ವಿಲ್ಸನ್ ಗಾರ್ಡನ್ ನಾಗ (Wilson Garden) ಸಚಿವ ಸೋಮಣ್ಣ (Minister Somanna) ಮನೆಗೆ ಭೇಟಿ ನೀಡಿದ್ದಾನೆ ಎನ್ನಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇನ್ನು ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಶಂಕರ (Bettnagare Shankara) ಕೂಡ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಆನೇಕಲ್ (Anekal) ವ್ಯಾಪ್ತಿಯ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿ (Manjunath alias Uppi) ಎಂಬಾತನನ್ನು ಆನೇಕಲ್ ಪುರಸಭೆಗೆ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ವಿವಾದಗಳ ಬೆನ್ನಲ್ಲೇ ಮೈಸೂರಿನ ರೌಡಿಯೇ ಬಿಜೆಪಿಗೆ ಆಫರ್ ಕೊಟ್ಟಿದ್ದಾನೆ!
“ನಾನೂ ರೌಡಿಶೀಟರ್, ಬಿಜೆಪಿಗರೇ ನನಗೂ ಟಿಕೆಟ್ ನೀಡಿ”
ರೌಡಿ ಶೀಟರ್ಗಳು ಬಿಜೆಪಿ ಸೇರಲು ಆಸಕ್ತಿ ತೋರುತ್ತಿದ್ದಾರೆ ಎಂಬ ಚರ್ಚೆ ಜೋರಾಗಿರುವಾಗಲೇ, ಮೈಸೂರಿನಲ್ಲಿ ರೌಡಿ ಶೀಟರ್ ಒಬ್ಬ “ನನ್ನನ್ನೂ ಬಿಜೆಪಿಗೆ ಸೇರಿಸಿಕೊಳ್ಳಿ” ಅಂತ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾನೆ.
ರೌಡಿ ಶೀಟರ್ ಪಾನಿಪುರಿ ಮಂಜನ ಏಕಾಂಗಿ ಪ್ರತಿಭಟನೆ
ಮೈಸೂರಿನಲ್ಲಿ ರೌಡಿ ಶೀಟರ್ ಪಾನಿಪೂರಿ ಮಂಜು ಎಂಬಾತ ಏಕಾಂಗಿಯಾಗಿ, ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದ್ದಾನೆ. ನಾನು ರೌಡಿ ಶೀಟರ್, ನನಗೂ ಸ್ಥಾನ-ಮಾನ ಕೊಡಿ, ಬಿಜೆಪಿಗರೇ ನನಗೂ ಟಿಕೆಟ್ ನೀಡಿ ಅಂತ ಆಗ್ರಹಿಸಿದ್ದಾನೆ.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ಎನ್ಆರ್ ಪುರ ಟಿಕೆಟ್ ಕೊಡಬೇಕಂತೆ!
ಮೈಸೂರಿನ ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರು, ಬ್ಯಾನರ್ ಹಿಡಿದ ರೌಡಿ ಶೀಟರ್ ಪಾನಿಪುರಿ ಮಂಜು ಏಕಾಂಗಿ ಪ್ರತಿಭಟನೆ ಮಾಡಿದ್ದಾನೆ. ಎನ್.ಆರ್. ಕ್ಷೇತ್ರದ ಟಿಕೆಟ್ ನೀಡಿ ಬಿಜೆಪಿಗರೇ ಅಂತ ಆಗ್ರಹಿಸಿದ್ದಾನೆ.
ಯಾರು ಈ ಪಾನಿಪುರಿ ಮಂಜ?
ಮಂಜು ಅಲಿಯಾಸ್ ಪಾನಿಪುರಿ ಮಂಜು ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್. ಎನ್.ಆರ್.ಮೊಹಲ್ಲಾದ ಗಣೇಶ ನಗರ ನಿವಾಸಿ. ಈತನ ಮೇಲೆ 307, 420, 506, 504 ಸೇರಿ ಹಲವು ಸೆಕ್ಷನ್ಗಳ ಅಡಿ ಕೇಸುಗಳಿವೆ.
ಮಂಜುವನ್ನು ಬಂಧಿಸಿ, ಕರೆದೊಯ್ದ ಪೊಲೀಸರು
ಇಂದು ಮಧ್ಯಾಹ್ನ ಮಂಜು ಪ್ರತಿಭಟನೆ ಮಾಡಿದ್ದು, ರೌಡಿ ರಾಜಕಾರಣಗಳನ್ನ ಗಮನಿಸಿ ತಾನೇ ಖುದ್ದು ಅಖಾಡಕ್ಕೆ ಇಳಿದಿದ್ದಾನೆ. ನನಗೂ ಟಿಕೆಟ್ ನೀಡಿ ಎಂದು ಬಿಜೆಪಿ ನಾಯಕರನ್ನು ಆಗ್ರಹಿಸಿದ್ದಾನೆ. ಮಂಜನ ಪ್ರತಿಭಟನೆಯಿಂದ ಪೊಲೀಸರೇ ಕಂಗಾಲಾಗಿದ್ದ ಕಂಡುಬಂತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಲಕ್ಷ್ಮೀಪುರಂ ಠಾಣೆ ಪೊಲೀಸರು, ಮಂಜನನ್ನು ಬಂಧಿಸಿದ್ರು. ಬಳಿಕ ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.
ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?
ಪುರಸಭೆಗೆ ರೌಡಿಶೀಟರ್ ನಾಮನಿರ್ದೇಶನ
ಆನೇಕಲ್ ನಿವಾಸಿ ಮಂಜುನಾಥ್ ಅಲಿಯಾಸ್ ಉಪ್ಪಿಯು ಕೊಲೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾರೆ. ಆಯ್ಕೆಗೊಳಿಸುವ ಮುನ್ನ ಭರ್ತಿಮಾಡಬೇಕಾದ ಅರ್ಜಿಯಲ್ಲಿ ಸೂಚಿಸಿಲಿರುವ ವ್ಯಕ್ತಿಯ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಕಾಲಂ ಇದೆ. ಆದರೂ ಕೂಡ ಮಂಜುನಾಥ್ನನ್ನು ನಾಮನಿರ್ದೇಶಿತ ಪುರಸಭೆ ಸದಸ್ಯನನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ