ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿಗ (Karnataka BJP) ಸಾಲು ಸಾಲು ರೌಡಿಶೀಟರ್ಗಳ (Rowdy Sheeter) ಹೆಸರುಗಳು ಕೇಳಿ ಬರುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಸೈಲೆಂಟ್ ಸುನೀಲ್ (Silent Sunil ), ಫೈಟರ್ ರವಿ (Fighter Ravi), ಬೆತ್ತನಗೆರೆ ಶಂಕರ ಸೇರಿದಂತೆ ಹಲವು ರೌಡಿ ಶೀಟರ್ಗಳು ಬಿಜೆಪಿಯಲ್ಲಿ ಪಕ್ಷದಲ್ಲಿ ಕಾಣಸಿಕೊಳ್ಳುತ್ತಿರೋದು ರಾಷ್ಟ್ರಮಟ್ಟದ ವಾಹಿನಿಗಳಲ್ಲಿ ಸುದ್ದಿಯಾಗುತ್ತಿದೆ. ಇದೀಗ ಮತ್ತೋರ್ವ ರೌಡಿ ಶೀಟರ್ಗೆ ಪುರಸಭೆಯ (Municipality) ನಾಮನಿರ್ದೇಶಿತ ಸದಸ್ಯತ್ವವನ್ನು ಸರ್ಕಾರ ನೀಡಿ ಆದೇಶ ಹೊರಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ಗಳಾಗಿದ್ದವರು ಇದೀಗ ಬಿಜೆಪಿ ಪಕ್ಷದಲ್ಲಿ ಒಬ್ಬೊಬ್ಬರಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ಇದೀಗ ಮತ್ತೋರ್ವ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿ ಸೇರ್ಪಡೆಯಾಗಿದ್ದಾನೆ.
ರಾಜ್ಯ ಸರ್ಕಾರದಿಂದ ಆದೇಶ
ಬೆಂಗಳೂರು ಹೊರವಲಯ ಆನೇಕಲ್ ಪುರಸಭೆಗೆ ಕಳೆದ ನಾಲ್ಕೈದು ದಿನಗಳ ಹಿಂದೆ ನಾಮನಿರ್ದೇಶಿತ ಸದಸ್ಯನನ್ನಾಗಿ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಡಿವಾಳ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿ ಹೆಸರು
ಬೆಂಗಳೂರಿನ ನಟೋರಿಯಸ್ ರೌಡಿ ಕವಳ ಅಲಿಯಾಸ್ ವಿಜಯ್ ಕುಮಾರ್ನನ್ನು ನಕರಬಾಬು ಮರ್ಡರ್ ಮಾಡಿದ್ದು, ಇದೇ ನಕರಬಾಬುನನ್ನು ಮಂಜುನಾಥ್ ಅಲಿಯಾಸ್ ಉಪ್ಪಿ ಅಂಡ್ ಗ್ಯಾಂಗ್ ಮರ್ಡರ್ ಮಾಡಿದ್ದು, ಮಡಿವಾಳ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ಸೇರಿದ್ದಾನೆ.
ನಳಿನ್ ಕುಮಾರ್ ಕಟೀಲ್
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP State President Nalin Kumar Kateel), ರಾಜಕೀಯ ವ್ಯವಸ್ಥೆಯಲ್ಲಿ ಕೆಲವು ಸಹಜ ಅಚಾತುರ್ಯಗಳಾಗುತ್ತವೆ. ಎಲ್ಲವನ್ನೂ ಕ್ರಿಮಿನಲ್ ಕೇಸ್ಗಳು (Criminal Case) ಅಂತಾ ಹೇಳಲು ಆಗುವುದಿಲ್ಲ, ನಾನು ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರ ಕೇಸ್ಗಳು ಯಾವುದು ಅಂತ ತೆಗೆದು ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಕೂಡಾ ಪ್ರಕರಣಗಳಿವೆ ಎಂದು ಹೇಳಿದರು.
ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?
ಅಚಾತುರ್ಯಗಳ ಪರಿಶೀಲನೆ ಮಾಡಲಾಗುವುದು
ಅವೆಲ್ಲಾ ಹೋರಾಟದ ಹಾಗೂ ಹಿಂದುತ್ವದ ಪರವಾದ ಹೋರಾಟಗಾರರ ಮೇಲೆ ಕೇಸ್ಗಳಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಲ್ಲರನ್ನೂ ರೌಡಿ ಲಿಸ್ಟ್ಗೆ ಹಾಕಿತ್ತು. ಎಲ್ಲವನ್ನೂ ನಾವು ತುಲನೆ ಮಾಡುತ್ತಿದ್ದು, ಅಂತಹ ಅಚಾತುರ್ಯಗಳು ಎಲ್ಲಿ ಆಗಿದೆಯೋ ಎಲ್ಲವನ್ನೂ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ಕೆಲವರಿಂದ ತೇಪೆ ಹಚ್ಚುವ ಕೆಲಸ
ರೌಡಿಶೀಟರ್ಗಳ ಡ್ಯಾಮೇಜ್ ನಿಂದ ಬಿಜೆಪಿ ಪಕ್ಷ ಕೊಂಚ ಮುಜುಗರಕ್ಕೆ ಒಳಗಾದ್ರು ಸಹ ತೇಪೆ ಹಚ್ಚುವ ಹಾಗೆ ಕೆಲ ನಾಯಕರುಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನಾದ್ರು ರೌಡಿ ಶೀಟರ್ಗಳನ್ನ ದೂರವಿಟ್ಟು ಪಕ್ಷದ ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ನಾಯಕರುಗಳು ಮುಂದಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ