ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್​​​ನ ಬರ್ಬರ ಹತ್ಯೆ; ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕದಂಬ ಹೋಟೆಲ್ ಬಳಿ ಘಟನೆ

ಕೊಲೆಯಾದ ರೌಡಿ ಶೀಟರ್ ಸುನೀಲ್ ಕುಮಾರ್, ಆನೇಕಲ್ ತಾಲೂಕಿನ ಬೆಸ್ತಮಾರನಹಳ್ಳಿ ಗ್ರಾಮದವನು. 2018 ರಲ್ಲಿ ಜಯಂತ್ ಎಂಬ ರೌಡಿ ಶೀಟರ್​​ನನ್ನು ಮರ್ಡರ್ ಮಾಡಿ, ಜೈಲು ಪಾಲಾಗಿ 2019ರ ಆಗಸ್ಟ್ ನಲ್ಲಿ ಬೇಲ್ ಮೇಲೆ ಹೊರ ಬಂದಿರುತ್ತಾನೆ. ಅಲ್ಲದೇ ಈತನ ವಿರುದ್ದ ಸಾಕಷ್ಟು ಕೊಲೆ, ಕೊಲೆ ಯತ್ನ ಪ್ರಕರಣಗಳು ಇವೆ. ಆನೇಕಲ್, ಅತ್ತಿಬೆಲೆ ಭಾಗಗಳಲ್ಲಿ ಸಾಕಷ್ಟು ಹಿಡಿತ ಸಾಧಿಸಿದ್ದ ಸುನೀಲ್, ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ತಿರುಗಾಡುತ್ತಿದ್ದ.

news18-kannada
Updated:August 1, 2020, 8:53 PM IST
ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್​​​ನ ಬರ್ಬರ ಹತ್ಯೆ; ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕದಂಬ ಹೋಟೆಲ್ ಬಳಿ ಘಟನೆ
ಸಾಂದರ್ಭಿಕ ಚಿತ್ರ
  • Share this:
ರಾಮನಗರ(ಆ.01): ಆತ ಒಬ್ಬ ನಟೋರಿಯಸ್ ರೌಡಿ. ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳ ರೌಡಿ ಶೀಟರ್. ನಿನ್ನೆ ರಾತ್ರಿ ತನ್ನ ಗೆಳೆಯನ ಜೊತೆ ಕಾಫಿ ಕುಡಿಯೋಕೆ ಅಂತಾ ಹೋಟೆಲ್​​ಒಂದಕ್ಕೆ ಹೋಗಿದ್ದ. ಆದ್ರೆ ಹೊಂಚು ಹಾಕಿ ಕಾದು ಕುಳಿತಿದ್ದ ಅದೊಂದು ದುಷ್ಕರ್ಮಿಗಳ ತಂಡ ರೌಡಿ ಶೀಟರ್ ನ ಮಾರಕಾಸ್ತ್ರಗಳಿಂದ  ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿತ್ತು.  ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೌದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಒಬ್ಬನನ್ನ ಕಳೆದ ರಾತ್ರಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಕದಂಬ ಹೊಟೇಲ್ ಮುಂಭಾಗ ನಡೆದಿದೆ. ಅಂದಹಾಗೆ ಕೊಲೆಯಾದ ವ್ಯಕ್ತಿ ಬೆಂಗಳೂರು ಅತ್ತಿಬೆಲೆ ಪೊಲೀಸ್ ಠಾಣೆಯ ರೌಡಿ ಶೀಟರ್ ಸುನೀಲ್ ಕುಮಾರ್. ಹೌದು ರೌಡಿ ಶೀಟರ್​​ ಸುನೀಲ್ ಕುಮಾರ್, ತನ್ನ ಸ್ನೇಹಿತನ ಜೊತೆ ಕಾಫಿ ಕುಡಿಯೋಕೆ ಅಂತಾ ಕದಂಬ ಹೊಟೇಲ್ ಗೆ ಹೋಗಿದ್ದ. ಆತನನ್ನ ಫಾಲೋ ಮಾಡಿಕೊಂಡು ಬಂದಿದ್ದ ಅದೊಂದು ದುಷ್ಕರ್ಮಿಗಳ ಗುಂಪು, ಆತ ಹೋಟೆಲ್ ಒಳಗೆ ಹೋಗಿ ಕಾಫಿ ಕುಡಿದು ಹೊರ ಬರುತ್ತಿದ್ದಂತೆ ಆತನ ಮೇಲೆ ಆಟ್ಯಾಕ್ ಮಾಡಿತ್ತು.

ಇನ್ನೋವಾ ಕಾರಿನಲ್ಲಿ ಬಂದ ಸುಮಾರು 8 ಜನರಿದ್ದದುಷ್ಕರ್ಮಿಗಳ ತಂಡ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಆತ ಕಾರಿನಲ್ಲಿ ತಪ್ಪಿಸಿಕೊಳ್ಳಲು ಮುಂದಾದ ವೇಳೆ, ಲಾಂಗ್ ನಿಂದ ಕಾರಿನ ಟೈರ್ ಗೆ ಹೊಡೆದು ಪಂಚರ್ ಮಾಡಿ, ಕಾರಿನಿಂದ ಆತನನ್ನ ಹೊರ ಎಳೆದು ಬರ್ಬರವಾಗಿ ಹತ್ಯೆ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಉತ್ತರ ಕನ್ನಡ: ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಪುನರಾರಂಭ; ಮೀನುಗಾರರಿಗೆ ಮತ್ತೆ ಕಾಡಲಿದೆ ಕೊರೋನಾ ಮಾಹಾಮಾರಿ

ಇನ್ನು ಆತನ ಸ್ನೇಹಿತ ಬಿಡಿಸಿಕೊಳ್ಳಲು ಮುಂದಾದ ವೇಳೆ ಆತನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಏಕಾಏಕಿ ನಡೆದ ದಾಳಿಯನ್ನ ಕಂಡ ಹೋಟೆಲ್ ಮುಂಭಾಗದಲ್ಲಿ ಇದ್ದ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಇನ್ನು ರೌಡಿ ಶೀಟರ್ ಭೀಕರಹತ್ಯೆಯ ದೃಶ್ಯಗಳು, ಹೋಟೆಲ್​ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂದ ಹಾಗೆ  ಕೊಲೆಯಾದ ರೌಡಿ ಶೀಟರ್ ಸುನೀಲ್ ಕುಮಾರ್, ಆನೇಕಲ್ ತಾಲೂಕಿನ ಬೆಸ್ತಮಾರನಹಳ್ಳಿ ಗ್ರಾಮದವನು. 2018 ರಲ್ಲಿ ಜಯಂತ್ ಎಂಬ ರೌಡಿ ಶೀಟರ್​​ನನ್ನು ಮರ್ಡರ್ ಮಾಡಿ, ಜೈಲು ಪಾಲಾಗಿ 2019ರ ಆಗಸ್ಟ್ ನಲ್ಲಿ ಬೇಲ್ ಮೇಲೆ ಹೊರ ಬಂದಿರುತ್ತಾನೆ. ಅಲ್ಲದೇ ಈತನ ವಿರುದ್ದ ಸಾಕಷ್ಟು ಕೊಲೆ, ಕೊಲೆ ಯತ್ನ ಪ್ರಕರಣಗಳು ಇವೆ. ಆನೇಕಲ್, ಅತ್ತಿಬೆಲೆ ಭಾಗಗಳಲ್ಲಿ ಸಾಕಷ್ಟು ಹಿಡಿತ ಸಾಧಿಸಿದ್ದ ಸುನೀಲ್, ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ತಿರುಗಾಡುತ್ತಿದ್ದ.

ಈ ವೇಳೆ ಆನೇಕಲ್ ನ ಮತ್ತೊಬ್ಬ ರೌಡಿಶೀಟರ್ ಒಬ್ಬನನ್ನ ಮರ್ಡರ್ ಮಾಡಲು ಕೂಡ ಸ್ಕೆಚ್ ಹಾಕಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ವಿಚಾರ ತಿಳಿದ ಮತ್ತೊಬ್ಬ ರೌಡಿ ಶೀಟರ್, ಈತನನ್ನು ಹೀಗೆ ಬಿಟ್ಟರೆ ಉಳಿಗಾಲವಿಲ್ಲ ಅಂತಾ ಸುನೀಲ್​ನನ್ನು ಮುಗಿಸಲು ಪ್ಲಾನ್ ಮಾಡಿ, ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆ ನಂತರ ಕುಂಬಳಗೂಡು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ರೌಡಿ ಶೀಟರ್ ಸುನೀಲ್ ಹತ್ಯೆ ಪ್ರಕರಣವನ್ನ ಭೇದಿಸಲು ವಿಶೇಷ ಮೂರು ತಂಡಗಳನ್ನ ಸಹಾ ರಚನೆ ಮಾಡಲಾಗಿದೆ ಎಂದು ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

ಒಟ್ಟಾರೆ ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್​​​ನನ್ನು ನಡು ರಸ್ತೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ. ಇನ್ನು ಕೊಲೆ ಆರೋಪಿಗಳ ಬಂಧನಕ್ಕೆ ಕುಂಬಳಗೂಡು ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Latha CG
First published: August 1, 2020, 8:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading