ಸಕ್ಕರೆನಾಡು ಮಂಡ್ಯದಲ್ಲಿ ರೌಡಿಶೀಟರ್​​ನ ಬರ್ಬರ ಹತ್ಯೆ; ದುಷ್ಕರ್ಮಿಗಳ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರು

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ರೌಡಿಶೀಟರ್ ವ್ಯಕ್ತಿ ಆಗಿದ್ದ ಈತ, ನಗರದಲ್ಲಿ ಮನೆ ಮನೆಗೆ ಹಾಲು ಹಾಕುವ ಕೆಲಸ ಮಾಡ್ತಿದ್ದ.  ಸಂಜೆ ಹಾಲು ಹಾಕುವ ವೇಳೆ ಗುತ್ತಲಿನ‌ ಬಸವಗುಡಿ ಬಡಾವಣೆಯ ಬಳಿ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿ ಪರಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಡ್ಯ(ಅ.31): ಸಕ್ಕರೆನಾಡು ಮಂಡ್ಯದಲ್ಲಿ ದಿನೇದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಕೊಲೆ, ದರೋಡೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗ್ತಿದ್ದು, ಹಾಡುಹಗಲೇ ಮಾರಾಕಾಸ್ತ್ರಗಳು ಜಳಪಿಸ್ತಿದ್ದು, ಕೊಲೆ ಮಾಡಿ ಪುಂಡಾಟ ಮಾಡ್ತಿದ್ದಾರೆ. ಕಳೆದ ವಾರವಷ್ಟೆ ಶ್ರೀರಂಗಪಟ್ಟಣದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆ ನಡೆದಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ರೌಡಿ ಶೀಟರ್ ಹತ್ಯೆಯಾಗಿದೆ. ನಿನ್ನೆ ಸಂಜೆ ಮಂಡ್ಯದ ಗುತ್ತಲು ಬಡಾವಣೆಯಲ್ಲಿ ರೌಡಿ ಶೀಟರ್ ಕುಳ್ಳಿಯ ಬರ್ಬರ ಹತ್ಯೆಯಾಗಿದ್ದು ಮಂಡ್ಯದ ಜನತೆ ಘಟನೆ ಕಂಡು ಬೆಚ್ಚಿ ಬಿದ್ದಿದ್ದಾರೆ. ಹೌದು! ಮಂಡ್ಯ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅದ್ರಲ್ಲೂ ಜಿಲ್ಲೆಯಲ್ಲಿ ಕೊಲೆ ಪ್ರಕರಣ ಹೆಚ್ಚಾಗ್ತಿರೋದು ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿ ಆತಂಕ ಮೂಡಿಸಿದೆ‌. ಕಳೆದ ವಾರ ಶ್ರೀರಂಗ ಪಟ್ಟಣದಲ್ಲಿ  ರೌಡಿಶೀಟರ್  ವ್ಯಕ್ತಿ ಕೊಲೆಯಾಗಿತ್ತು. ಆ ಪ್ರಕರಣ ಮಾಸುವ  ಮುನ್ನವೇ ಇದೀಗ ಜಿಲ್ಲೆಯಲ್ಲಿ  ಮತ್ತೊಬ್ಬ ರೌಡಿ ಶೀಟರ್ ಯುವಕನನ್ನು  ನಿನ್ನೆ ಸಂಜೆ  ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿ  ಸುಮಂತ್(22) ಅಲಿಯಾಸ್ ಕುಳ್ಳಿಯಾಗಿದ್ದು, ಈತ  ಸ್ವರ್ಣಸಂದ್ರ ಬಡಾವಣೆಯ ವಾಸವಾಗಿದ್ದ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ರೌಡಿಶೀಟರ್ ವ್ಯಕ್ತಿ ಆಗಿದ್ದ ಈತ, ನಗರದಲ್ಲಿ ಮನೆ ಮನೆಗೆ ಹಾಲು ಹಾಕುವ ಕೆಲಸ ಮಾಡ್ತಿದ್ದ.  ಸಂಜೆ ಹಾಲು ಹಾಕುವ ವೇಳೆ ಗುತ್ತಲಿನ‌ ಬಸವಗುಡಿ ಬಡಾವಣೆಯ ಬಳಿ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿ ಪರಾರಿಯಾಗಿದೆ.

ಪಂಚಾಯತ್​ ಅಧಿಕಾರಿಗಳ ನಿರ್ಲಕ್ಷ್ಯ; ಪ್ರಧಾನಿ ಮೋದಿ ಸ್ಪೂರ್ತಿ ಪಡೆದು ಚರಂಡಿ ಸ್ವಚ್ಛತೆಗಿಳಿದ ಮಕ್ಕಳು

ಇನ್ನು ಈತ ಹೆದ್ದಾರಿಯ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಅಲ್ಲದೇ ಈತ ನಗರದಲ್ಲಿ ರೌಡಿಸಂ ಮಾಡ್ತಾ ಬಾರ್​ಗಳಲ್ಲಿ ಹೆದರಿಸಿ  ಮದ್ಯ ಸೇವಿಸಿ ಪುಡಿ ರೌಡಿಗಳಿಗೆ ಬೆದರಿಸಿ ಹಣ  ವಸೂಲಿ ಮಾಡ್ತಿದ್ದ ಎಂದು ಹೇಳಲಾಗ್ತಿದೆ. ಅಲ್ಲದೇ ಇತ್ತೀಚೆಗೆ ಯುವತಿಯನ್ನು ಪ್ರೀತಿಸಿ ಕರೆದೊಯ್ದಿದ್ದ ಕಾರಣ ಈತನ ವಿರುದ್ದ ಬೆಂಗಳೂರಿನ ಠಾಣೆಯೊಂದರಲ್ಲಿ ಯುವತಿ ಅಪಹರಣ  ಪ್ರಕರಣ ದಾಖಲಾಗಿತ್ತು. ಮದುವೆ ಬಳಿಕ ಈತ ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದು, ಅಲ್ಲಿ ಕೆಲಸ ಬಿಟ್ಟ ಮೇಲೆ  ಹಸುಗಳನ್ನು ಸಾಕುತ್ತಾ, ನಗರದಲ್ಲಿ ಮನೆ ಮನೆಗೆ ಹಾಲು ಹಾಕ್ತಾ ಜೀವನ ಸಾಗಿಸುವ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದಷ್ಟೆ ಕೆಲ ರೌಡಿ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ದ್ವೇಷದ ಕಾರಣದಿಂದಲೇ ಈತನ ಕೊಲೆಯಾಗಿದೆ ಎನ್ನಲಾಗಿದೆ. ನಿನ್ನೆ ಸಂಜೆ ಹಾಲು ಹಾಕುವ ವೇಳೆ ಬೈಕ್ ನಲ್ಲಿ ಬಂದಿದ್ದ ನಾಲ್ಕೈದು ಜನ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.

ಒಟ್ಟಾರೆ  ಘಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳು ಕೃತ್ಯ ಎಸಗಿ ಬಿಟ್ಟು ಹೋಗಿದ್ದ ಬೈಕ್ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ‌. ಈ ಸಂಬಂಧ  ಪ್ರಕರಣ ದಾಖಲಿಸಿ ಕೊಂಡಿರುವ ಪೂರ್ವ ಠಾಣೆಯ ಪೊಲೀಸರು‌  ಕೃತ್ಯ ಎಸಗಿದ ಆರೋಪಿಗಳ ಮಾಹಿತಿ ಕಲೆ ಹಾಕಿ ಬಂಧನಕ್ಕೆ ಬಲೆ ಬೀಸಿದ್ದಾರೆ.
Published by:Latha CG
First published: