ದಾವಣಗೆರೆ: ಕಳೆದ ಕೆಲ ತಿಂಗಳ ಹಿಂದೆ ರೌಡಿ ಶೀಟರ್ಗಳಾದ (Rowdy Shetter) ಸೈಲೆಂಟ್ ಸುನೀಲ (Silent Sunil), ಫೈಟರ್ ರವಿ ಮತ್ತು ಬೆತ್ತನಗೆರೆ ಶಂಕರ್ (Bettanagere Shankar) ರಾಜ್ಯ ರಾಜಕಾರಣದಲ್ಲಿ (Karnataka Politics) ಸದ್ದು ಮಾಡಿದ್ದರು. ಇಬ್ಬರು ಬಿಜೆಪಿಯೊಂದಿಗೆ ಗುರುತಿಸಿಕೊಂಡು, ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದರು. ಇಬ್ಬರ ರಾಜಕೀಯ ಪ್ರವೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಬ್ಬ ರೌಡಿ ಶೀಟರ್ ಸದ್ದಿಲ್ಲದೇ ವಿಧಾನಸಭಾ ಚುನಾವಣೆ (Assembly Election 2023) ಟಿಕೆಟ್ ಪಡೆದುಕೊಳ್ಳಲು ಮುಂದಾಗಿದ್ದಾನೆ. ತನಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಬೇಕು ಬಿಜೆಪಿ ಮುಖಂಡರನ್ನು ಭೇಟಿಯಾಗಿ ಮನವಿ ಸಹ ಸಲ್ಲಿಸಿದ್ದಾನೆ.
ದಾವಣಗೆರೆ ಉತ್ತರ ಕ್ಷೇತ್ರದ (Davanagere North Constituency) ಟಿಕೆಟ್ ನೀಡುವಂತೆ ರೌಡಿ ಶೀಟರ್ ಜೆ.ಎನ್.ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನ (Rowdysheeter JN Srinivas) ಮನವಿ ಮಾಡಿದ್ದಾನೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗನಗೌಡರಿಗೆ ಜೆ.ಎನ್.ಶ್ರೀನಿವಾಸ್ ಮನವಿ ಸಲ್ಲಿಸಿದ್ದಾನೆ.
ಟಿಕೆಟ್ಗೆ ಮನವಿ
ಮೂರು ಬಾರಿ ಪಾಲಿಕೆ ಸದಸ್ಯ, ಬಾಡಿ ಬೀಲ್ಡಿಂಗ್ ನಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಆಗಿರುವ ಶ್ರೀನಿವಾಸ್, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾನೆ. ಸಮಾಜ ಸೇವೆ ಮಾಡಿದ್ದೇನೆ ನನಗೆ ಟಿಕೆಟ್ ನೀಡಿ ಎಂದು ರೌಡಿ ಶೀಟರ್ ಶ್ರೀನಿವಾಸ್ ಹೇಳಿದ್ದಾನೆ.
ಒಟ್ಟು 14 ಕೇಸ್ಗಳು ದಾಖಲು
ಕಳೆದ ತಿಂಗಳು ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಆ್ಯಕ್ಟಿವ್ ರೌಡಿಗಳ ಪರೇಡ್ ನಡೆಸಲಾಗಿತ್ತು. ಈ ವೇಳೆ ರೌಡಿ ಪರೇಡ್ ನಲ್ಲಿ ಜೆಎನ್ ಶ್ರೀನಿವಾಸ್ ಭಾಗಿಯಾಗಿದ್ದನು. ಈತನ ಮೇಲೆ ಬೆದರಿಕೆ, ಕೊಲೆ, ಸೇರಿ ಇತರೆ 14 ಕೇಸ್ ಗಳು ದಾಖಲಾಗಿವೆ. ಹಾಲಿ ಪಾಲಿಕೆ ಸದಸ್ಯ ಆಗಿರೋ ಶ್ರೀನಿವಾಸ್ ಮೂರು ಬಾರಿ ಪಾಲಿಕೆ ಚುನಾವಣೆ ಗೆದ್ದಿದ್ದಾನೆ.
‘ಕುಮಾರಕೃಪಾ’ ಅಕ್ರಮಗಳ ಕೂಪ
ಕುಮಾರಕೃಪ ಸರ್ಕಾರಿ ಬಂಗಲೆ (Kumarakrupa ದುರುಪಯೋಗದ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ (Navyashre, Social Activist) ಸುದ್ದಿಗೋಷ್ಠಿ ನಡೆಸಿದ್ದಾರೆ. ಕೆಲ ತಿಂಗಳ ಹಿಂದೆ ನನ್ನ ಖಾಸಗಿ ವಿಡಿಯೋ ವೈರಲ್ (Video Viral) ಆಗಿತ್ತು. ಕಳೆದ ಎಂಟು ವರ್ಷಗಳಿಂದ ನವ್ಯ ಫೌಂಡೇಷನ್ ನಡೆಸುತ್ತಿದ್ದೇನೆ. ನಾನು ಗೌರವದ ಕುಟುಂಬದಿಂದ ಬಂದಿದ್ದೇನೆ. ನಾನು ವಿದೇಶದಲ್ಲಿ ಇರುವಾಗ ಖಾಸಗಿ ವಿಡಿಯೋ ವೈರಲ್ ಆಯ್ತು ಎಂದಿದ್ದಾರೆ.
ರಾಜಕುಮಾರ್ ಟಾಕ್ಲೆ ನನ್ನ ಮೇಲೆ ಕೇಸ್ ಮಾಡಿದ್ರು. ಹಣಕ್ಕೆ ಬೇಡಿಕೆ ಇಟ್ಟಿದ್ದೆ ಅಂತ ದೂರು ನೀಡಿದ್ರು. ಆದರೆ, ಜನರ ಹಣದಲ್ಲಿ ಕಟ್ಟಿರೋ ಕುಮಾರಕೃಪ ಸರ್ಕಾರಿ ಬಂಗಲೆ, ಇವತ್ತು ದಂಧೆ ಮಾಡೋರ ಅಡ್ಡೆ ಆಗಿದೆ. ನಾನು ಸರ್ಕಾರಿ ಉದ್ಯೋಗಿ ಅಲ್ಲ. ಆದ್ರೂ ಒಂದು ವರ್ಷ ಅಲ್ಲಿದ್ದೆ. ಅಲ್ಲಿರೋ ಸಿಸಿ ಕ್ಯಾಮೆರಾಗಳು ಸರಿಯಾಗಿ ವರ್ಕ್ ಆಗಲ್ಲ ಎಂದು ನವ್ಯಶ್ರೀ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕಹಲ್ಲೆ
ಬಿಜೆಪಿ ಮುಖಂಡ ವೀರಣ್ಣ ಹಲಗೆ ಮೇಲೆ ಯುವಕರ ಗುಂಪೊಂದು ಮಾರಣಾಂತಿಕ (Attack on BJP Leader) ಹಲ್ಲೆ ನಡೆಸಿದೆ. ಈ ಘಟನೆ ಬೀದರ್ನ ಬಸವ ಕಲ್ಯಾಣದ (Basava Kalayana, Bidar) ಸಸ್ತಾಪೂರ ಬಂಗ್ಲಾದ ಪಂಜಾಬಿ ಧಾಬಾದಲ್ಲಿ ನಡೆದಿದೆ.
ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?
ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡ ವೀರಣ್ಣ ಹಲಗೆ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ