• Home
 • »
 • News
 • »
 • state
 • »
 • Fighter Ravi: ಸೈಲೆಂಟ್​ ಸುನೀಲ ಬೆನ್ನಲ್ಲೇ ಮತ್ತೊಬ್ಬ ರೌಡಿಶೀಟರ್​ ಬಿಜೆಪಿ ಸೇರ್ಪಡೆ, ಕಮಲ ಹಿಡಿದ ಫೈಟರ್​ ರವಿ

Fighter Ravi: ಸೈಲೆಂಟ್​ ಸುನೀಲ ಬೆನ್ನಲ್ಲೇ ಮತ್ತೊಬ್ಬ ರೌಡಿಶೀಟರ್​ ಬಿಜೆಪಿ ಸೇರ್ಪಡೆ, ಕಮಲ ಹಿಡಿದ ಫೈಟರ್​ ರವಿ

ಫೈಟರ್​ ರವಿ

ಫೈಟರ್​ ರವಿ

ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೇಶ್ವರ್ ಸಮ್ಮುಖದಲ್ಲಿ ರೌಡಿಶೀಟರ್​ ಫೈಟರ್ ರವಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು (ನ.28): ರೌಡಿಶೀಟರ್ ಸೈಲೆಂಟ್ ಸುನೀಲ (Silent Sunil) ಬಿಜೆಪಿ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ಬೆಂಗಳೂರು ನಗರದ ವೈಯಾಲಿಕಾವಲ್ ರೌಡಿಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ (Fighter Ravi) ಕೂಡ ಕಮಲ ಹಿಡಿದಿದ್ದಾರೆ. ಈತ ಕ್ರಿಕೆಟ್ ಬುಕ್ಕಿಯಾಗಿದ್ದು ಅನೇಕ ಕಾನೂನು ಬಾಹಿರ ಚಟುವಟಕೆಯಲ್ಲಿ (Illegal Activity) ಭಾಗಿಯಾಗಿದ್ದಾನೆ. ಈತ ನಾಗಮಂಗಲ (Nagamangala) ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ (Ticket) ಬಯಸಿ ಬಿಜೆಪಿ ಪಕ್ಷಕ್ಕೆ (BJP Party) ಸೇರ್ಪಡೆಯಾಗಿದ್ದಾನೆ ಎನ್ನಲಾಗಿದೆ. ರೌಡಿಶೀಟರ್ ಗಳು, ಬುಕ್ಕಿಗಳು ಬಿಜೆಪಿ ಪಕ್ಷ ಸೇರುತ್ತಿರುವುದರಿಂದ ಬಿಜೆಪಿ ಜನರಿಗೆ ಏನೂ ಸಂದೇಶ ಕೊಡಲು ಹೊರಟಿದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. 


ರೌಡಿಶೀಟರ್ ಸುನೀಲ ರಕ್ತದಾನ ಶಿಬಿರ


ಇನ್ನು ನಿನ್ನೆ ತಾನೇ ಭಾರತೀಯ ಜನತಾ ಪಕ್ಷದ ಇಬ್ಬರು ಎಂಪಿಗಳಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಹಾಗೂ ಶಾಸಕ ಉದಯ್ ಗರುಡಾಚಾರ್ ಸಮ್ಮುಖದಲ್ಲಿ ರೌಡಿಶೀಟರ್ ಸುನೀಲ ರಕ್ತದಾನ ಶಿಬಿರ ಮಾಡಿದ್ದಾನೆ.


Rowdy sheeter fighter ravi joined bjp today pvn
ಫೈಟರ್​ ರವಿ


BJP ನಾಯಕರ ಸಮ್ಮುಖದಲ್ಲಿ ಸೇರ್ಪಡೆ


ಇಂದು ಬುಕ್ಕಿ, ರೌಡಿಶೀಟರ್​ ಫೈಟರ್ ರವಿ ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೇಶ್ವರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


ರಾಜಕೀಯ ಪ್ರವೇಶಕ್ಕೆ ಬಿಜೆಪಿ ನಾಯಕರ ಸಾಥ್​


ಬೆಂಗಳೂರು ಭೂಗತ ಲೋಕದ ಮಾಜಿ ರೌಡಿ ಸೈಲೆಂಟ್ ಸುನೀಲ್ (Silent Sunil) ರಾಜಕೀಯ ಪ್ರವೇಶಕ್ಕೆ (Politics Enters) ಬಿಜೆಪಿ ನಾಯಕರು (BJP Leaders) ಶುಭಕೋರಿದರು. ಸಂಸದರಾದ ಪಿಸಿ ಮೋಹನ್ (PC Mohan), ತೇಜಸ್ವಿ ಸೂರ್ಯ (Tejaswi Surya), ಶಾಸಕರಾದ ಉದಯ್ ಗರುಡ ಚಾರ್ (MLA Uday Garudachar) ಹಾಗೂ ಎನ್ ಆರ್ ರಮೇಶ್ (NR Ramesh) ಶುಭ ಹಾರೈಸಿದರು.


ಬೃಹತ್ ರಕ್ತದಾನ ಶಿಬಿರ ಆಯೋಜನೆ


ಇಂದು ಚಾಮರಾಜಪೇಟೆಯಲ್ಲಿ (Chamarajapete) ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಬಿಜೆಪಿ ನಾಯಕರು ಸೈಲೆಂಟ್ ಸುನೀಲ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದರು.


ಬಿಜೆಪಿ ಕಾರ್ಯಕ್ರಮದಲ್ಲಿ ಸೈಲೆಂಟ್​ ಸುನೀಲ 


ಇಂದು ಬಿಜೆಪಿ ನಾಯಕರು ಶಿಬಿರದಲ್ಲಿ ಭಾಗಿಯಾಗುವ ಮೂಲಕ ಸೈಲೆಂಟ್ ಸುನೀಲ್ ಚಾಮರಾಜಪೇಟೆಯ ಕಮಲ ಅಭ್ಯರ್ಥಿ ಎಂಬ ಸಂದೇಶ ನೀಡಿದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

 ನಿಮ್ಮ ಹಾರೈಕೆ ನನ್ನ ಮೇಲಿರಲಿ


ಈ ವೇಳೆ ಮಾತನಾಡಿದ ಸೈಲೆಂಟ್ ಸುನೀಲ್ ಕುಮಾರ್, ನಾನು ನಿಮ್ಮ ಮಧ್ಯದಲ್ಲೇ ಇರ್ತೇನೆ. ನಾನು ಇದೇ ರೀತಿ ಮುಂದೆಯೂ ನನ್ನ ಕೈಲಾದಷ್ಟು ಸಹಾಯ ಮಾಡ್ಕೊಂಡು ಹೋಗ್ತೀನಿ. ನಿಮ್ಮ ಸಹಾಯ ನನ್ನ ಮೇಲೆ ಹೀಗೆ ಇರಲಿ ಎಂದ ಮನವಿ ಮಾಡಿಕೊಂಡರು.

ನಾನು ಜನರಿಗೆ ಸಹಾಯವಾಗಲು ಸಮಾಜ ಸೇವೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಬೆಂಗಳೂರಿನಾದ್ಯಂತ ಹೀಗೆ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಮುಂದೆ ರಾಜಕೀಯ ಪ್ರವೇಶಿಸುವ ಇಚ್ಛೆಯೂ ಇದೆ. ಈ ಬಗ್ಗೆ ಈ ಸಮಯದಲ್ಲಿ ಹೆಚ್ಚು ಮಾತನಾಡಲ್ಲ ಎಂದು ಮಾತು ಮುಗಿಸಿದರು.


Published by:ಪಾವನ ಎಚ್ ಎಸ್
First published: