ಗೂಂಡಾ ಕಾರ್ಪೊರೇಟರ್​ ಕಾಲರ್​ ಪಟ್ಟಿ ಹಿಡಿದು ನಡು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿದ ಪೊಲೀಸರು


Updated:May 13, 2018, 4:11 PM IST
ಗೂಂಡಾ ಕಾರ್ಪೊರೇಟರ್​ ಕಾಲರ್​ ಪಟ್ಟಿ ಹಿಡಿದು ನಡು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿದ ಪೊಲೀಸರು

Updated: May 13, 2018, 4:11 PM IST
-ಹೆಚ್​.ಎಂಪಿ ಕುಮಾರ್​, ನ್ಯೂಸ್​18 ಕನ್ನಡ

ದಾವಣಗೆರೆ(ಮೇ.13): ಕಾಂಗ್ರೆಸ್​ ಕಾರ್ಪೊರೇಟರ್​​, ರೌಡಿ ಶೀಟರ್​ನನ್ನು ಪೊಲೀಸರು ಬಂಧಿಸಿ ನಡು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಿನ್ನೆ ನಗರದಲ್ಲಿ ಮತದಾನ ಮಾಡುವ ವೇಳೆ ಬೂತ್​ ಬಳಿ ಬಿಜೆಪಿ ಕಾರ್ಯಕರ್ತರ ಮೇಲೆ ಶ್ರೀನಿವಾಸ್​ ಎಂಬಾತ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಕುರಿತು ದಾವಣಗೆರೆ ಕೆಟಿಜೆ ನಗರ ಪೊಲೀಸ್​ ಠಾಣೆಯಲ್ಲಿ ಮಾಜಿ ಸಚಿವ ರವೀಂದ್ರನಾಥ್​​ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಶ್ರೀನಿವಾಸ್​ ಎಂಬ ಕಾರ್ಪೊರೇಟರ್​ನನ್ನು ಬಂಧಿಸಿದ್ದಾರೆ. ಬಂದಿಸುವ ಮುನ್ನಾ ಆತನನ್ನು ಕಾಲರ್​ ಪಟ್ಟಿ ಹಿಡಿದು ಪೊಲೀಸರು, ನಡು ರಸ್ತೆಯಲ್ಲೇ ಮೆರವಣಿಗೆ ಮಾಡಿದ್ದಾರೆ.

ಇನ್ನು ಕೈ-ಕಾಲು ಕಟ್ಟಿ ಕಾಲರ್​ ಪಟ್ಟಿ ಹಿಡಿದು, ಸ್ಷೇಷನ್​ಗೆ ರಸ್ತೆಯುದ್ದಕ್ಕೂ ಎಳೆದಾಡುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರಯಾಗಿದ್ದು, ಸಾಮಾಜಿಕ ಜಾಲಥಾಣದಲ್ಲಿ ಭಾರೀ ವೈರಲ್​ ಆಗಿದೆ. ಈತನ ನಡೆಗೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಕಾರ್ಯವನ್ನು ಸ್ವಾಗತಿಸಿದ್ದಾರೆ.
First published:May 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ