ಆನೇಕಲ್​​: ಡಾನ್ ಆಗಲು ಮಚ್ಚು ಹಿಡಿದವ ನಡು ಬೀದಿಯಲ್ಲಿ ಹೆಣವಾದ ಕಥೆ

ಇನ್ನೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅತ್ತಿಬೆಲೆ ಪೊಲೀಸರು ಕೆಲವೇ ದಿನಗಳಲ್ಲಿ ಸುನೀಲ ಅಂಡ್ ಗ್ಯಾಂಗ್ ನನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಈ ನಡುವೆ ಸುನೀಲನ ಹೆಸರು ಆನೇಕಲ್ ರೌಡಿಸಂ ಫೀಲ್ಡ್​​​ನಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತದೆ. ಸುನೀಲ ಜೈಲಿನಲ್ಲಿದ್ದುಕೊಂಡೆ ತನ್ನ ಹುಡುಗರಿಂದ ರೋಲ್ ಕಾಲ್ ಹಫ್ತಾ ವಸೂಲಿ ಶುರುವಿಟ್ಟುಕೊಂಡಿರುತ್ತಾನೆ.

news18-kannada
Updated:August 1, 2020, 7:00 PM IST
ಆನೇಕಲ್​​: ಡಾನ್ ಆಗಲು ಮಚ್ಚು ಹಿಡಿದವ ನಡು ಬೀದಿಯಲ್ಲಿ ಹೆಣವಾದ ಕಥೆ
ಪ್ರಾತಿನಿಧಿಕ ಚಿತ್ರ
  • Share this:
ಆನೇಕಲ್(ಆ.01): ಅವ್ನು ಒಬ್ಬ ಸಾಮಾನ್ಯ ಪೋಸ್ಟ್ ಮ್ಯಾನ್ ಮಗ. ಅಪ್ಪನಂತೆಯೆ ತಾನೂ ಸಹ ಸರ್ಕಾರಿ ನೌಕರಿ ಪಡೆಯಬೇಕು ಎಂದುಕೊಂಡಿದ್ದರೆ ಇಂದು ಎಲ್ಲರಂತೆ ಅವನೂ ಸಹ ಉತ್ತಮ ಜೀವನ ನಡೆಸುತ್ತಿದ್ದ. ಆದ್ರೆ ಆತ ಆಯ್ಕೆ ಮಾಡಿಕೊಂಡಿದ್ದು ಮಾತ್ರ ರೌಡಿಸಂ ಫೀಲ್ಡ್. ರೌಡಿಸಂ ಫೀಲ್ಡ್​​ನಲ್ಲಿ ಡಾನ್ ಆಗಲು ಹೋಗಿ ಆತ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಅಷ್ಟಕ್ಕೂ ರೌಡಿಸಂ ಫೀಲ್ಡ್​ನಲ್ಲಿ ಹವಾ ಮೇಂಟೈನ್ ಮಾಡಲು ಹೋಗಿ ಫಿನಿಷ್ ಆದ ಆ ನಟೋರಿಯಸ್ ರೌಡಿಯಾದರೂ ಯಾರೂ ಅಂತೀರಾ ಈ ಸ್ಟೋರಿ ಒಮ್ಮೆ ಓದಿ.

ನಿನ್ನೆ ರಾತ್ರಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬೀದಿ ಹೆಣವಾಗಿ ಹೋದ ರೌಡಿ ಶೀಟರ್ ಸುನೀಲ. ತಾನು ರೌಡಿಸಂ ಫೀಲ್ಡ್​ನಲ್ಲಿ ಪಂಟರ್ ಆಗಬೇಕು ಎಂದುಕೊಂಡು ಮಚ್ಚು ಹಿಡಿದವನು ಮಚ್ಚನಿಂದಲೇ ಮಟಾಷ್ ಆಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೆಸ್ತಮಾನಹಳ್ಳಿ ವಾಸಿಯಾದ ಸುನೀಲ ಸಿನಿಮಾಗಳ ಪ್ರಭಾವವೋ ಅಥವಾ ಹುಚ್ಚು ಭ್ರಮೆಯೋ ಗೊತ್ತಿಲ್ಲ ಸಣ್ಣ ವಯಸ್ಸಿಗೆ ಅಪರಾಧ ಲೋಕಕ್ಕೆ ಎಂಟ್ರಿ‌ ಕೊಟ್ಟಿದ್ದ.

ತನ್ನ ಏರಿಯಾದಲ್ಲಿ ತಾನೇ ಹವಾ ಮೇಂಟೈನ್ ಮಾಡಬೇಕು ಎಂದು ಒಂದಷ್ಟು ಹುಡುಗರನ್ನು ಜೊತೆಯಲ್ಲಿಟ್ಟುಕೊಂಡು ಸಣ್ಣ ಪುಟ್ಟ ಡೀಲ್ ಮಾಡಲು ಶುರುವಿಟ್ಟುಕೊಂಡಿದ್ದ. ಈ ವೇಳೆ ಫೈನಾನ್ಸ್ ವಿಚಾರವಾಗಿ ಮತ್ತೊಬ್ಬ ರೌಡಿ ಶೀಟರ್ ಜಯಂತ್ ಜೊತೆ ಸುನೀಲನಿಗೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದ್ದು, ಜಯಂತ್ ಸಹ ಸುನೀಲನಿಗೆ ನನ್ನ ತಂಟೆಗೆ ಬಂದ್ರೆ ಹುಷಾರ್ ಪರಿಣಾಮ‌ ನೆಟ್ಟಗಿರುವುದಿಲ್ಲ ಎಂದು ಬುಸುಗುಟ್ಟಿದ್ದ ಎಂಬ ಮಾಹಿತಿ ಇದೆ.

ಇದರಿಂದ ಸುನೀಲನ ಪಿತ್ತ ನೆತ್ತಿಗೇರಿಸಿತ್ತು. ಹಾಗಾಗಿ 2018 ಜುಲೈ 1ನೇ ತಾರೀಖು ಸಂಜೆ ರಾಜಿ ನೆಪದಲ್ಲಿ ಆನೇಕಲ್ - ಅತ್ತಿಬೆಲೆ ರಸ್ತೆಯ ನಿರ್ಜನ ಪ್ರದೇಶಕ್ಕೆ ಜಯಂತ್​​ನನ್ನು ಕರೆಸಿಕೊಂಡು ಕಂಠಪೂರ್ತಿ ಕುಡಿಸಿದ ಸುನೀಲ್ ಅಂಡ್ ಟೀಮ್ ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ನೀಲಗಿರಿ ತೋಪಿನಲ್ಲಿ ಬರ್ಬರವಾಗಿ ಕೊಂದು ಎಸೆದು ಹೋಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.

ಅಲ್ಲದೆ ಸುನೀಲ ಅಂಡ್ ಗ್ಯಾಂಗ್ ಯಾವ ಪರಿ ಜಯಂತ್ ದೇಹದ ಮೇಲೆ ದಾಳಿ ಮಾಡಿತ್ತು ಎಂದರೆ ಎದೆ ಮತ್ತು ಹೊಟ್ಟೆ ಬಾಗಕ್ಕೆ ಬರೋಬ್ಬರಿ ಮೂವತ್ತಕ್ಕೂ ಅಧಿಕ ಬಾರಿ ಇರಿಯಲಾಗಿತ್ತು. ಜೊತೆಗೆ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಗಿತ್ತು.

ಇನ್ನೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅತ್ತಿಬೆಲೆ ಪೊಲೀಸರು ಕೆಲವೇ ದಿನಗಳಲ್ಲಿ ಸುನೀಲ ಅಂಡ್ ಗ್ಯಾಂಗ್ ನನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಈ ನಡುವೆ ಸುನೀಲನ ಹೆಸರು ಆನೇಕಲ್ ರೌಡಿಸಂ ಫೀಲ್ಡ್​​​ನಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತದೆ. ಸುನೀಲ ಜೈಲಿನಲ್ಲಿದ್ದುಕೊಂಡೆ ತನ್ನ ಹುಡುಗರಿಂದ ರೋಲ್ ಕಾಲ್ ಹಫ್ತಾ ವಸೂಲಿ ಶುರುವಿಟ್ಟುಕೊಂಡಿರುತ್ತಾನೆ.

ಅದೊಂದು ದಿನ ಆನೇಕಲ್ ಪಟ್ಟಣದ ದೇವರಾಜ್ ಎಂಬುವವನು ಸುನೀಲನ ಹುಡುಗರ ಬಳಿಯೇ ನಿಮ್ಮ ಬಾಸ್ ಅದ್ಯಾವ ಪಂಟರ್ ಒಂದು ಕೊಲೆ ಮಾಡಿದ್ರೆ ಡಾನ್ ಆಗ್ಬಿಡ್ತಾನಾ. ನಮ್ಮ ಬಳಿ ನಿಮ್ಮ ಬಾಸ್ ಹವಾ ನಡೆಯುವುದಿಲ್ಲ ಅಂತಾ ಅವಾಜ್ ಹಾಕ್ತಾನೆ. ಈ ವಿಚಾರ ಜೈಲಿನಲ್ಲಿರುವ ಸುನೀಲನ ಕಿವಿಗೆ ಬೀಳುತ್ತೆ ಅಷ್ಟೇ 2019 ಮಾರ್ಚ್ 4 ರಂದು ಮಾತನಾಡುವ ನೆಪದಲ್ಲಿ ಬಡಾವಣೆಯೊಂದರ ನಿರ್ಜನ ಪ್ರದೇಶಕ್ಕೆ ದೇವರಾಜನನ್ನು ಕರೆಸಿಕೊಂಡ ಸುನೀಲನ ಪಟಾಲಂ ಅಟ್ಟಾಡಿಸಿಕೊಂಡು ಅತ್ಯಂತ ಭೀಕರವಾಗಿ ಕೊಲೆ ಮಾಡುತ್ತಾರೆ.ಎರಡು ಕೊಲೆ ಬಳಿಕ ತನ್ನ ಹವಾ ಜೋರಾಗಿದೆ ಎಂದುಕೊಂಡ ಸುನೀಲ ಆರು ತಿಂಗಳ ಹಿಂದೆ ಜಾಮೀನು ಪಡೆದುಕೊಂಡು ಹೊರ ಬರುತ್ತಾನೆ. ತನ್ನ ಪಟಾಲಂ ಜೊತೆ ಲ್ಯಾಂಡ್ ಡೀಲ್, ಸೆಟಲ್ಮೆಂಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿ ಹೀಗೆ ಒಂದೊಂದೇ ದಂಧೆ ಶುರುವಿಟ್ಟುಕೊಳ್ಳುತ್ತಾನೆ. ಸುನೀಲನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರು ಸಹ ಅತಿಯಾಗುತ್ತಿದ್ದಂತೆ ಇವನ ಬೆನ್ನು ಬೀಳುತ್ತಾರೆ.

ಪೊಲೀಸರು ಹುಡುಕುತ್ತಿರುವ ವಿಚಾರ ತಿಳಿದ ಸುನೀಲ ತಲೆ ಮರೆಸಿಕೊಳ್ಳುತ್ತಾನೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಸುನೀಲನ ಚಲನವಲನಗಳ ವಿರೋಧಿ ಬಣಗಳು ಮಾತ್ರ ಹದ್ದಿನ ಕಣ್ಣಿಟ್ಟಿದ್ದು, ನಿನ್ನೆ ರಾತ್ರಿ ಪಕ್ಕ ವಾಚ್ ಮಾಡಿ ಸುನೀಲನ ಕಥೆ ಮುಗಿಸಿದ್ದಾರೆ.

ಇದನ್ನೂ ಓದಿ: Heavy Rain: ಕೋವಿಡ್​​-19 ಭೀತಿ ನಡುವೆಯೇ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ

ಒಟ್ನಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು. ಹಾಗಾಗಿ ರೌಡಿಸಂ ಫೀಲ್ಡ್​ನಲ್ಲಿ ಮೆರೆಯಲು ಹೋಗಿ ಸುನೀಲ ಅತ್ಯಂತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಈ ಘಟನೆ ಅಪರಾಧ ಕೃತ್ಯವೆಸಗುವವರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಇಂದು ಸುನೀಲ ನಾಳೆ ಸುನೀಲನನ್ನು ಕೊಂದವರು ಸಹ ಹೀಗೆ ಮಚ್ಚು ಹಿಡಿದವರು ಮಚ್ಚಿನಿಂದಲೇ ಸಾವು ಎಂಬುದು ಮತ್ತೊಮ್ಮೆ ಸಾಬೀತು ಆಗಿದೆ.
Published by: Ganesh Nachikethu
First published: August 1, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading