• Home
  • »
  • News
  • »
  • state
  • »
  • Murder: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಎದೆಗೆ ಚಾಕು ಚುಚ್ಚಿ ಕೊಂದ ರೌಡಿ!

Murder: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ಎದೆಗೆ ಚಾಕು ಚುಚ್ಚಿ ಕೊಂದ ರೌಡಿ!

ಪೊಲೀಸರ ವಿರುದ್ಧ ಆಕ್ರೋಶ

ಪೊಲೀಸರ ವಿರುದ್ಧ ಆಕ್ರೋಶ

ಬುದ್ಧಿವಾದ ಹೇಳಿದ್ದ ಯುವಕನ ಜೀವವೇ ಹೋಗಿದೆ. ಪೆಟ್ರೋಲ್ ಕದಿಯಬೇಡ ಅಂತ ಹೇಳಿದವನು ಹೆಣವಾಗಿದ್ದಾನೆ. ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಇದೆಲ್ಲಕ್ಕೂ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಪೊಲೀಸ್ ಠಾಣೆ ಎದುರು ಶವವಿಟ್ಟು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.12): ಬುದ್ಧಿ ಹೇಳಿದ್ದಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಪೆಟ್ರೋಲ್ ಕದಿಯಬೇಡಾ ಅಂತಾ ಹೇಳಿದ್ದನ್ನೇ ನೆಪ ಮಾಡಿಕೊಂಡ ಕೊಲೆಗೈಯಲಾಗಿದೆ. ಪೊಲೀಸರ (Police) ನಿರ್ಲಕ್ಷ್ಯದಿಂದಲೇ ಈ ಕೊಲೆ ನಡೆದಿದೆ ಎಂದು ಮೃತನ ಸಂಬಂಧಿಕರು, ಜಂಗ್ಲಿ ಪೇಟೆ ಜನ ಕಸಬಾ ಪೇಟೆ ಪೊಲೀಸ್ ಠಾಣೆ ಎದುರು ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಪ್ರಸಾದ್ (MLA Prasad) ಅಬ್ಬಯ್ಯ ಮನವೊಲಿಕೆಯ ನಂತರ ಶವ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ.


ಪೊಲೀಸ್ ಠಾಣೆಗೆ ಶವ ತಂದು ಪ್ರತಿಭಟನೆ


ಕೊಲೆಗಡುಕನನ್ನು ಗಲ್ಲಿಗೆ ಏರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದ್ರು. ಪೊಲೀಸರ ನಿರ್ಲಕ್ಷ್ಯದಿಂದ ಜೀವ ಬಲಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಈ ದೃಶ್ಯಗಳು ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಹಳೆ ಹುಬ್ಬಳ್ಳಿಯ ದುರ್ಗದ ಬೈಲ್ ಸರ್ಕಲ್ ಬಳಿ ಕಂಡು ಬಂದಿದೆ. ನಿನ್ನೆ ರಾತ್ರಿ ಸಂತೋಷ ಮುರಗೋಡ ಎಂಬಾತನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಗಾಯಾಳು ಸಂತೋಷ ಮುರಗೋಡನನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಸಂತೋಷ್ ಸಾವನ್ನಪ್ಪಿದ್ದಾನೆ.




ಕೊಲೆ ಆರೋಪಿ ಬಂಧನ


ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಲೆ ಆರೋಪಿ ಜಂಗ್ಲಿಪೇಟೆ ನಿವಾಸಿ ಶಿವಾನಂದ ನಾಯಕನನ್ನು ಬಂಧಿಸಿದ್ದಾರೆ‌. ಪೆಟ್ರೋಲ್ ಕದಿಯಬೇಡ ಅಂತ ಸ್ಥಳೀಯರು ಬುದ್ಧಿವಾದ ಹೇಳಿದ್ದರು. ನಮ್ಮ ಸಹೋದರನೂ ಧ್ವನಿಗೊಡಿಸಿದ್ದ. ಅದೇ ಕಾರಣಕ್ಕೆ ಕೊಲೆಗೈದಿದ್ದಾನೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.


ಪೊಲೀಸರ ನಿರ್ಲಕ್ಷ್ಯದಿಂದ ಕೊಲೆಯಾಗಿದೆ- ಪೋಷಕರ ಆರೋಪ


ಸಂತೋಷ್ ಮುರುಗೋಡ್ ಶವಪರೀಕ್ಷೆಯ ನಂತರ ಮೃತದೇಹವನ್ನು ನೇರವಾಗಿ ಕಸಬಾಪೇಟೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಶವವನ್ನು ಪೊಲೀಸ್ ಠಾಣೆಗೆ ನುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನೂಕಾಟ ನಡೆದಿದೆ. ಪೊಲೀಸರ ನಿರ್ಲಕ್ಷ್ಯದಿಂದ ಕೊಲೆಯಾಗಿದೆ ಎಂದು ಮೃತನ ಸಂಬಂಧಿಗಳ ಆರೋಪಿಸಿದ್ದಾರೆ. ಕೊಲೆ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ.


ರೌಡಿ ವಿರುದ್ಧ ಕ್ರಮಕೈಗೊಳ್ಳದ ಪೊಲೀಸ್​


ರೌಡಿಶೀಟರ್ ಶಿವಾನಂದ ನಾಯ್ಕನ ಉಪಟಳದ ವಿರುದ್ಧ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಲಾಗಿತ್ತು. ಶಿವಾನಂದ ಪೊಲೀಸರ ಚಾಕರಿ ಮಾಡಿಕೊಂಡು ಕಸಬಾಪೇಟೆಯಲ್ಲಿ ಇರುತ್ತಿದ್ದ. ಹೀಗಾಗಿ ಆತನ ವಿರುದ್ಧ ಪೊಲೀಸರು ಕ್ರಮಕೈಗೊಳ್ಳದ ಕಾರಣ ಈಗ ಸಂತೋಷನ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವೇಳೆ ಕಸಬಾಪೇಟ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ನಡೆಯಿತು. ಶಿವಾನಂದ ನಾಯಕ್ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.


ಪೊಲೀಸರ ವಿರುದ್ಧ ಜನರ ಆಕ್ರೋಶ


ಶಿವಾನಂದ ನಾಯ್ಕ ಮತ್ತು ಮೃತ ಸಂತೋಷ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಹಲವು ಬಾರಿ ಈ ಕುರಿತು ಜಗಳ ಕೂಡ ನಡೆದಿತ್ತು‌. ರೌಡಿಶೀಟರ್ ಆಗಿರುವ ಶಿವಾನಂದ ನಾಯ್ಕ ಜನರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವಿಷಯಗಳನ್ನು ಕಸಬಾಪೇಟ ಪೊಲೀಸರ ಗಮನಕ್ಕೆ ತಂದಾಗಲೇ ಕ್ರಮಕೈಗೊಂಡಿದ್ದರೆ ಒಂದು ಜೀವ ಹೋಗುತ್ತಿರಲಿಲ್ಲ ಅನ್ನೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Assembly Election: ಚುನಾವಣೆ ಟಿಕೆಟ್​ ಘೋಷಣೆಗೂ ಮುನ್ನವೇ ಕುಕ್ಕರ್ ಸೀಟಿ ಸದ್ದು; ಛಬ್ಬಿ ಬೆಂಬಲಿಗರಿಂದ ಭರಪೂರ ಗಿಫ್ಟ್!


ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿವುದಾಗಿ ಜನರ ಮನವೊಲಿಸಿದ್ದಾರೆ. ನಂತರ ಶವ ತೆಗೆದುಕೊಂಡು ಪ್ರತಿಭಟನಾಕಾರರು ವಾಪಸ್ಸಾಗಿದ್ದಾರೆ. ಈ ಕುರಿತು ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:ಪಾವನ ಎಚ್ ಎಸ್
First published: