Panchamasali: ಪಂಚಮಸಾಲಿಯ ನಾಲ್ಕನೇ ಪೀಠದ ರಚನೆಗೆ ಕೊಪ್ಪಳದಲ್ಲಿ ಸಿದ್ಧತೆ

ರಾಜ್ಯದಲ್ಲಿ ಈಗ ಪಂಚಮಸಾಲಿ ಸಮಾಜ(Panchamasali Community)ದಲ್ಲಿ ಮೂರನೇ ಪೀಠ ಸ್ಥಾಪನೆ  ಚರ್ಚೆಗಳು ನಡೆಯುತ್ತಿವೆ.  ಈ ಮಧ್ಯೆ , ಇದೀಗ  ನಾಲ್ಕನೇ ಪೀಠದ (Fourth Peetha) ಸ್ಥಾಪನೆಯಾಗುವ ಸರದಿ ಆರಂಭವಾಗಿದೆ.

ಪಂಚಮಸಾಲಿ ಮಹಾಸಭಾದ ಉಪಾಧ್ಯಕ್ಷೆ ಕಿಶೋರಿ ಬೂದನೂರು

ಪಂಚಮಸಾಲಿ ಮಹಾಸಭಾದ ಉಪಾಧ್ಯಕ್ಷೆ ಕಿಶೋರಿ ಬೂದನೂರು

  • Share this:
ಕೊಪ್ಪಳ: ರಾಜ್ಯದಲ್ಲಿ ಈಗ ಪಂಚಮಸಾಲಿ ಸಮಾಜ(Panchamasali Community)ದಲ್ಲಿ ಮೂರನೇ ಪೀಠ ಸ್ಥಾಪನೆ  ಚರ್ಚೆಗಳು ನಡೆಯುತ್ತಿವೆ.  ಈ ಮಧ್ಯೆ , ಇದೀಗ  ನಾಲ್ಕನೇ ಪೀಠದ (Fourth Peetha) ಸ್ಥಾಪನೆಯಾಗುವ ಸರದಿ ಆರಂಭವಾಗಿದೆ. ನಾಲ್ಕನೇಯ ಪೀಠವು ಮಹಿಳಾ ಪೀಠ(Women Peetha)ವಾಗಲಿದೆ. ಕಿತ್ತೂರು ಚೆನ್ನಮ್ಮ ಹೆಸರಿನಲ್ಲಿ ಸಮಾಜ ಸಂಘಟನೆಯಾಗುತ್ತಿದೆ. ಆದರೆ ಸಮಾಜದ ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಕೊಪ್ಪಳದಲ್ಲಿ ಪಂಚಮಸಾಲಿ ಸಮಾಜದ (Koppal Panchamasali Community) ನಾಲ್ಕನೇಯ ಪೀಠ ಸ್ಥಾಪನೆಯಾಗಲಿದೆ. ಇದಕ್ಕೆ ಪಂಚಮಸಾಲಿ ಮಹಾಸಭಾದ ಉಪಾಧ್ಯಕ್ಷೆ ಕಿಶೋರಿ ಬೂದನೂರು (Kishori Budanuru) ಸಂಘಟನೆಗೆ ಮುಂದಾಗಿದ್ದಾರೆ.ಮೂರನೇಯ ಪೀಠದ ವಿವಾದ ಇರುವಾಗಲೇ ಪಂಚಮಸಾಲಿ ಸಮಾಜದ 4 ನೇ ಪೀಠ ಸ್ಥಾಪನೆಗೆ ಸದ್ದಿಲ್ಲದೆ ಸಿದ್ದತೆ ನಡೆದಿದೆ. ಅದು ಪಂಚಮಸಾಲಿ ಸಮಾಜದ ಮಹಿಳಾ ಪೀಠದ ಸ್ಥಾಪನೆಗೆ ಕೂಗು ಕೇಳಿ ಬಂದಿದ್ದು, ಪಂಚಮಸಾಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬುದನೂರ ರಿಂದ ಮಹಿಳಾ ಪೀಠದ ಸ್ಥಾಪನೆಗೆ ಸಿದ್ಧತೆ ಮಾಡುತ್ತಿದ್ದಾರೆ.

ಪಂಚಮಸಾಲಿಯು ಲಿಂಗಾಯತ (Panchamasali Lingayat) ಸಮಾಜದಲ್ಲಿ ದೊಡ್ಡ ಸಮುದಾಯವಾಗಿದೆ. ಇಲ್ಲಿ 40 ಲಕ್ಷ ಮಹಿಳೆಯರಿದ್ದಾರೆ. ಇದು ಹೆಸರಿಗೆ ಮಾತ್ರ ಕಿತ್ತೂರು ಚೆನ್ನಮ್ಮ ಅಂತಾರೆ. ಆದರೆ ಈಗಿರುವ ಎರಡೂ ಪೀಠದಿಂದ ಸಮಾಜದ ಮಹಿಳೆಯರ ಅಭಿವೃದ್ಧಿ ಆಗಿಲ್ಲ ಈ ಕಾರಣಕ್ಕೆ ಮಹಿಳಾ ಪೀಠ ಅವಶ್ಯವಾಗಿದೆ. ಲಿಂಗಾಯತ ಸಮಾಜದ ದೊಡ್ಡ ಜಾತಿಗಳಲ್ಲೊಂದಾದ ಪಂಚಮಸಾಲಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ.

ಇತಿಹಾಸ ಪುಟಗಳಲ್ಲಿ ಚಾಲೂಕ್ಯರು, ವಿಜಯನಗರ ಅರಸರ ಸಂಗಮ ವಂಸಸ್ಥರು, ಕೆಳದಿ, ಬೆಳವಡಿ, ಕಿತ್ತೂರು ಸಂಸ್ಥಾನಗಳು ಪಂಚಮಸಾಲಿ ಸಮಾಜದವರು ಎಂಬ ದಾಖಲುಗಳಾಗಿವೆ. ಈ ಮಧ್ಯೆ ಈಗಿನ ವಿಧಾನ ಸಭೆಯಲ್ಲಿ 27 ಜನ ಲಿಂಗಾಯತ ಪಂಚಮಸಾಲಿ ಸಮಾಜದವರು ಶಾಸಕರಿದ್ದಾರೆ.

ಇದನ್ನೂ ಓದಿ:  ಬಸವಣ್ಣನವರ ಅನುಭವ ಮಂಟಪವನ್ನೇ ಮರುಸೃಷ್ಟಿಸುವ ಯತ್ನ ನಡೆಸಿ; CM Bommai

ಒಂದು ಕೋಟಿಗೂ ಅಧಿಕ ಪಂಚಮಸಾಲಿ ಸಮುದಾಯದ ಜನರು

ಸಂಗಣ್ಣ ಕರಡಿ ಸಂಸದರಾಗಿ, ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸೇರಿ ದಕ್ಷಿಣ ಭಾರತ ಹಲವು ರಾಜ್ಯಗಳಲ್ಲಿ ಪಂಚಮಸಾಲಿ ಸಮಾಜದವರು ಸುಮಾರು 1 ಕೋಟಿಯೂ ಅಧಿಕ ಜನರಿದ್ದಾರೆ. ಈ ಮೊದಲು ಲಿಂಗಾಯತ ಸಮಾಜವೆಂದು ಹೇಳಿಕೊಳ್ಳುತ್ತಿದ್ದ ಪಂಚಮಸಾಲಿಗಳು ಮೊದಲು ಸಂಘಟಿತವಾಗಿದ್ದು ಕೊಪ್ಪಳದ ಬಿ ಎಂ ಹನುಮನಾಳ ಎಂಬವರ ನೇತೃತ್ವದಲ್ಲಿ ಪಂಚಮಸಾಲಿ ಸಂಘ ಸ್ಥಾಪನೆಯಾಯಿತು.

ಆಗ ರಾಜ್ಯದ ಜಾತಿಗಳ ಪಟ್ಟಿಯಲ್ಲಿ ಪಂಚಮಸಾಲಿ ಸೇರಿರಲಿಲ್ಲ. ಆಗ ಪಂಚಮಸಾಲಿ ಸೇರ್ಪಡೆಗೆ ಹೋರಾಟ ನಡೆಯಿತು. ಈಗ 2 ಎ ಮೀಸಲಾತಿಗಾಗಿ ತೀವ್ರ ಹೋರಾಟ ನಡೆದಿದೆ. ಇವುಗಳ ಮಧ್ಯೆ ಪಂಚಮಸಾಲಿಗಳ ಸಮಾಜದಲ್ಲಿ ಪೀಠಗಳ ಸ್ಥಾಪನೆ ನಡೆದಿದೆ.

Row over fourth Panchamasali peetha for women
ಪಂಚಮಸಾಲಿ ಮಹಾಸಭಾದ ಉಪಾಧ್ಯಕ್ಷೆ ಕಿಶೋರಿ ಬೂದನೂರು


ಒಂದೇ ವರ್ಷದಲ್ಲಿ ಎರಡು ಪೀಠಗಳ ರಚನೆ

2008 ರಲ್ಲಿ ಒಂದೇ ವರ್ಷದಲ್ಲಿ ಎರಡು ಪೀಠಗಳಾಗಿದ್ದು ಹರಿಹರದಲ್ಲಿ ಪಂಚಮಸಾಲಿ ಪೀಠ ಸ್ಥಾಪನೆಯಾದರೆ, ಕೂಡಲ ಸಂಗಮದಲ್ಲಿ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾಯಿತು. ಹರಿಹರ ಪೀಠದಲ್ಲಿ ಮೊದಲು ಸ್ಥಿರಪೀಠಾಧ್ಯಕ್ಷರಾಗಿ ಶ್ರೀ ಮಹಾಂತ ಸ್ವಾಮಿಗಳು, ಚರಪೀಠಾಧಿಪತಿಗಳಾ ಶ್ರೀ ಸಿದ್ದಲಿಂಗಸ್ವಾಮಿಗಳಿದ್ದರು, ಶ್ರೀ ಮಹಾಂತ ಸ್ವಾಮಿಗಳು ಲಿಂಗೈಕ್ಯರಾದ ನಂತರ ಹರಿಹರ ಪೀಠದಲ್ಲಿ ಆರೋಪಗಳ ಹಿನ್ನೆಲೆಯಲ್ಲಿ ಶ್ರೀಸಿದ್ದಲಿಂಗಸ್ವಾಮಿಗಳನ್ನು ಪೀಠದಿಂದ ಬಿಡಿಸಲಾಯಿತು. ಈ ಪೀಠಕ್ಕೆ ಶ್ರೀವಚನಾನಂದ ಸ್ವಾಮಿಗಳನ್ನು ಕೂಡಿಸಲಾಗಿದೆ.

2008 ರಲ್ಲಿಯೇ ಸ್ಥಾಪನೆಯಾದ ಬಸವ ತತ್ವದ ಆಧಾರದಲ್ಲಿರುವ ಶ್ರೀ ಬಸವ ಜಯಶ್ರೀ ಮೃತ್ಯುಂಜಯ ಸ್ವಾಮಿಗಳಿದ್ದಾರೆ. ಈಗಾಗಲೇ ಎರಡು ಪೀಠಗಳು ಇರುವಾಗ ಪಂಚಮಸಾಲಿ ಇನ್ನೊಂದು ಪೀಠ ಮಾಡಲು ಮೊದಲು ಜಮಖಂಡಿಯ ಅಲಗೂರಿನಲ್ಲಿ ಮನಗೂಳಿಯ ಶ್ರೀ ಸಂಗನಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಇದನ್ನೂ ಓದಿ:  Mysore: ಹರದನಹಳ್ಳಿ ಗ್ರಾಮಪಂಚಾಯ್ತಿ ಸಭೆಯಲ್ಲಿಯೇ ನಡೆಯಿತು ಮದುವೆ

ಈಗಾಗಲೇ ಹಲವಾರು ಸಭೆಗಳ ನಂತರ ಮೂರನೇಯ ಪೀಠ ಸ್ಥಾಪನೆ ಮಾಡಬೇಕು. ಬಬಲೇಶ್ವರದ ಡಾ ಮಹಾದೇವ ಶಿವಾಚಾರ್ಯರನ್ನು ಮೂರನೇಯ ಪೀಠಾಧಿಪತಿಗಳನ್ನಾಗಿ ನೇಮಿಸಲು ತೀರ್ಮಾನಿಸಿ ಇಷ್ಟರಲ್ಲಿಯೇ ಸ್ಥಾಪನೆಯಾಗಲಿದೆ.

ಮಹಿಳಾ ಪೀಠ ಸ್ಥಾಪನೆ ಕುರಿತಾಗಿ ಸಭೆಗಳು

ಈ ಮಧ್ಯೆ ಪಂಚಮಸಾಲಿಗಳ ನಾಲ್ಕನೇಯ ಪೀಠವು ಕೊಪ್ಪಳದಲ್ಲಿ ಸ್ಥಾಪನೆಯಾಗಲು ಸಿದ್ದತೆ ನಡೆದಿದೆ, ಮಹಾಸಭಾದಲ್ಲಿ 72 ಸ್ವಾಮಿಗಳಿದ್ದಾರೆ, ಅದರಲ್ಲಿ ಸಮಾಜದ ಒಕ್ಕೂಟದಲ್ಲಿ 11 ಜನ ಮಹಿಳೆ ಸ್ವಾಮಿಜಿಗಳಿದ್ದಾರೆ, ಅದರಲ್ಲಿ ಒಬ್ಬರನ್ನು ಮಹಿಳಾ ಪೀಠದ ಪೀಠಾಧಿತಿ ಮಾಡಲಾಗುವುದು, ಮಹಿಳಾ ಪೀಠದ ಸ್ಥಾಪನೆ ಬಗ್ಗೆ ಈಗಾಗಲೇ ಒಂದು ಸಭೆ ಮಾಡಲಾಗಿದೆ.

ಮಹಿಳಾ ಪೀಠದ  ಕುರಿತು ಕೂಡಲಸಂಗಮ,ಹರಿಹರ ಪೀಠದ ಸ್ವಾಮೀಜಿಗಳ ಗಮನಕ್ಕೆ ತರಲಾಗಿದೆ, ಸಮಾಜದ ಮೂರು ಪೀಠಗಳು ಮಹಿಳಾ ಪೀಠದ ಸ್ಥಾಪನೆಗೆ ಒಪ್ಪಿಗೆ ಸೂಚಿಸುತ್ತಾರೆ. ಯಾವುದೇ ಕಾರಣಕ್ಕೂ ಮಹಿಳಾ ಪೀಠ ಸ್ಥಾಪನೆ ವಿಷಯ ಕೈ ಬಿಡುವುದಿಲ್ಲ ಎಂದರು.

ಸಮಾಜದ ಪೀಠ ಸ್ಥಾಪನೆಯಲ್ಲಿ ರಾಜಕಾರಣವಿಲ್ಲ, ಪಂಚಮಸಾಲಿಗಳಲ್ಲಿ ಪಂಚಮ ಇದೆ, ಐದು ಪೀಠಗಳಾಗಲಿ, ನಿರಾಣಿಯವರು ಪೀಠ ಸ್ಥಾಪನೆಯಲ್ಲಿ ರಾಜಕಾರಣ ಮಾಡುತ್ತಿಲ್ಲ, ಸಮಾಜ ಹಿರಿಯರು, ಪೀಠಾಧಿಪತಿಗಳು ನಾಲ್ಕನೆಯ ಪೀಠಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಕೂಡಲ ಸಂಗಮ ಸ್ವಾಮೀಜಿಗಳ ಒಂದೇ ಪೀಠ ಎಂದು ಹೇಳುತ್ತಿರುವುದು ಅದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೀಠಗಳ ಹೆಚ್ವಾದರೂ ಸಮಾಜದ ಮೀಸಲಾತಿಗೆ ಗೊಂದಲವಿಲ್ಲ ಎಂದು ಮಹಿಳಾ ಪೀಠ ಸ್ಥಾಪನೆ ಮಾಡಿಯೇ ಮಾಡುತ್ತೇವೆ ಎಂದ ಕಿಶೋರಿ ಬುದನೂರ ಹೇಳಿದ್ದಾರೆ.
Published by:Mahmadrafik K
First published: