ಶಿವಾಜಿನಗರ ಬಿಜೆಪಿ ಅಭ್ಯರ್ಥಿ ಪರ ರೋಷನ್ ಬೇಗ್, ಕಾಂಗ್ರೆಸ್ ಕಾರ್ಪೊರೇಟರ್ ಬಹಿರಂಗ ಪ್ರಚಾರ

 ಯಾಕೆ ನೀನು ಬಿಜೆಪಿ ಜೊತೆ ಇದ್ದಿಯಾ ಅಂತ ಕಾಂಗ್ರೆಸ್​ನವರು ಕೇಳಿದ್ರು. ನಮ್ಮ ನಾಯಕನನ್ನು ಕಾಂಗ್ರೆಸ್​​ನಿಂದ ಹೊರ ಹಾಕಿದ್ರು, ಹೀಗಿದ್ದಾಗ ನಾನು ಹೇಗೆ ಕಾಂಗ್ರೆಸ್ ಪರ ಕೆಲಸ ಮಾಡಲಿ.  ನಮ್ಮ ಬೇಗ್ ಸಾಹೇಬ್ರನ್ನು ಷಡ್ಯಂತ್ರ ಮಾಡಿ ಕಾಂಗ್ರೆಸ್​ನಿಂದ ಹೊರಹಾಕಿದ್ದಾರೆ. ನಮ್ಮ ನಾಯಕನನ್ನು ಪಕ್ಷದಿಂದ ಹೊರಹಾಕಿರುವಾಗ ಕಾಂಗ್ರೆಸ್​ನಲ್ಲಿ ನಮಗೇನು ಕೆಲಸ ಎಂದು ಗುಣಶೇಖರ್ ಹೇಳಿದರು.

HR Ramesh | news18-kannada
Updated:November 25, 2019, 6:28 PM IST
ಶಿವಾಜಿನಗರ ಬಿಜೆಪಿ ಅಭ್ಯರ್ಥಿ ಪರ ರೋಷನ್ ಬೇಗ್, ಕಾಂಗ್ರೆಸ್ ಕಾರ್ಪೊರೇಟರ್ ಬಹಿರಂಗ ಪ್ರಚಾರ
ರೋಷನ್​​​ ಬೇಗ್​​
  • Share this:
ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಅನರ್ಹ ಶಾಸಕ ರೋಷನ್ ಬೇಗ್ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ಗುಣಶೇಖರ್ ಅವರು ಇಂದು  ಬಹಿರಂಗ ಪ್ರಚಾರ ಮಾಡಿದರು. ಬಿಜೆಪಿ ದೂರ ಮಾಡಿದರೂ ಬೇಗ್​ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. 

ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಪರ ರೋಷನ್ ಬೇಗ್ ಇಂದು ಪ್ರಚಾರ ಮಾಡಿದರು. ಉರ್ದು ಭಾಷೆಯಲ್ಲಿ ಶರವಣ ಅವರಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಶಿವಾಜಿನಗರ ಛೋಟಾ ಹಿಂದೂಸ್ಥಾನ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು, ಜೈನರು, ಕ್ರೈಸ್ತರು ಎಲ್ಲರೂ ಇದ್ದಾರೆ. ಎಲ್ಲರೂ ಒಟ್ಟಾಗಿ ಈ ದೇಶದಲ್ಲಿ ಇರಬೇಕು. ಈ ದೇಶ ಮೋದಿ ನೇತೃತ್ವದಲ್ಲಿ ಮುನ್ನಡೆಯಬೇಕು. ಮುಸ್ಲಿಮರೂ ಹಿಂದೆ ಸರಿಯಬಾರದು. ಮುಸ್ಲಿಮರು ಬೇರೆ ಅನ್ನೋ ಸಂದೇಶ ಹೋಗಬಾರದು. ಬಿಜೆಪಿ ಜೊತೆ ನಾವೂ ಇರಬೇಕು. ಮುಸ್ಲಿಮರೂ ದೇಶದ ಅಭಿವೃದ್ಧಿ ಬಯಸುತ್ತಾರೆ ಅನ್ನೋದನ್ನು ತೋರಿಸಬೇಕು. ಮುಸ್ಲಿಮರ ಓಲೈಕೆ, ವೋಟ್ ಬ್ಯಾಂಕ್ ಪಾಲಿಟಿಕ್ಸ್ ಕಾಲ ಹೋಯ್ತು. ನಮ್ಮನ್ನು ತೋರಿಸಿ ತೋರಿಸಿ, ಮೂರ್ಖರನ್ನಾಗಿಸುವ ಕಾಲ ಹೋಯ್ತು. ನಾವೂ ದೇಶದ ಅಭಿವೃದ್ಧಿ ಬಯಸುತ್ತೇವೆ.  ದೇಶದ ಅಭಿವೃದ್ಧಿಗಾಗಿ ಭಾರತ ಸರ್ಕಾರ, ಮೋದಿ ಜೊತೆಗಿರುತ್ತೇವೆ ಎಂದು ಪ್ರಚಾರದ ವೇಳೆ ಹೇಳಿದರು.

ಇದನ್ನು ಓದಿ: ಸಿಎಂಗೆ ಚಪ್ಪಲಿ ತೊಡಿಸಿ ಸಿಂಗ್ ಸ್ವಾಮಿನಿಷ್ಟೆ; ಆನಂದ್ ವಿರುದ್ಧ ಹೆಚ್​​ಡಿಕೆ ಕೋಪ; ಯಾರಿಗೆ ವಿಜಯ ಮಾಲೆ?

ಕಾಂಗ್ರೆಸ್ ಕಾರ್ಪೊರೇಟರ್ ಗುಣಶೇಖರ್ ಅವರೂ ಕೂಡ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ನಾನು ಶರವಣ ಪರ 5 ಗಂಟೆಯಿಂದ ಪ್ರಚಾರ ಮಾಡ್ತಿದ್ದೇನೆ. ಯಾಕೆ ನೀನು ಬಿಜೆಪಿ ಜೊತೆ ಇದ್ದಿಯಾ ಅಂತ ಕಾಂಗ್ರೆಸ್​ನವರು ಕೇಳಿದ್ರು. ನಮ್ಮ ನಾಯಕನನ್ನು ಕಾಂಗ್ರೆಸ್​​ನಿಂದ ಹೊರ ಹಾಕಿದ್ರು, ಹೀಗಿದ್ದಾಗ ನಾನು ಹೇಗೆ ಕಾಂಗ್ರೆಸ್ ಪರ ಕೆಲಸ ಮಾಡಲಿ.  ನಮ್ಮ ಬೇಗ್ ಸಾಹೇಬ್ರನ್ನು ಷಡ್ಯಂತ್ರ ಮಾಡಿ ಕಾಂಗ್ರೆಸ್​ನಿಂದ ಹೊರಹಾಕಿದ್ದಾರೆ. ನಮ್ಮ ನಾಯಕನನ್ನು ಪಕ್ಷದಿಂದ ಹೊರಹಾಕಿರುವಾಗ ಕಾಂಗ್ರೆಸ್​ನಲ್ಲಿ ನಮಗೇನು ಕೆಲಸ ಎಂದು ಹೇಳಿದರು.

First published: November 25, 2019, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading