ಏನ್ ಕಾಯಿಲೆ ಇದೆ ಅಂತ ರಿಪೋರ್ಟ್ ಕೊಡಿ ಎಂದು ಕೋರ್ಟ್ ಕೇಳಿದ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರೋಷನ್ ಬೇಗ್
ಕಳೆದ ನಾಲ್ಕೈದು ದಿನಗಳ ಕಾಲ ಅನಾರೋಗ್ಯ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಬೇಗ್ ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದು, ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.
news18-kannada Updated:November 30, 2020, 5:49 PM IST

ಮಾಜಿ ಸಚಿವ ರೋಷನ್ ಬೇಗ್.
- News18 Kannada
- Last Updated: November 30, 2020, 5:49 PM IST
ಬೆಂಗಳೂರು; ಮಾಜಿ ಸಚಿವ ರೋಷನ್ ಬೇಗ್ ಈಗ ಸಂಪತ್ ರಾಜ್ ಐಡಿಯಾನೇ ಫಾಲೋ ಮಾಡ್ತಾ ಇದ್ದಾರೆ. ಸಿಬಿಐ ಅಧಿಕಾರಿಗಳು ವಿಚಾರಣೆ ಅಂತ ಬಂದರೆ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಅಡ್ಮಿಟ್ ಆಗ್ತಾ ಇದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ನ್ಯಾಯಾಧೀಶರು ಏನ್ ಕಾಯಿಲೆ ಇದೆ ರಿಪೋರ್ಟ್ ಕೊಡಿ, ಇಲ್ಲ ಅಂದ್ರೆ ನಾವು ಹೇಳಿದ ಸರ್ಕಾರಿ ವೈದ್ಯರ ಬಳಿ ತಪಾಸಣೆ ಮಾಡಿಸಿ ಅಂತ ಕಟ್ಟುನಿಟ್ಟಾಗಿ ಹೇಳಿದ ಬೆನ್ನಲ್ಲೇ ಇವತ್ತು ರೋಷನ್ ಬೇಗ್ ಜಯದೇವ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.
ಸಿಬಿಐ ಅಧಿಕಾರಿಗಳು ವಿಚಾರಣೆ ಸಲುವಾಗಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಕೇಳಿತ್ತು. ಅದಕ್ಕೆ ಸಿಬಿಐ ವಿಶೇಷ ಕೋರ್ಟ್ ಸಹ ಒಕೆ ಅಂದಿತ್ತು. ಅನುಮತಿ ನೀಡಿದ್ದೇ ತಡ ಬೇಗ್ ಅನಾರೋಗ್ಯ ನೆಪ ಹೇಳಿ ಜಯದೇವ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇದರ ಬಗ್ಗೆ ಕೋರ್ಟ್ ನಲ್ಲಿ ವಾದ ಮಾಡಿದ ಸಿಬಿಐ ಪರ ವಕೀಲರು ಬೇಕು ಅಂತಾನೆ ಕಸ್ಟಡಿ ಅಂದಾಗ ಅಡ್ಮೀಟ್ ಆಗ್ತಾ ಇದ್ದಾರೆ ಎಂದು ಹೇಳಿದರು. ಆದರೆ, ಯಾಕೆ ಅಡ್ಮೀಟ್ ಆದ್ರು, ಏನು ಕಾಯಿಲೆ ಅಂತ ಬೇಗ್ ಪರ ವಕೀಲರು ರಿಪೋರ್ಟ್ ನೀಡಿರಲಿಲ್ಲ. ಇದರಿಂದ ಗರಂ ಆದ ನ್ಯಾಯಾಧೀಶರು ಯಾಕೆ ಅಡ್ಮಿಟ್ ಆಗಿದ್ದಾರೆ. ಏನು ಕಾಯಿಲೆ ಅದರ ರಿಪೋರ್ಟ್ ಕೊಡಿ. ಇಲ್ಲ ಅಂದ್ರೆ ನಾವು ಹೇಳಿದ ಸರ್ಕಾರಿ ವೈದ್ಯರ ಬಳಿ ಚೆಕ್ ಮಾಡಿಸಿ ಅಂತ ಗರಂ ಆದ್ರು. ಇದರ ಬೆನ್ನಲ್ಲೇ ಬೇಗ್ ಇವತ್ತು ಜಯದೇವದಿಂದ ಡಿಸ್ಚಾರ್ಜ್ ಆಗಿ ಮತ್ತೆ ಜೈಲಿಗೆ ಹೋಗಿದ್ದಾರೆ. ಇನ್ನು ಇವತ್ತು ಮತ್ತೆ ಪರಪ್ಪನ ಅಗ್ರಹಾರಕ್ಕೆ ಹೋಗಿರುವ ರೋಷನ್ ಬೇಗ್ ನನ್ನು ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ. ಇದನ್ನು ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಟಾಸ್ಕ್ ಫೋರ್ಸ್ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ
ಡಿಶ್ಚಾರ್ಜ್ ಆಗಿದ್ದೇ ಕಸ್ಟಡಿಗೆ ಪಡೆಯಲು ನೋಡ್ತಾ ಇದ್ದ ಸಿಬಿಐ ಅಧಿಕಾರಿಗಳು ನಾಳೆ ಪರಪ್ಪನ ಅಗ್ರಹಾರಕ್ಕೆ ಹೋಗಿ ಬೇಗ್ ಅವರನ್ನು ಸಿಬಿಐ ಕಚೇರಿಗೆ ಕರೆದುತಂದು ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಮನ್ಸೂರ್ ಹೇಳಿಕೆ ದಾಖಲು ಮಾಡಿದ್ದು, ರೋಷನ್ ಬೇಗ್ ಮನೆಯ ದಾಳಿಯಲ್ಲಿ ಸಿಕ್ಕ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಮಾಡಿಲಿದ್ದಾರೆ.
ಒಟ್ಟಿನಲ್ಲಿ ಕಳೆದ ನಾಲ್ಕೈದು ದಿನಗಳ ಕಾಲ ಅನಾರೋಗ್ಯ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಬೇಗ್ ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದು, ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.
ಸಿಬಿಐ ಅಧಿಕಾರಿಗಳು ವಿಚಾರಣೆ ಸಲುವಾಗಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಕೇಳಿತ್ತು. ಅದಕ್ಕೆ ಸಿಬಿಐ ವಿಶೇಷ ಕೋರ್ಟ್ ಸಹ ಒಕೆ ಅಂದಿತ್ತು. ಅನುಮತಿ ನೀಡಿದ್ದೇ ತಡ ಬೇಗ್ ಅನಾರೋಗ್ಯ ನೆಪ ಹೇಳಿ ಜಯದೇವ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇದರ ಬಗ್ಗೆ ಕೋರ್ಟ್ ನಲ್ಲಿ ವಾದ ಮಾಡಿದ ಸಿಬಿಐ ಪರ ವಕೀಲರು ಬೇಕು ಅಂತಾನೆ ಕಸ್ಟಡಿ ಅಂದಾಗ ಅಡ್ಮೀಟ್ ಆಗ್ತಾ ಇದ್ದಾರೆ ಎಂದು ಹೇಳಿದರು. ಆದರೆ, ಯಾಕೆ ಅಡ್ಮೀಟ್ ಆದ್ರು, ಏನು ಕಾಯಿಲೆ ಅಂತ ಬೇಗ್ ಪರ ವಕೀಲರು ರಿಪೋರ್ಟ್ ನೀಡಿರಲಿಲ್ಲ. ಇದರಿಂದ ಗರಂ ಆದ ನ್ಯಾಯಾಧೀಶರು ಯಾಕೆ ಅಡ್ಮಿಟ್ ಆಗಿದ್ದಾರೆ. ಏನು ಕಾಯಿಲೆ ಅದರ ರಿಪೋರ್ಟ್ ಕೊಡಿ. ಇಲ್ಲ ಅಂದ್ರೆ ನಾವು ಹೇಳಿದ ಸರ್ಕಾರಿ ವೈದ್ಯರ ಬಳಿ ಚೆಕ್ ಮಾಡಿಸಿ ಅಂತ ಗರಂ ಆದ್ರು. ಇದರ ಬೆನ್ನಲ್ಲೇ ಬೇಗ್ ಇವತ್ತು ಜಯದೇವದಿಂದ ಡಿಸ್ಚಾರ್ಜ್ ಆಗಿ ಮತ್ತೆ ಜೈಲಿಗೆ ಹೋಗಿದ್ದಾರೆ. ಇನ್ನು ಇವತ್ತು ಮತ್ತೆ ಪರಪ್ಪನ ಅಗ್ರಹಾರಕ್ಕೆ ಹೋಗಿರುವ ರೋಷನ್ ಬೇಗ್ ನನ್ನು ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.
ಡಿಶ್ಚಾರ್ಜ್ ಆಗಿದ್ದೇ ಕಸ್ಟಡಿಗೆ ಪಡೆಯಲು ನೋಡ್ತಾ ಇದ್ದ ಸಿಬಿಐ ಅಧಿಕಾರಿಗಳು ನಾಳೆ ಪರಪ್ಪನ ಅಗ್ರಹಾರಕ್ಕೆ ಹೋಗಿ ಬೇಗ್ ಅವರನ್ನು ಸಿಬಿಐ ಕಚೇರಿಗೆ ಕರೆದುತಂದು ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಮನ್ಸೂರ್ ಹೇಳಿಕೆ ದಾಖಲು ಮಾಡಿದ್ದು, ರೋಷನ್ ಬೇಗ್ ಮನೆಯ ದಾಳಿಯಲ್ಲಿ ಸಿಕ್ಕ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಮಾಡಿಲಿದ್ದಾರೆ.
ಒಟ್ಟಿನಲ್ಲಿ ಕಳೆದ ನಾಲ್ಕೈದು ದಿನಗಳ ಕಾಲ ಅನಾರೋಗ್ಯ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಬೇಗ್ ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದು, ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.