ಐಎಂಎ ಪ್ರಕರಣ; ಸಿಬಿಐ ವಶಕ್ಕೆ ಮಾಜಿ ಸಚಿವ ರೋಷನ್ ಬೇಗ್; 14 ದಿನಗಳ ಕಾಲ ನ್ಯಾಯಾಂಗ ಬಂಧನ

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಪಾತ್ರದ ಬಗ್ಗೆ ಪ್ರಬಲ ಸಾಕ್ಷ್ಯಗಳನ್ನು ಸಿಬಿಐ ಸಂಗ್ರಹಿಸಿದೆ. ಹೀಗಾಗಿ ಇಂದು ವಿಚಾರಣೆಗಾಗಿ ರೋಷನ್ ಬೇಗ್ ಅವರಿಗೆ ಕರೆಯಲಾಗಿತ್ತು. ಎಂದು ನ್ಯೂಸ್ 18 ಗೆ ಸಿಬಿಐ ಮೂಲಗಳ ಖಚಿತ ಮಾಹಿತಿ ನೀಡಿವೆ.

ಮಾಜಿ ಸಚಿವ ರೋಷನ್ ಬೇಗ್

ಮಾಜಿ ಸಚಿವ ರೋಷನ್ ಬೇಗ್

 • Share this:
  ಬೆಂಗಳೂರು; ಐಎಂಎ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಇಂದು ಬೆಳಗ್ಗೆ ಸಿಬಿಐ ಬೇಗ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಬಳಿಕ ರೋಷನ್​ ಬೇಗ್​ ಅವರನ್ನು ಬಂಧಿಸಲಾಯಿತು. ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಬೇಗ್ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಬೇಗ್ ಅವರನ್ನು ಸಿಬಿಐ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

  ನಾಳೆ ಕೋರ್ಟ್ ಗೆ ಹಾಜರು ಪಡಿಸಲು ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಇಂದೇ ನ್ಯಾಯಾಧೀಶರ ಮುಂದೆ ಬೇಗ್​ನನ್ನು ಸಿಬಿಐ ಹಾಜರುಪಡಿಸಿತು. ಬಳಿಕ ನ್ಯಾಯಾಂಗ  ಬಂಧನಕ್ಕೆ ಒಳಗಾದ ರೋಷನ್ ಬೇಗ್ ಗೆ ಅಧಿಕಾರಿಗಳು ಕ್ವಾರಂಟೈನ್ ಸಿಂಗಲ್ ಸೆಲ್ ನೀಡಿದ್ದಾರೆ. ಸದ್ಯಕ್ಕೆ ಭಾನುವಾರವಾಗಿರುವುದರಿಂದ ನಾಳೆ ಯುಟಿಪಿ ನಂಬರ್ ನೀಡಲಿದ್ದರೆ.

  ಇದನ್ನು ಓದಿ: ಶಿವಾಜಿ ಪೂರ್ವಜರು ಉತ್ತರ ಕರ್ನಾಟಕದವರು, ಇತಿಹಾಸ ತಿಳಿದುಕೊಳ್ಳಿ, ಡಿ.5ರ ಬಂದ್ ಕೈ ಬಿಡಿ; ಡಿಸಿಎಂ ಗೋವಿಂದ ಕಾರಜೋಳ

  120B, r/w 420, 406, 405 ಮತ್ತು 128 ಸೆಕ್ಷನ್ ಅಡಿಯಲ್ಲಿ ರೋಷನ್ ಬೇಗ್ ಮೇಲೆ ಕೇಸ್ ದಾಖಲು ಮಾಡಲಾಗಿದೆ.  ರೋಷನ್ ಬೇಗ್​ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ನಾಳೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ.

  ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಪಾತ್ರದ ಬಗ್ಗೆ ಪ್ರಬಲ ಸಾಕ್ಷ್ಯಗಳನ್ನು ಸಿಬಿಐ ಸಂಗ್ರಹಿಸಿದೆ. ಹೀಗಾಗಿ ಇಂದು ವಿಚಾರಣೆಗಾಗಿ ರೋಷನ್ ಬೇಗ್ ಅವರಿಗೆ ಕರೆಯಲಾಗಿತ್ತು. ಎಂದು ನ್ಯೂಸ್ 18 ಗೆ ಸಿಬಿಐ ಮೂಲಗಳ ಖಚಿತ ಮಾಹಿತಿ ನೀಡಿವೆ.
  Published by:HR Ramesh
  First published: