• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohit Chakratirtha: ನಾನು ನಾಡಗೀತೆಗೆ ಅವಮಾನ ಮಾಡಿಲ್ಲ ಎಂದ ಚಕ್ರತೀರ್ಥ; ಇತ್ತ ಗಡಿಪಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

Rohit Chakratirtha: ನಾನು ನಾಡಗೀತೆಗೆ ಅವಮಾನ ಮಾಡಿಲ್ಲ ಎಂದ ಚಕ್ರತೀರ್ಥ; ಇತ್ತ ಗಡಿಪಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಪರಿಷ್ಕರಣ ಸಮಿತಿ ವಜಾಗೊಳಿಸಲು ಆಗ್ರಹಿಸಿ ಕರವೇ ನಾರಾಯಣಗೌಡರ ಬಣ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಫ್ರೀಡಂಪಾರ್ಕ್ ನಲ್ಲಿರೋ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭ ಮಾಡಲಾಯ್ತು.

  • Share this:

ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಾಹಿತಿಗಳ ವಿರುದ್ಧ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Textbook revision committee chairman Rohit Chakrathirtha) ಆಕ್ರೊಶ ಹೊರ ಹಾಕಿದ್ದಾರೆ. ನ್ಯೂಸ್ 18 ಕನ್ನಡ ಜೊತೆ  ಮಾತನಾಡಿದ ರೋಹಿತ್ ಚಕ್ರತೀರ್ಥ, ಅವರು ಸಾಹಿತಿಗಳಾ ಅನ್ನೋ ಪ್ರಶ್ನೆ ಎದುರಾಗಿದೆ. ಟೂಲ್ ಕಿಟ್ (Toolkit)‌ ನಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಹಂಪ ನಾಗರಾಜಯ್ಯ ಸೇರಿದಂತೆ ಅನೇಕರು ಇವತ್ತು ರಾಜೀನಾಮೆ ಕೊಡ್ತಿದ್ದಾರೆ. ನನ್ನ ಮೇಲಿನ ಟಾರ್ಗೆಟ್‌ ಗಾಗಿ ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಠ್ಯಪುಸ್ತಕ (Textbook) ವಿಚಾರ ಬೇಡವಾಗಿದೆ. ಸಾಹಿತಿಗಳು ಟ್ರಸ್ಟಿಗಳಾಗಿದ್ದಾಗ ಅವರ ಅಕ್ರಮದ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಟ್ರಸ್ಟ್‌ ಗೆ ಬರುವ ಲಕ್ಷಾಂತರ ರೂ.ಹಣ ಎಲ್ಲಿ ಹೋಗ್ತಿದೆ ಅಂತ ಕೇಳಿದ್ದೆ. ಈ ಕಾರಣಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿ ಸಾಹಿತಿಗಳ ಮೇಲೆ ಭ್ರಷ್ಟಾಚಾರದ (Corruption) ಆರೋಪ ಮಾಡಿದರು.


ಈ ವಿಷಯದಲ್ಲಿ ಜಾತಿಯನ್ನು ಮಧ್ಯೆ ತರುತ್ತಿದ್ದಾರೆ. ಒಂದೊಂದೆ ಜಾತಿಯ ಸಮುದಾಯವನ್ನು ಸೆಳೆಯಲು ನೋಡುತ್ತಿದ್ದಾರೆ. ಇದು ಸರಿಯಲ್ಲ ನಾನು ನಾಡಗೀತೆಗೆ ಯಾವತ್ತೂ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


ಕರವೇ ನಾರಾಯಣಗೌಡರ ಬಣದಿಂದ ಪ್ರತಿಭಟನೆ


ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಪರಿಷ್ಕರಣ ಸಮಿತಿ ವಜಾಗೊಳಿಸಲು ಆಗ್ರಹಿಸಿ ಕರವೇ ನಾರಾಯಣಗೌಡರ ಬಣ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಫ್ರೀಡಂಪಾರ್ಕ್ ನಲ್ಲಿರೋ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭ ಮಾಡಲಾಯ್ತು.


ಇದನ್ನೂ ಓದಿ:  Rajyasabha Election: ನಾಮಪತ್ರ ಸಲ್ಲಿಸಿದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್


ಕುವೆಂಪು ಮತ್ತು ನಾಡಗೀತೆಯನ್ನ ಅಪಮಾನ ಮಾಡಿದ ಆರೋಪದಡಿ ರೋಹಿತ್ ಬಂಧನವಾಗಬೇಕು ಮತ್ತು ಗಡಿಪಾರು ಮಾಡಬೇಕೆಂದು ಆಕ್ರೋಶ ಹೊರಹಾಕಿದರು. ನಾರಾಯಣಗೌಡರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿ‌ಯಾಗಿದ್ದರು. ಕನ್ನಡಪರ ಮಹಿಳಾ ಕಾರ್ಯಕರ್ತರು ಚಕ್ರತೀರ್ಥರನ್ನ ಬಂಧನ ಮಾಡಬೇಕೆಂದು ಆಗ್ರಹಿಸಿದರು.


ಸೋಮವಾರ ಪ್ರತಿಭಟನೆ ನಡೆಸಿದ್ದ ಶಿವರಾಮೇಗೌಡರ ಬಣ


ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ  ತಮಗಿಷ್ಟ ಬಂದಂತೆ ವಿಷಯ ತುಂಬಲಾಗಿದೆ. ರಾಷ್ಟ್ರ ಕವಿ ಕುವೆಂಪು ರವರು ರಚಿಸಿರುವ ನಾಡಗೀತೆ ವ್ಯಂಗ್ಯಮಾಡಿ ಅವಹೇಳನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ರೋಹಿತ್ ಚಕ್ರತೀರ್ಥ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ದಹನ ಮಾಡಲಾಯ್ತು. ಪೊಲೀಸರು ರೋಹಿತ್ ಚಕ್ರತೀರ್ಥ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಬಂಧಿಸಬೇಕು ಎಂದು ಆಗ್ರಹಿಸಲಾಗಿತ್ತು.


ರೋಹಿತ್ ಚಕ್ರತೀರ್ಥ ಒಬ್ಬ ದೇಶದ್ರೋಹಿ


ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಶಿವರಾಮೇಗೌಡರು, ರೋಹಿತ್ ಚಕ್ರತೀರ್ಥ ಒಬ್ಬ ನಾಡ ದ್ರೋಹಿ ಮಾತ್ರ ಅಲ್ಲ ದೇಶ ದ್ರೋಹಿ ಕೂಡ. ಇಂದು ನಾಡಗೀತೆಗೆ ಅವಮಾನ ಮಾಡಿದವನು ನಾಳೆ ರಾಷ್ಟ್ರ ಗೀತೆ ಅವಮಾನ ಮಾಡಲ್ಲಾ ಅಂತ ಯಾವ ಗ್ಯಾರಂಟಿ ಎಂದು ಕಿಡಿಕಾರಿದರು. ನಮ್ಮ ಧ್ವಜವನ್ನು ಒಳ ಉಡುಪಿಗೆ ಹೋಲಿಕೆ ಮಾಡುತ್ತಾನೆ. ಅಂಥವನನ್ನು ತಂದು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡುತ್ತೆ ಸರ್ಕಾರ. ಇಂಥವನ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಇಲ್ಲದಿದ್ದರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಇದನ್ನೂ ಓದಿ:  DK Shivakumar ED Case: ಡಿಕೆಶಿ ದೆಹಲಿ ಪ್ಲ್ಯಾಟ್​ನಲ್ಲಿ ಸಿಕ್ಕಿರುವ 8.5 ಕೋಟಿ ರೂ, ಇಂದು ವಿಚಾರಣೆ


ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು


ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿ ನಾಡಗೀತೆಗೆ ಅಪಮಾನ ಆರೋಪದಡಿ ರೋಹಿತ್ ಚಕ್ರತೀರ್ಥ (Rohit Chakratirtha) ಮತ್ತು ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ದ ದೂರು ನೀಡಲಾಗಿದೆ.   ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಪ್ರತಾಪ್ ರೆಡ್ಡಿ ಅವರಿಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ದೂರು ನೀಡಿದ್ದಾರೆ.

Published by:Mahmadrafik K
First published: