Karnataka Text Book Row: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೊಸ ಪಠ್ಯ ಪುಸ್ತಕದಲ್ಲಿಯ ಕೆಲ ಅಂಶಗಳು ವಿವಾದಕ್ಕೆ ಕಾರಣವಾಗಿದ್ದು, ಬಹುತೇಕ ಮಠಾಧೀಶರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ವಿವಾದದ ಬಳಿಕ ಪಠ್ಯ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದ್ದು, ಉಂಟಾಗಿರುವ ಲೋಪದೋಷಗಳ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿಯೇ ಮಕ್ಕಳಿಗೆ ಪುಸ್ತಕ ವಿತರಣೆ (Book Distribution) ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ (Department of Education) ಹೇಳಿಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿತ್ತು. ಅದಕ್ಕೂ ಮೊದಲು ಅಂದ್ರೆ 2010ರಲ್ಲಿ ಮುಡಂಬಡಿತ್ತಾಯ (Mudambadittaya) ಸಮಿತಿ ಈ ಕೆಲಸವನ್ನು ಮಾಡಿತ್ತು.
ಇನ್ನು ಖರ್ಚಿನ ವಿಚಾರಕ್ಕೆ ಸಂಬಂಧಿಸಿದಂತೆ ವಿಷಯ ನೋಡೋದಾದ್ರೆ ರೋಹಿತ್ ಚಕ್ರತೀರ್ಥ ಸಮಿತಿ ಕೇವಲ 5,200 ರೂ ಸಂಭಾವನೆ ಪಡೆದುಕೊಂಡಿದೆ. ಇನ್ನೂ 28,600 ರೂ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಬಾರಿಯ ಸಮಿತಿ ಒಟ್ಟು 50 ಲಕ್ಷ ರೂ ಆಗಿದೆ.
ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆ ಐದಾರು ಪಟ್ಟು ಹೆಚ್ಚಳವಾಗಿತ್ತು. ಮುಡಂಬಡಿತ್ತಾಯ ಸಮಿತಿ ಫೋನ್ ಖರೀದಿಗಾಗಿ 3 ಸಾವಿರ ರೂ ಮತ್ತು ಒಟ್ಟು ಪರಿಷ್ಕರಣೆ ವೆಚ್ಚ 3.63ಕೋಟಿ ರೂ.ಗಳಾಗಿತ್ತು.
ಚಕ್ರತೀರ್ಥ ಸಮಿತಿಯಿಂದ 49.99 ಲಕ್ಷ ಖರ್ಚು
ಕರ್ನಾಟಕ ಪಠ್ಯ ಪುಸ್ತಕ ಸಂಘ 2021ರಲ್ಲಿ 1 ರಿಂದ10ನೇ ತರಗತಿ ಮಕ್ಕಳ ಪಠ್ಯ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ಸಮಿತಿಯನ್ನು ನೇಮಕ ಮಾಡಿತ್ತು. ಈ ಸಮಿತಿಯು ಸದಸ್ಯರ ಸಂಭಾವನೆ, ಕಾರ್ಯಾಗಾರ, ಪ್ರಯಾಣ ವೆಚ್ಚ, ವಾಹನ ಭತ್ಯೆ ಮತ್ತು ಭಾಷಾಂತರ ಕಾರ್ಯ ಸೇರಿದಂತೆ ಡಿಟಿಪಿ ವ್ಯಯಕ್ಕಾಗಿ 49.99 ಲಕ್ಷ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ 28,600 ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.
ಸಮಿತಿಗಳು ಪಡೆದ ಹಣವೆಷ್ಟು?
2010ರಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿ 2.59 ಕೋಟಿ ಮತ್ತು ಪ್ರೊ ಮುಡಂಬಡಿತ್ತಾಯ ಸಮಿತಿ 3.63 ಕೋಟಿ ರೂ.ಯನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ನೀಡಿತ್ತು.
ಇದನ್ನೂ ಓದಿ: Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ
ಇನ್ನೂ ಸಂಭಾವನೆ ಲೆಕ್ಕಾಚಾರ ನೋಡೋದಾದ್ರೆ ರೋಹಿತ್ ಚಕ್ರತೀರ್ಥ ಸಮಿತಿ 33,800 ರೂ, ಬರಗೂರು ಸಮಿತಿ 5,45,000, ಮುಡಂಬಡಿತ್ತಾಯ ಸಮಿತಿ 3,75,000 ರೂ ಪಡೆದುಕೊಂಡಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ವಾಹನ ಭತ್ಯೆ ಮತ್ತು ಮೊಬೈಲ್ ಖರೀದಿಗೆ ಹಣ ಪಡೆದುಕೊಂಡಿಲ್ಲ.
ಸಮಿತಿಗಳ ವೆಚ್ಚದ ಮಾಹಿತಿ ಇಲ್ಲಿದೆ
ವೆಚ್ಚದ ವಿವರ |
ಮುಡಂಬಡಿತ್ತಾಯ ಸಮಿತಿ |
ಬರಗೂರು ಸಮಿತಿ |
ರೋಹಿತ್ ಚಕ್ರತೀರ್ಥ ಸಮಿತಿ |
ಸಂಭಾವನೆ |
3.75 ಲಕ್ಷ ರೂಪಾಯಿ |
5.45 ಲಕ್ಷ ರೂಪಾಯಿ |
33,800 ರೂ. (28,600 ರೂ ಬಾಕಿ) |
ವಾಹನ ಭತ್ಯೆ |
5.13 ಲಕ್ಷ ರೂಪಾಯಿ |
6.01 ಲಕ್ಷ ರೂಪಾಯಿ |
- |
ಮೊಬೈಲ್ ಖರೀದಿ |
3,007 ರೂಪಾಯಿ |
- |
- |
ಕಾರ್ಯಾಗಾರ / ಭಾಷಾಂತರ |
2.85 ಕೋಟಿ ರೂಪಾಯಿ |
1.79 ಕೋಟಿ |
22.65 ಲಕ್ಷ ರೂಪಾಯಿ |
ಡಿಟಿಪಿ |
69.32 ಲಕ್ಷ ರೂಪಾಯಿ |
68.46 ಲಕ್ಷ ರೂಪಾಯಿ |
20.70 ಲಕ್ಷ ರೂಪಾಯಿ |
ಒಟ್ಟು |
3.36 ಕೋಟಿ ರೂಪಾಯಿ |
2.59 ಕೋಟಿ ರೂಪಾಯಿ |
49.99 ಲಕ್ಷ ರೂಪಾಯಿ |
ಇನ್ನೂ ತಾವು ಪಡೆದ ಸಂಭಾವನೆ ಕುರಿತಾಗಿ ರೋಹಿತ್ ಚಕ್ರತೀರ್ಥ ಪ್ರತಿಕ್ರಿಸಿದ್ದಾರೆ. ಸಂಭಾವನೆ ಏಕೆ ಕಡಿಮೆ ತೆಗೆದುಕೊಂಡಿರಿ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ನಾನು ಕೇವಲ ಸಂಭಾವನೆಗಾಗಿ ಈ ಕೆಲಸ ಮಾಡಲಿಲ್ಲ. ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಕೆಲಸ ಮಾಡೋದು ನನ್ನ ಗುರಿಯಾಗಿತ್ತು ಎಂದು ಹೇಳುತ್ತಾರೆ.
ಇದನ್ನೂ ಓದಿ: Dharwad: ಸರ್ಕಾರಿ ಕಾಮಗಾರಿಗೆ ರೈತನ ಜಮೀನಿನ ಮಣ್ಣು ಬಳಕೆ; ಅಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹ
ಸಮಿತಿ ವಿಸರ್ಜನೆ ಮಾಡಿದ್ದಕ್ಕೆ ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ