• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohini Sindhuri: 'ನಿಧಾನಕ್ಕೆ ಆದ್ರೂ ಕರ್ಮ ಹಿಂದಿರುಗಿ ಬರುತ್ತೆ'! ಡಿ ರೂಪಾ Vs ರೋಹಿಣಿ ಸಿಂಧೂರಿ ಟಾಕ್​ ವಾರ್​ ನಡುವೆ ಕುಸುಮಾ ಎಂಟ್ರಿ

Rohini Sindhuri: 'ನಿಧಾನಕ್ಕೆ ಆದ್ರೂ ಕರ್ಮ ಹಿಂದಿರುಗಿ ಬರುತ್ತೆ'! ಡಿ ರೂಪಾ Vs ರೋಹಿಣಿ ಸಿಂಧೂರಿ ಟಾಕ್​ ವಾರ್​ ನಡುವೆ ಕುಸುಮಾ ಎಂಟ್ರಿ

ಡಿ ರೂಪಾ Vs ರೋಹಿಣಿ ಸಿಂಧೂರಿ

ಡಿ ರೂಪಾ Vs ರೋಹಿಣಿ ಸಿಂಧೂರಿ

ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಪರೋಕ್ಷವಾಗಿ ಟ್ವೀಟ್​ ಮಾಡಿರುವ ಕುಸುಮಾ ಹನುಮಂತರಾಯಪ್ಪ ಅವರು, "Karma will get back to you,sooner or later it surely will" ಎಂದು ಬರೆದುಕೊಂಡಿದ್ದಾರೆ.

  • Share this:

ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಹಿಳಾ ಐಎಎಸ್​​-ಐಪಿಎಸ್​​​ (IAS-IPS)​​​ ನಡುವೆ ವಾರ್​​​​ ಶುರುವಾಗಿದೆ. ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಪಿಎಸ್​​ ಡಿ.ರೂಪಾ (D.Roopa) ಅವರು ಬರೋಬ್ಬರಿ 19 ಅಂಶಗಳ ಆರೋಪ ಪಟ್ಟಿ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ರೂಪಾ ಅವರ ಆರೋಪಗಳಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದು, ನನ್ನನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ ಎಂದಿದ್ದಾರೆ. ಇಬ್ಬರ ಟಾಕ್​ ವಾರ್ ಜೋರಾಗುತ್ತಿದ್ದಂತೆ ದಿವಂಗತ ಐಎಎಸ್​ ಅಧಿಕಾರಿ ಡಿಕೆ ರವಿ (DK Ravi) ಅವರ ಪತ್ನಿ, ಕಾಂಗ್ರೆಸ್ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಎಂಟ್ರಿ ಕೊಟ್ಟಿದ್ದಾರೆ.


ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಪರೋಕ್ಷವಾಗಿ ಟ್ವೀಟ್​ ಮಾಡಿರುವ ಕುಸುಮಾ ಹನುಮಂತರಾಯಪ್ಪ ಅವರು, ತಾನು ಮಾಡಿದ ಪಾಪ ತನಗೆ ವಾಪಸ್ಸು ಬರುತ್ತದೆ, ತಕ್ಷಣಕ್ಕೆ ಆಗಬಹುದು ಅಥವಾ ತಡವಾಗಬಹುದು ("Karma will get back to you,sooner or later it surely will") ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Rohini Sindhuri: 'ಸಿಂಧೂರಿ ಫೋಟೋ ಫೇಕ್​ ಅಲ್ಲ, ಇದು ಜಸ್ಟ್ ಸ್ಯಾಂಪಲ್​ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ




ಕುಸುಮಾ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್​ ಅಧಿಕಾರಿ ಡಿ ರೂಪಾ ಅವರು, ಕುಸುಮಾ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಒಂದು ಹೆಣ್ಣಾಗಿ ನಿಮ್ಮ ನೋವು ನನಗೆ ಅರ್ಥ ಆಗುತ್ತೆ. ಕೆಲವು ಮಹಿಳೆಯರು ಇನ್ನೂ ಅಸಾಯಕರಾಗಿದ್ದಾರೆ. ಆದರೆ ಅಂತಿಮವಾಗಿ ಆರೋಪಿ ವಿರುದ್ಧ ನಿಲ್ಲಲೇ ಬೇಕು ಅಲ್ಲವಾ? ಅದು ಹೆಣ್ಣಾದರು ಸರಿ. ಈ ಹಿಂದೆ ಮಾಡಿದಂತಹ ತಪ್ಪುಗಳು ಆಕೆಯಿಂದ ಮರುಕಳಿಬಾರದು ಎಂದು ಹೋರಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.


ಇದೇ ವೇಳೆ ರೋಹಿಣಿ ಸಿಂಧೂರಿ ಅವರ ಹೇಳಿಕೆಗೂ ತಿರುಗೇಟು ನೀಡಿರುವ ಡಿ ರೂಪಾ ಅವರು, ರೋಹಿಣಿ ಅವರು ಬರೆದ ಸಾಲಿನಲ್ಲಿ ಡಿಕೆ ರವಿ ಸತ್ತದ್ದು Mental Illness ಇಂದ ಅಂತ ಬರೆದಿದ್ದಾರೆ. ಅಂದರೆ, ಎಷ್ಟೋ ಯುವಕರಿಗೆ ಸ್ಫೂರ್ತಿಯಾಗಿದ್ದ ಡಿಕೆ ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಲಿಸಿದರೆ? ನನ್ನ ಪ್ರಶ್ನೆ ಇಷ್ಟೇ. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್​​ನಲ್ಲಿ ಎಲ್ಲರ ಕೈ ಸೇರಿದೆ.


ಕುಸುಮಾ ಹನುಮಂತರಾಯಪ್ಪ ಟ್ವೀಟ್​


ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಇದು ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್​ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ ವೇದಿಕೆ​​ಗೆ ಹೋದರೂ, ಸತ್ಯ ಸತ್ಯವೇ ಸತ್ಯ ಮಣಿಸಲು ಸಾಧ್ಯವಿಲ್ಲ ಈ ಬಾರಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


ರೋಹಿಣಿ, ಡಿಕೆ ರವಿ ರಹಸ್ಯ ಬಿಚ್ಚಿಟ್ಟ ರೂಪಾ!


ಡಿಕೆ ರವಿ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ನಾನು ಈ ಮಾತನ್ನು ಹಲವು ಅಧಿಕಾರಿಗಳಿಗೆ ಹೇಳಿದ್ದೆ. ಯಾರೋ ಒಬ್ಬರು ತಪ್ಪು ಮಾಡುತ್ತಾರೆ, ಒಂದು ಹಂತ ಮೀರಿ ಮೇಸೆಜ್​ ಕಳುಹಿಸುತ್ತಾರೆ ಅಥವಾ ನಮ್ಮ ಬಗ್ಗೆ ಅನುರಾಗ ಬೆಳೆಸಿಕೊಳ್ಳುತ್ತಾರೆ ಎಂದರೆ ಅವರನ್ನು ಅಲ್ಲಿಯೇ ಬ್ಲಾಕ್ ಮಾಡಬಹುದು. ಆ ಮೂಲಕ ಸರಿಯಾದ ದಾರಿಯಲ್ಲಿ ನಡೆದುಕೊಳ್ಳಬಹುದು. ಇದನ್ನು ನಾನು ಅಂದೇ ಹೇಳಿದ್ದೆ. ಇದಾದ ಬಳಿಕ ಅನೇಕ ಘಟನೆಗಳು ನನಗೆ ತಿಳಿದು ಬಂದ ಕಾರಣ ಎಲ್ಲಾ ಅಂಶಗಳನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದೇನೆ.


ಇದನ್ನೂ ಓದಿ: IAS Vs IPS War: ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಆರೋಪಗಳ ಸುರಿಮಳೆ




ರೋಹಿಣಿ ಸಿಂಧೂರಿ ವಿರುದ್ಧ ಸಿಡಿದ ರೂಪಾ


ಮಂಡ್ಯದಲ್ಲಿ ಈಕೆ ಕಟ್ಟಿಸಿದ ಟಾಯ್ಲೆಟ್​​ಗಿಂತ ಹೆಚ್ಚು ತೋರಿಸಿ ಕೇಂದ್ರದ ಪ್ರಶಸ್ತಿ ತೆಗೆದುಕೊಂಡರು. ಚಾಮರಾಜನಗರದಲ್ಲಿ 24 ಜನ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು. ಐಎಎಸ್ ಅಧಿಕಾರಿಗಳಾದ ಶಿಲ್ಪಾ ನಾಗ್, ಮಣಿವಣ್ಣನ್, ಹರ್ಷ ಗುಪ್ತ ಜೊತೆ ಜಗಳ ಮಾಡಿದ್ದರು.


ಕನ್ನಡದ ಹುಡುಗ, ಎನ್.ಹರೀಶ್ ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡ. ಸಾರಾ ಮಹೇಶ್ ಮಾಡಿದ ಆಪಾದನೆಗಳು ಒಂದಾ ಎರಡಾ? ಮೈಸೂರು ಎಂಪಿ ಪ್ರತಾಪ್ ಸಿಂಹ ಮೇಲೆಯೂ ಅನೇಕ ಆರೋಪ ಮಾಡಿದ್ದರು. ಮೈಸೂರಿನ ಡಿಸಿ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿದ್ದರು. ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ? ಎಂದು ರೂಪಾ ಕಿಡಿಕಾರಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು