Rohini Sindhuri: ಮೈಸೂರಿನಲ್ಲಿದ್ದ ರೋಹಿಣಿ ಸಿಂಧೂರಿ ನಿವಾಸದ 28 ಲಕ್ಷ ರೂ. ವೆಚ್ಚದ ಈಜು ಕೊಳ ಹೇಗಿದೆ?

Rohini Sindhuri Swimming Pool: ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿರಲಿಲ್ಲ. ಈ ರೋಹಿಣಿ ಸಿಂಧೂರಿಗೆ ಸರ್ಕಾರಿ ನಿವಾಸದಲ್ಲಿ ಇದೆಲ್ಲ ಬೇಕಿತ್ತಾ? ಎಂದು ಸಾರಾ ಮಹೇಶ್ ಟೀಕಿಸಿದ್ದರು.

ರೋಹಿಣಿ ಸಿಂಧೂರಿ ನಿವಾಸದ್ಲಲಿದ್ದ ಈಜುಕೊಳ

ರೋಹಿಣಿ ಸಿಂಧೂರಿ ನಿವಾಸದ್ಲಲಿದ್ದ ಈಜುಕೊಳ

 • Share this:
  ಮೈಸೂರು (ಜೂನ್ 9): ಆಗಾಗ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಜಗಳದಿಂದ ಇಬ್ಬರನ್ನೂ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ಬದಲಾಗಿ ಬಗಾದಿ ಗೌತಮ್ ಅವರನ್ನು ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದೆಲ್ಲದರ ನಡುವೆ ಡಿಸಿ ರೋಹಿಣಿ ಸಿಂಧೂರಿ ಸರ್ಕಾರ ನಿವಾಸದಲ್ಲಿರುವ ಈಜು ಕೊಳ ತೀವ್ರ ಚರ್ಚೆಗೆ ಕಾರಣವಾಗಿದೆ.

  ಮೈಸೂರಿನಲ್ಲಿರುವ ಜಿಲ್ಲಾಧಿಕಾರಿಯ ಪಾರಂಪರಿಕ ಕಟ್ಟಡದಲ್ಲಿ ರೋಹಿಣಿ ಸಿಂಧೂರಿ 50 ಲಕ್ಷ ರೂ. ವೆಚ್ಚದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಪಾರಂಪರಿಕ ಕಟ್ಟಡದಲ್ಲಿ ಒಳಾಂಗಣ ಈಜುಕೊಳವನ್ನು ನಿರ್ಮಿಸಿಕೊಂಡಿರುವುದು ಪಾರಂಪರಿಕ ಕಾನೂನಿಗೆ ವಿರುದ್ಧವಾಗಿದೆ. ಜನರು ಕೊರೋನಾ, ಲಾಕ್​ಡೌನ್​ನಿಂದ ಸಾಯುತ್ತಿದ್ದರೆ ರೋಹಿಣಿ ಸಿಂಧೂರಿ ಐಷಾರಾಮಿ ಜೀವನಕ್ಕಾಗಿ ಸರ್ಕಾರದ ಹಣದಲ್ಲಿ ಈಜುಕೊಳ ಕಟ್ಟಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರ ಜೊತೆಗೆ ಜಿಮ್ ಉಪಕರಣಗಳಿರುವ ಖಾಸಗಿ ಜಿಮ್ ಕೂಡ ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿದೆ. ಇದಕ್ಕೂ ಭಾರೀ ವಿರೋಧ ವ್ಯಕ್ತವಾಗಿದೆ.

  ಇದನ್ನೂ ಓದಿ: Surya Grahan 2021: ಭಾರತದಲ್ಲೂ ಗೋಚರವಾಗುತ್ತಾ ವರ್ಷದ ಮೊದಲ ಸೂರ್ಯಗ್ರಹಣ?; ನಾಳೆಯ ಗ್ರಹಣದ ಬಗ್ಗೆ ನಿಮಗೆಷ್ಟು ಗೊತ್ತು?

  ರೋಹಿಣಿ ಸಿಂಧೂರಿ ಸರ್ಕಾರಿ ನಿವಾಸದಲ್ಲಿದ್ದ ಈಜು ಕೊಳದ ನಿರ್ಮಾಣದ ಬಗ್ಗೆ ತನಿಖೆ ನಡೆಸಬೇಕೆಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದರು. ಸರ್ಕಾರದ ಹಣವನ್ನು ತಮ್ಮ ನಿವಾಸದಲ್ಲಿ ಈಜುಕೊಳ ಮತ್ತು ಜಿಮ್ ನಿರ್ಮಿಸಲು ರೋಹಿಣಿ ಸಿಂಧೂರಿ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿರಲಿಲ್ಲ. ಈ ರೋಹಿಣಿ ಸಿಂಧೂರಿಗೆ ಅಧಿಕೃತ ನಿವಾಸದಲ್ಲಿ ಇದೆಲ್ಲ ಬೇಕಿತ್ತಾ? ಎಂದು ಸಾರಾ ಮಹೇಶ್ ಟೀಕಿಸಿದ್ದರು. ಹೀಗಾಗಿ, ಈ ಬಗ್ಗೆ ತನಿಖೆಗೂ ಆದೇಶ ನೀಡಲಾಗಿದೆ.

  ಈಗಾಗಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ, ಈ ಈಜುಕೊಳಕ್ಕೆ 50 ಲಕ್ಷ ರೂ. ಖರ್ಚಾಗಿದೆ ಎಂಬುದು ಸುಳ್ಳು. ಇದು 28.72 ಲಕ್ಷ ರೂ. ವೆಚ್ಚದ ಯೋಜನೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ಈಜುಕೊಳಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರ 5 ವರ್ಷಗಳ ಹಿಂದೆ ಯೋಜನೆ ರೂಪಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳವನ್ನು ನಿರ್ಮಿಸಲಾಗಿದೆ. ಈ ವರ್ಷ ಜನವರಿ ತಿಂಗಳಿಂದ ನಿರ್ಮಾಣ ಕಾಮಗಾರಿ ಶುರುವಾಗಿದೆ. ಈ ಈಜುಕೊಳವನ್ನು ಸ್ಥಾಪಿಸಲು ನಿರ್ಮಿತಿ ಕೇಂದ್ರದ ಕ್ಯಾಂಪಸ್​ನಲ್ಲಿ ಸ್ಥಳವಿಲ್ಲದ ಕಾರಣಕ್ಕೆ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು.

  ಈ ಈಜುಕೊಳ ನಿರ್ಮಾಣದಿಂದ ಮೈಸೂರಿನ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿಲ್ಲ. ಈ ಬಗ್ಗೆ ಶಾಸಕರು, ಸಂಸದರು ಮಾಡಿದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದ್ದರು.

  28 ಲಕ್ಷ ವೆಚ್ಚದ ಈಜುಕೊಳ ಹೇಗಿದೆ?:

  ಬರೋಬ್ಬರಿ 28.72 ಲಕ್ಷ ರೂ. ವೆಚ್ಚದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ನಿರ್ಮಿಸಲಾಗಿರುವ ಈಜುಕೊಳದಲ್ಲಿ ಅಂಥದ್ದು ಏನಿದೆ? ಎಂಬ ಪ್ರಶ್ನೆ ಉದ್ಭವವಾಗುವುದು ಸಾಮಾನ್ಯ. ಈಜುಕೊಳ ನಿರ್ಮಾಣಕ್ಕೆ ಸರ್ಕಾರದ 28 ಲಕ್ಷ ರೂ. ಹಣವನ್ನು ರೋಹಿಣಿ ಬಳಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಮೈಸೂರಿನ ಜಿಲ್ಲಾಧಿಕಾರಿಗೆ ನೀಡಲಾಗುವ ಪಾರಂಪರಿಕ ಕಟ್ಟಡದ ಒಂದು ಭಾಗದಲ್ಲಿ ಈ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದೆ. ಐಷಾರಾಮಿಯಾಗಿ ನಿರ್ಮಾಣವಾಗಿರುವ ಈ ಈಜು ಕೊಳವನ್ನು ಮಾಡರ್ನ್ ಆಗಿ ಕಟ್ಟಲಾಗಿದೆ. ಈ ಈಜುಕೊಳ ಮತ್ತು ಜಿಮ್​ನ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.
  Published by:Sushma Chakre
  First published: