Rohini Sindhuri: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆ

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು ಮೂರನೇ ಬಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೊಳ್ಳುತ್ತಿದ್ದಾರೆ. ಈ ಹಿಂದೆ ಅವರು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

news18-kannada
Updated:September 28, 2020, 10:47 PM IST
Rohini Sindhuri: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ವರ್ಗಾವಣೆ
ರೋಹಿಣಿ ಸಿಂಧೂರಿ
  • Share this:
ಮೈಸೂರು (ಸೆ.28): ಕಳೆದ ಒಂದು ತಿಂಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಶರತ್​ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಶ್ವವಿಖ್ಯಾತ ದಸರಾಗೆ ಅರಮನೆ ನಗರಿ ಸಜ್ಜಾಗುತ್ತಿರುವ ವೇಳೆ ಜಿಲ್ಲಾಧಿಕಾರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಗೆ ಜವಾಬ್ದಾರಿ ಮಾಡಲಾಗಿದೆ. ಅಧಿಕಾರಿ ಶರತ್​ ಕುಮಾರ್​ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ  ಮೂರನೇ ಬಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೊಳ್ಳುತ್ತಿದ್ದಾರೆ. ಈ ಹಿಂದೆ ಅವರು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. 



ಇದರ ಜೊತೆಗೆ  ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ(ಆರೋಗ್ಯ ಮತ್ತು ಐಟಿ) ಪಿ ರಾಜೇಂದ್ರ ಚೋಳನ್​, ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ (ಎಸ್ಟೇಟ್​) ಜೆ ಮಂಜುನಾಥ್​, ಬೆಂಗಳೂರು ಸ್ಮಾರ್ಟ್​ ಸಿಟಿ ಲಿಮಿಟೆಡ್​ಗೆ  ನಿರ್ವಹಣಾ ನಿರ್ದೇಶಕರಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ವರ್ಗಾವಣೆ ಮಾಡಲಾಗಿದೆ.

ಹಾಗೇ ಕರ್ನಾಟಕ ಸಿಲ್ಕ್​ ನಿರ್ವಹಣಾ ಮಂಡಳಿಗೆ ನಿರ್ವಹಣಾ​ ನಿರ್ದೇಶಕರಾಗಿ ಎಂಆರ್​ ರವಿ ಹಾಗೂ ಪಂಚಾಯತ್​ ರಾಜ್​  ನಿರ್ದೇಶಕರಾಗಿ ಪಿ ಶಿವಶಂಕರ್​ ಅವರನ್ನು ವರ್ಗಾವಣೆ ಮಾಡಲಾಗಿದೆ .

2009ರ ಬ್ಯಾಚ್​ ಐಎಎಸ್​ ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಖಡಕ್​ ಅಧಿಕಾರಿಯಾಗಿ  ಗುರುತಿಸಿಕೊಂಡಿದ್ದಾರೆ.  ಈ ಹಿಂದೆ  ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ವರ್ಗಾವಣೆ ಮಾಡಿ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡಿತ್ತು. ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ರಾಜ್ಯ ಹೈಕೋರ್ಟ್  ಇತ್ಯರ್ಥಪಡಿಸಿ, ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯುವಂತೆ ಆದೇಶಿಸಿತ್ತು.
Published by: Seema R
First published: September 28, 2020, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading