• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Rohini Sindhuri Vs D Roopa: ನಾನು ಕನ್ನಡಿಗ, ಡಿ ರೂಪಾಗೆ ಹೊಟ್ಟೆಕಿಚ್ಚು; ರೋಹಿಣಿ ಸಿಂಧೂರಿ ಪತಿ ಕೆಂಡ

Rohini Sindhuri Vs D Roopa: ನಾನು ಕನ್ನಡಿಗ, ಡಿ ರೂಪಾಗೆ ಹೊಟ್ಟೆಕಿಚ್ಚು; ರೋಹಿಣಿ ಸಿಂಧೂರಿ ಪತಿ ಕೆಂಡ

ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ

ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ

ರೂಪಾ ಅವರ ಪರ್ಸನಲ್ ಅಜೆಂಡಾ ಏನು ಎಂಬುವುದು ಗೊತ್ತಾಗಬೇಕು.  ಸಿಂಧೂರಿ ಬಗ್ಗೆ ಯಾಕೆ ಮಾತನಾಡ್ತಿದ್ದಾರೆ. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು.

 • News18 Kannada
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ (D Roopa) ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ತಲುಪಿದೆ. ನಿನ್ನೆ ಇಬ್ಬರ ನಡುವಿನ ಕಲಹದ ವೇಳೆ ದಿ.ಡಿಕೆ ರವಿ (DK Ravi) ಅವರ ಹೆಸರು ಪ್ರಸ್ತಾಪ ಮಾಡಲಾಗಿತ್ತು. ಡಿಕೆ ರವಿ ಹೆಸರು ಪ್ರಸ್ತಾಪದ ಬೆನ್ನಲ್ಲೇ ಅವರ ಪತ್ನಿ ಕುಸುಮಾ ಹಣುಮಂತರಾಯಪ್ಪ (Kusuma Hanumantharayappa) ಪ್ರತಿಕ್ರಿಯಿಸಿ, ಕರ್ಮ ರಿಟರ್ನ್ಸ್ ಎಂದಿದ್ದರು. ಇದೀಗ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ (Sudhir Reddy, Rohini Sindhuri Husband), ಪತ್ನಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿ, ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿರುವ ರೂಪಾ ಕಿಡಿಕಾಡಿದ್ದಾರೆ, ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣ ಸಹ ಬಳಕೆ ಮಾಡುತ್ತಿಲ್ಲ. ನಾನು ಆಂಧ್ರ ಪ್ರದೇಶದವನೂ ಅಲ್ಲ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಕನ್ನಡಿಗ. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ಈ ರೂಪಾ ಅನ್ನೋರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.


ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡಬಾರದು. ರೂಪಾ ವಿರುದ್ಧ ದೂರು ನೀಡುತ್ತೇನೆ ಎಂದು ಸುಧೀರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿ ರಾಜ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳುಹಿಸಿದ್ದಾರೆ ಎಂಬುದನ್ನು ರೂಪಾ ಅವರು ಹೇಳಲಿ ಎಂದು ಸುಧೀರ್ ರೆಡ್ಡಿ ಸವಾಲು ಹಾಕಿದ್ದಾರೆ.


ರೂಪಾ ಅವರ ಪರ್ಸನಲ್ ಅಜೆಂಡಾ ಏನು ಎಂಬುವುದು ಗೊತ್ತಾಗಬೇಕು.  ಸಿಂಧೂರಿ ಬಗ್ಗೆ ಯಾಕೆ ಮಾತನಾಡ್ತಿದ್ದಾರೆ. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು. ಮೂರು ಜನ ಐಎಎಸ್ ಅಧಿಕಾರಿಗಳು ಯಾರು ಅನ್ನೋದನ್ನು ರೂಪಾ ಸ್ಪಷ್ಟಪಡಿಸಬೇಕು. ಔಟ್ ಆಫ್ ಕಾಂಟಾಕ್ಟ್ ಫೋಟೋ ಯಾಕೆ ತೆಗೆದು ವೈರೆಲ್ ಮಾಡಿದ್ದಾರೆ. ನಾವು ಯಾರಿಗೂ ಶೇರ್ ಮಾಡಿಲ್ಲ, ಇವರಿಗೆ ಹೇಗೆ ಸಿಕ್ಕಿದೆ.
ನಮ್ಮದು ನೂರಾರು ಎಕರೆ ಲೇಔಟ್ ಇದೆ


ಡಿಎನ್ಎ ಕ್ಲಿನಿಕ್ ಅವರ ಸಿಸ್ಟರ್ ಬಳಿ ಹೇರ್ ಕಟ್ ಮಾಡ್ಸಿರೋದು ಆ ಪೋಟೊ ವೈರಲ್ ಮಾಡಿದ್ದಾರೆ. ನಮ್ಮ ತಂದೆ ಇಲ್ಲಿ ನೂರಾರು ಎಕರೆ ಲೇಔಟ್ ಮಾಡಿದ್ದಾರೆ. ನಮ್ಮ ಫ್ಯಾಮಿಲಿ ಐಬಿಎಂನಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಮನೆ ನಿರ್ಮಾಣದ ಆರೋಪಕ್ಕೆ ಉತ್ತರ ನೀಡಿದರು.


ರೋಹಿಣಿ ಸಿಂಧೂರಿ ಹೆಸರು ದುರ್ಬಳಕೆ ಮಾಡಿಲ್ಲ


ಡಿಕೆ ರವಿ ಅವರು ನಮ್ಮ ಜೊತೆಯಲ್ಲಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡಬಾರದು. ತಂದೆ 2011 ನಲ್ಲಿ ಜಮೀನು ಖರೀದಿ ಮಾಡಿದ್ದಾರೆ. 2016 ನಲ್ಲಿ ಕಾಂಪೌಂಡ್ ಹಾಕೋಕೆ ಹೋಗಿದ್ದೇವೆ. ಅವರ ನಂತರ ನಮ್ಮ ತಾಯಿಗೆ ಟ್ರಾನ್ಸಫರ್ ಆಗಬೇಕಿದೆ. ಈ ಹಿನ್ನೆಲೆ ನಾನು ದಾಖಲೆಗಳ ವರ್ಗಾವಣೆಗಾಗಿ ಓಡಾಡಿದ್ದೇನೆ. ಆದರೆ ನಾನು ರೋಹಿಣಿ ಸಿಂಧೂರಿ ಗಂಡ ಅಂತ ಹೇಳಿ ಎಲ್ಲೂ ನಾವೂ ದುರ್ಬಳಕೆ ಮಾಡಿಲ್ಲ ಎಂದು ಹೇಳಿದರು.


Rohini Sindhuri husband sudheer reddy slams D Roopa mrq
ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಪತಿ


ಇದನ್ನೂ ಓದಿ: Rohini Sindhuri: ರೋಹಿಣಿ ಸಿಂಧೂರಿ ಯಾರು? ಪದೇ ಪದೇ ವಿವಾದಕ್ಕೆ ಒಳಗಾಗ್ತಿರೋದೇಕೆ ಮಹಿಳಾ ಅಧಿಕಾರಿ?


ರೂಪಾಗೆ ಹೊಟ್ಟೆ ಕಿಚ್ಚು


ನಾನು ಯಾವತ್ತೂ ಮಾಧ್ಯಮದ ಮುಂದೆ ಬಂದವನಲ್ಲ.  ನನಗೆ ತೀರಾ ಪರ್ಸನಲ್ ಇರೋದ್ರಿಂದ ಬಂದು ಹೇಳಿದ್ದೇನೆ. ರೂಪಾ ಅವರಿಗೆ 10 ವರ್ಷ ಜೂನಿಯರ್ ಆಗಿರುವ ರೋಹಿಣಿ ಸಿಂಧೂರಿ ಒಳ್ಳೆಯ ಹೆಸರು ಮಾಡಿದ್ದಾಳೆ ಎಂಬ ಹೊಟ್ಟೆಕಿಚ್ಚು ಇರಬಹುದು ಎಂದು ವಾಗ್ದಾಳಿ ನಡೆಸಿದರು.

Published by:Mahmadrafik K
First published: