• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohini Sindhuri  Vs D Roopa: ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದ ರೋಹಿಣಿ ಸಿಂಧೂರಿ; ಇತ್ತ ದೂರು ದಾಖಲಿಸಿದ ಸುಧೀರ್ ರೆಡ್ಡಿ

Rohini Sindhuri  Vs D Roopa: ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದ ರೋಹಿಣಿ ಸಿಂಧೂರಿ; ಇತ್ತ ದೂರು ದಾಖಲಿಸಿದ ಸುಧೀರ್ ರೆಡ್ಡಿ

ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ

ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ

ಈ ರೀತಿ ವೈಯಕ್ತಿಕ ತೇಜೋವಧೆ ಮಾಡೋದು ತಪ್ಪು. ಕೆಲಸದ ಬಗ್ಗೆ ಏನಾದ್ರೂ ಮಾತನಾಡಿಲ್ಲ. ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದು ಡಿ ರೂಪಾ ಅವರಿಗೆ ಎಚ್ಚರಿಕೆ ನೀಡಿದರು.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ ರೂಪಾ ಆರೋಪಕ್ಕೆ (IPS Officer D Roopa) ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ನಿನ್ನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಇವತ್ತು ಕಚೇರಿಗೂ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri), ಮಾಧ್ಯಮದವರು ಮನೆ ಮುಂದೆ ಬಂದು ಪ್ರಶ್ನೆಗಳನ್ನು ಕೇಳಿದ್ರೆ ಉತ್ತರ ಹೇಳಲು ಆಗಲ್ಲ. ಎಲ್ಲೆಂದರಲ್ಲಿ ಆ ಬಗ್ಗೆ ಮಾತನಾಡೋದು ಬೇಡ. ಶೀಘ್ರದಲ್ಲಿಯೇ ಇದಕ್ಕೆಲ್ಲಾ ಉತ್ತರ ಕೊಡುವೆ ಎಂದ ರೋಹಿಣಿ ಸಿಂಧೂರಿ, ಈ ರೀತಿ ಮಾತನಾಡೋದು ಸರಿಯಲ್ಲ. ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮುಂದೆ ತರಬೇಕು. ಮಾತನಾಡುವ ವೇದಿಕೆಯೂ ಇದಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.


ಈ ರೀತಿ ವೈಯಕ್ತಿಕ ತೇಜೋವಧೆ ಮಾಡೋದು ತಪ್ಪು. ಕೆಲಸದ ಬಗ್ಗೆ ಏನಾದ್ರೂ ಮಾತನಾಡಿಲ್ಲ. ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದು ಡಿ ರೂಪಾ ಅವರಿಗೆ ಎಚ್ಚರಿಕೆ ನೀಡಿದರು.


ಡಿ ರೂಪಾ ವಿರುದ್ಧ ದೂರು ದಾಖಲು


ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಡಿ ರೂಪಾ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ  ಹೇಳಿದ್ದರು. ತಮ್ಮ ಹೇಳಿಕೆಯಂತೆ ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ಸುಧೀರ್ ರೆಡ್ಡಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.




ರೋಹಿಣಿ-ರೂಪ ಜಗಳದಲ್ಲಿ ನನ್ನ ಪಾತ್ರ ಇಲ್ಲ


ರೋಹಿಣಿ ಸಿಂಧೂರಿ ನನ್ನ ಬಳಿ ಕ್ಷಮೆ ಯಾಚಿಸಿದ್ದಾರೆ. ವಿಷಾದ ವ್ಯಕ್ತಪಡಿಸಿರೋ ಪತ್ರ ಬರೆದು ಕೊಟ್ಟಿದ್ದಾರೆ. ಗೋಮಾಳದಲ್ಲಿ ಕನ್ವೆಷನ್ ಹಾಲ್ ಇದೆ ಎಂದು ಆರೋಪ ಮಾಡಿದ್ದರು. ದಿಶಾ ಆ್ಯಪ್ ನಲ್ಲಿ ತಪ್ಪಾಗಿತ್ತು. ಹಾಗಾಗಿ ಗೊತ್ತಾಗಿಲ್ಲ ಎಂದಿದ್ದಾರೆ.




ಸಿಎಂ ಹಾಗೂ ಮಖ್ಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮೇಲೆ ಕ್ರಮ ಕೈಗೊಳ್ಳಬೇಕು. ರೋಹಿಣಿ ಹಾಗೂ ರೂಪ ನಡುವಿನ ಜಗಳದಲ್ಲಿ ನನ್ನ ಪಾತ್ರ ಇಲ್ಲ
ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ (Former Minister Sa Ra Mahesh) ಹೇಳಿದ್ದಾರೆ.


ರೋಹಿಣಿ ಸಿಂಧೂರಿಗೆ ಮತ್ತೆ ಡಿ.ರೂಪಾ ಟಾಂಗ್


Get well soon ಅಂತ ಹೇಳಿದ್ದಾರಲ್ಲ ಇವತ್ತು ರೋಹಿಣಿ ಸಿಂಧೂರಿ. ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ನಂಬರ್ ಅವರದ್ದೇ ಅಲ್ವಾ? ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ ಎಂದು ಪ್ರಶ್ನೆ ಮಾಡಿರುವ ಡಿ ರೂಪಾ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದಾರೆ.




ಸರ್ಕಾರ ಇಬ್ಬರನ್ನು ಅಮಾನತ್ತು ಮಾಡಬೇಕಿತ್ತು!


ಮಹಿಳಾ ಅಧಿಕಾರಿಗಳು ಬೀದಿ ಕಾಳಗ ಮಾಡುತ್ತಿದ್ದಾರೆ. ಇವರಿಗೆ ಯಾರ ಭಯವು ಇಲ್ಲ. ಸರ್ಕಾರ ಮತ್ತು ಮುಖ್ಯ ಕಾರ್ಯದರ್ಶಿಗಳಿದ್ದಾರೆ. ಇಷ್ಟೊತ್ತಿಗೆ ಸರ್ಕಾರ ಇಬ್ಬರು ಅಮಾನತು ಮಾಡಬೇಕಿತ್ತು ಎಂದು ಬಿಜೆಪಿ ಎಂಎಲ್​​ಸಿ ಹೆಚ್.ವಿಶ್ವನಾಥ್ (BJP MLC H VIshwanath) ಹೇಳಿದ್ದಾರೆ.




ಇದನ್ನೂ ಓದಿ: D Roopa-Rohini Sindhuri: ತಾರಕಕ್ಕೇರಿದ ಮಹಿಳಾ ಅಧಿಕಾರಿಗಳ ಸಮರ; ಕಾನೂನು ಹೋರಾಟ ಎಂದ ರೋಹಿಣಿ, ಸತ್ಯ ಸತ್ಯವೇ ಅಂತ ರೂಪಾ ಟಾಂಗ್!


ಸರ್ಕಾರ ಕ್ರಮ ತೆಗೆದುಕೊಳ್ಳಲಿ


ಶಾಸಕರು ಮತ್ತು ಐಎ‌ಎಸ್‌ ಅಧಿಕಾರಿ ಸಂಧಾನ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ಏನು ಸಂಧಾನ? ಏನು ಆಪಾದನೆ ಇದೆ?. ಬೊಮ್ಮಾಯಿಯವರು ಬಜೆಟ್ ಮಾಡಿದ್ದಾರೆ ಇಂತಹ ಅಧಿಕರಿಗಳನ್ನ ಇಟ್ಟುಕೊಂಡು ಯಾವ ರೀತಿ ಕೆಲಸ ಮಾಡ್ತಾರೆ. ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡ್ತೇವೆ. ಈ ಇಬ್ಬರು ಮಹಿಳಾ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.

Published by:Mahmadrafik K
First published: