ಮಂಡ್ಯದ ಕೆರೆಮೇಗಳದೊಡ್ಡಿಯಲ್ಲಿ ಯಶ್ ಪ್ರತ್ಯಕ್ಷ; ಜೋಡೆತ್ತು ಸಿನಿಮಾದಲ್ಲಿ ನಟಿಸುತ್ತಿಲ್ಲವೆಂದ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಯೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ಮದ್ದೂರಿನ ಕೆರೆಮೇಗಲದೊಡ್ಡಿ ಗ್ರಾಮಕ್ಕೆ ಬಂದಿದ್ದರು.

G Hareeshkumar | news18
Updated:May 15, 2019, 6:25 PM IST
ಮಂಡ್ಯದ ಕೆರೆಮೇಗಳದೊಡ್ಡಿಯಲ್ಲಿ ಯಶ್ ಪ್ರತ್ಯಕ್ಷ; ಜೋಡೆತ್ತು ಸಿನಿಮಾದಲ್ಲಿ ನಟಿಸುತ್ತಿಲ್ಲವೆಂದ ರಾಕಿಂಗ್ ಸ್ಟಾರ್
ನಟ ಯಶ್
  • News18
  • Last Updated: May 15, 2019, 6:25 PM IST
  • Share this:
ಮಂಡ್ಯ(ಮೇ 15): ಲೋಕಸಭೆ ಚುನಾವಣೆಯವರೆಗೂ ಮಾತ್ರ ಜೋಡೆತ್ತು. ಆಮೇಲೆ ಕಳ್ಳೆತ್ತು ಎಂಬಿತ್ಯಾದಿ ಟೀಕೆಗಳನ್ನ ಎದುರಿಸಿದ್ದ ರಾಕಿಂಗ್ ಸ್ಟಾರ್ ಯಶ್ ಇವತ್ತು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು. ಮದ್ದೂರಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಪ್ರತ್ಯಕ್ಷರಾದ ಯಶ್ ಅವರು, ತಾವು ಕೇವಲ ಪ್ರಚಾರಕ್ಕೆ ಬಂದವರು ಮಾತ್ರ. ಅಭ್ಯರ್ಥಿ ಸುಮಲತಾ ಅವರು ಕ್ಷೇತ್ರಕ್ಕೆ ಬರುವುದು ಮುಖ್ಯ ಎಂದು ಹೇಳಿದರು. ಚುನಾವಣೆ ಮುಗಿದ ಬಳಿಕ ಮಂಡ್ಯ ತಾವು ಬರಲೇ ಇಲ್ಲ ಎಂಬ ಸುದ್ದಿಯನ್ನು ತಳ್ಳಿಹಾಕಿದ ಯಶ್, ತಾವು ಈ ಜಿಲ್ಲೆಗೆ ಮೂರ್ನಾಲ್ಕು ಬಾರಿ ಬಂದಿರುವುದಾಗಿ ಸ್ಪಷ್ಟಪಡಿಸಿದರು.

ಸುಮಲತಾ ಗೆಲುವಿಗೆ ಒಳ್ಳೆಯ ವಾತಾವರಣ ಇದೆ

ಮಂಡ್ಯ ಚುನಾವಣೆಯ ಫಲಿತಾಂಶ ಸಾಧ್ಯತೆ ಬಗ್ಗೆ ಮಾತನಾಡಿದ ಯಶ್, ಈ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸುಮಲತಾ ಗೆಲುವಿಗೆ ಒಳ್ಳೆಯ ವಾತಾವರಣ ಇದೆ. ಆದರೆ, ಗೆಲುವಿನ ಅಂತರ ಹೇಳಿದರೆ ಕೊಚ್ಚಿಕೊಂಡಂತಾಗುತ್ತದೆ. ಸುಮಕ್ಕೆ ಗೆದ್ದರೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೋಡೆತ್ತುಗಳು ಮಂಡ್ಯ ಜನರ ಕಷ್ಟಕ್ಕೆ ಬರಲ್ಲ ಎಂದು ಕೆ.ಆರ್. ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ ಮೊದಲಾದವರು ಮಾಡಿದ ಟೀಕೆಗೂ ಯಶ್ ಖಾರದ ಪ್ರತಿಕ್ರಿಯೆ ನೀಡಿದರು. “ಯಾರೋ ನಮ್ಮನ್ನ ಜನರ ಕಷ್ಟ ಸುಖಕ್ಕೆ ಆಗ್ತಾರಾ ಅಂತ ಕೇಳ್ತಿದ್ರು. ಅವರ ಮಾತು ಕೇಳಿದ್ರೆ ನಗು ಬರುತ್ತದೆ. ಅಭ್ಯರ್ಥಿಗಳನ್ನ ಗೆಲ್ಲಿಸುವುದು ಜನರ ಕಷ್ಟ ಸುಖಕ್ಕೆ ಆಗಲಿ ಅಂತ” ಎಂದು ಯಶ್ ಮಾರ್ಮಿಕವಾಗಿ ಹೇಳಿದರು.

ಇನ್ನು, ಲೋಕಸಭೆ ಚುನಾವಣೆ ವೇಳೆ ರಾಜ್ಯಾದ್ಯಂತ ಖ್ಯಾತವಾದ ಜೋಡೆತ್ತು ಪದ ಈಗ ಸಿನಿಮಾದ ಟೈಟಲ್ ಆಗಿ ಸೆಟ್ಟೇರುತ್ತಿದೆ. ಈ ಕುರಿತು ಮಾತನಾಡಿದ ಯಶ್, “ದರ್ಶನ್ ಪ್ರೀತಿಯಿಂದ ಜೋಡೆತ್ತು ಎಂದು ಹೇಳಿದ್ರು. ದರ್ಶನ್ ನನಗಿಂತ ಸೀನಿಯರ್ ನಟ. ಅವರು ಹೇಳಿದ ಜೋಡೆತ್ತು ತುಂಬಾ ಫೇಮಸ್ ಆಯ್ತು. ಜೋಡೆತ್ತು ಟೈಟಲ್ ರಿಜಿಸ್ಟರ್ ಆಗಿದೆ” ಎಂದು ತಿಳಿಸಿದರು.

 ಒಳ್ಳೆಯ ಕಥೆ ಸಿಕ್ಕಿದ್ರೆ ನಟಿಸುತ್ತೇನೆ

ಆದರೆ, ತಾವು ಜೋಡೆತ್ತು ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದೂ ಯಶ್ ಸ್ಪಷ್ಟಪಡಿಸಿದರು. “ನಾನು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ದರ್ಶನ್ ಅವರಂತಹ ದೊಡ್ಡ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂದರೆ ಒಳ್ಳೆಯ ಕಥೆ ಸಿಗಬೇಕು” ಎಂದು ಯಶ್ ಹೇಳಿದರು.ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಟ್ರೋಲ್​​​ಗೆ ಕಾರಣವಾದ “ನಿಖಿಲ್ ಎಲ್ಲಿದ್ದೀಯಪ್ಪಾ” ಡೈಲಾಗ್ ಕೂಡ ಈಗ ಸಿನಿಮಾ ಟೈಟಲ್ ಆಗಿದೆ. ಈ ಬಗ್ಗೆಯೂ ಮಾತನಾಡಿದ ಯಶ್, ಆ ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

“ನಿಖಿಲ್ ಎಲ್ಲಿದ್ದೀಯಪ್ಪ” ಸಿನಿಮಾ ಟೈಟಲ್ ಇಟ್ಟುಕೊಂಡು ನಿಖಿಲ್ ಅವರನ್ನೇ ಹೀರೋ ಆಗಿಸಿ ಚಿತ್ರ ನಿರ್ಮಾಣ ಮಾಡುವುದಾಗಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಹೇಳಿದ್ದರು. ಆದರೆ, ಇದೀಗ ಈ ಸಿನಿಮಾ ಟೈಟಲ್ ಅನ್ನು ಬೇರೆಯವರು ನೊಂದಣಿ ಮಾಡಿಸಿದ್ದಾರೆ.

ಇದನ್ನೂ ಓದಿ : KGF Chapter 2: ಹೊಸ ದಾಖಲೆಯತ್ತ 'ಕೆ.ಜಿ.ಎಫ್​ ಚಾಪ್ಟರ್​ 2': ಇದರ ಬಜೆಟ್​ ಕೇಳಿದ್ರೆ ದಂಗಾಗುತ್ತೀರಾ..!

ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಅಭಿಮಾನಿಯೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ಕೆರೆಮೇಗಲದೊಡ್ಡಿ ಗ್ರಾಮಕ್ಕೆ ಬಂದಿದ್ದರು. ಮದ್ದೂರಿನ ಕೊಪ್ಪ ಸರ್ಕಲ್ ಮತ್ತು ಕೆರೆಮೇಗಲದೊಡ್ಡಿ ಗ್ರಾಮದಲ್ಲಿ ಜನರು ಯಶ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

(ವರದಿ: ರಾಘವೇಂದ್ರ ಗಂಜಾಮ್)

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

 

First published: May 15, 2019, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading