• Home
 • »
 • News
 • »
 • state
 • »
 • YASH: ತಿಮ್ಲಾಪುರ ಗ್ರಾಮಸ್ಥರೊಂದಿಗೆ ನಟ ಯಶ್​​ ಜಮೀನು ವಿವಾದ ಸುಖಾಂತ್ಯ

YASH: ತಿಮ್ಲಾಪುರ ಗ್ರಾಮಸ್ಥರೊಂದಿಗೆ ನಟ ಯಶ್​​ ಜಮೀನು ವಿವಾದ ಸುಖಾಂತ್ಯ

ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಯಶ್​ ಮ್ಯಾನೇಜರ್​ಗಳು

ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಯಶ್​ ಮ್ಯಾನೇಜರ್​ಗಳು

ಯಶ್​ ಪರವಾಗಿ ಅವರ ಮ್ಯಾನೇಜರ್​ಗಳು ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಈ ವಿವಾದ ಸುಖಾಂತ್ಯ ಕಂಡಿದೆ.

 • Share this:

  ಹಾಸನ (ಮಾ. 16): ಜಮೀನು ರಸ್ತೆ ನಿರ್ಮಾಣ ವಿಚಾರವಾಗಿ ವಿವಾದಕ್ಕೆ ಸಿಲುಕಿ ನಟ ಯಶ್​ ಮತ್ತು ಅವರ ಪೋಷಕರು ಸುದ್ದಿಯಾಗಿದ್ದರು. ಈ ಪ್ರಕರಣದ ಕುರಿತು ಗ್ರಾಮಸ್ಥರೊಂದಿಗೆ ನಟ ಯಶ್​ ಸಂಧಾನ ಮಾತುಕತೆ ನಡೆಸಿದ್ದು, ಅದು ಯಶಸ್ವಿಯಾಗಿದೆ.  ಯಶ್​ ಪರವಾಗಿ ಅವರ ಮ್ಯಾನೇಜರ್​ಗಳು ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಈ ವಿವಾದ ಸುಖಾಂತ್ಯ ಕಂಡಿದೆ. ಮಾಹಿತಿ ಕೊರತೆಯಿಂದಾಗಿ ಗ್ರಾಮಸ್ಥರು ಮತ್ತು ಯಶ್​ ಪೋಷಕರೊಂದಿಗೆ ಜಗಳ ನಡೆದಿದ್ದು, ಈಗ ಎಲ್ಲವೂ ಸ್ಪಷ್ಟವಾಗಿದೆ. ಇದರಲ್ಲಿ ನಮ್ಮದೇನು ತಕರಾರಿಲ್ಲ. ಇಲ್ಲಿ ಮೊದಲಿದ್ದ ಹಾಗೇ ರಸ್ತೆ ಇರಲಿದ್ದು, ಅದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಯಶ್​ ಮ್ಯಾನೇಜರ್​ಗಳಾದ ಹೇಮಂತ್​ ಮತ್ತು ಚೇತನ್​ ಸ್ಪಷ್ಟಪಡಿಸಿದ್ದಾರೆ.


  ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಯಶ್​ ಮ್ಯಾನೇಜರ್​ಗಳು


  ಏನಾಯಿತು ಮಾತುಕತೆ


  ಜಿಲ್ಲೆಯ ತಿಮ್ಲಾಪುರ ಗ್ರಾಮದಲ್ಲಿ ಯಶ್​ ಫಾರ್ಮ್​ ಹೌಸ್​ ನಿರ್ಮಾಣಕ್ಕೆ ಜಮೀನು ಖರೀದಿಸಿದ್ದಾರೆ. ಈ ಜಮೀನಿಗೆ ನಾಲ್ಕು ಮಾರ್ಗದ ಮೂಲಕ ರಸ್ತೆ ಇದೆ. ಒಂದು ರಸ್ತೆಯಲ್ಲಿ ಜಮೀನು ಕೃಷಿ ಹೊಂಡಗಳು ಇವೆ. ಗ್ರಾಮಸ್ಥರು ಮತ್ತು ಯಶ್​ ಪೋಷಕರ ನಡುವಿನ ಗೊಂದಲದಿಂದ ಈ ಮಾರ್ಗಕ್ಕೆ ರಸ್ತೆ ನಿರ್ಮಿಸಲಾಗುತ್ತಿದೆ ಎನ್ನಲಾಗಿತ್ತು. ಇದರಿಂದ ಸಣ್ಣ ಜಮೀನು ಹೊಂದಿರುವವರು ವಿರೋಧಿಸಿದ್ದರು. ಅಲ್ಲದೇ, ಈ ರಸ್ತೆ ನಿರ್ಮಾಣದ ವಿಚಾರದ ಕುರಿತು ಯಶ್​ಗೂ ತಿಳಿದಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಮತ್ತು ಯಶ್​ ಕುಟುಂಬದವರ ಮಧ್ಯೆ ತಪ್ಪು ಮಾಹಿತಿ ರವಾನೆಯಾಗಿದರ ಪರಿಣಾಮ ಜಗಳಕ್ಕೆ ಕಾರಣವಾಗಿತ್ತು.


  ಈ ಪ್ರಕರಣದಲ್ಲಿ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ನಟ ಯಶ್​ ಕೂಡ ಇಲ್ಲಿನ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈಗ ಈ ವಿವಾದವನ್ನು ದೂರಿನ ಬದಲಾಗಿ ಸಂಧಾನದ ಮೂಲಕ ಇತ್ಯರ್ಥ ನಡೆಸಲಾಗಿದೆ


  ಇಂದು ಯಶ್​ ಮ್ಯಾನೇಜರ್​ಗಳು ತಿಮ್ಲಾಪುರ ಗ್ರಾಮದ ಕಾಲಭೈರವ ದೇವಾಲಯದಲ್ಲಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಈ ಮಾರ್ಗದಲ್ಲಿ ಯಾವುದೇ ರಸ್ತೆ ನಿರ್ಮಿಸುವುದಿಲ್ಲ ಎಂದು ಸ್ಪಷ್ಟವಾಗಿ ಮನವರಿಕೆ ಮಾಡಲಾಗಿದೆ. ಅಲ್ಲದೇ, ತಾವು ಹಳೆಯ ರಸ್ತೆಯಲ್ಲಿಯೇ ಓಡಾಡುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಈ ಮಾತುಕತೆ ಯಶಸ್ಸು ಕಂಡಿದೆ.


  ಇದನ್ನು ಓದಿ: ಯಶ್​ ವಿರುದ್ಧ ಹಾಸನದ ತಿಮ್ಲಾಪುರ ಗ್ರಾಮಸ್ಥರ ಆಕ್ರೋಶ; ಏನಿದು ಗಲಾಟೆ?


  ಸಭೆ ಬಳಿಕ ಮಾತನಾಡಿರುವ ಗ್ರಾಮಸ್ಥರು ಇದು ಮಾಹಿತಿ ಕೊರತೆಯಿಂದಾಗಿ ಇಬ್ಬರ ಮಧ್ಯೆ ಈ ಗಲಭೆ ನಡೆದಿದೆ. ಯಶ್​ಗಾಗಿ ನಾವು ಗ್ರಾಮದ ಯಾವುದೇ ರಸ್ತೆ ನೀಡಲು ಸಿದ್ಧ ಎಂದಿದ್ದಾರೆ.


  ಯಶ್​ ಕೂಡ ಫೋನ್​ ಮೂಲಕ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಗ್ರಾಮಕ್ಕೆ ಬೇಕಾದ ಅಭಿವೃದ್ಧಿ ಮಾಡಲು ಸಿದ್ಧ ಎಂಬ ಭರವಸೆ ನೀಡಿದ್ದಾರೆ. ಅಲ್ಲದೇ, ಶೀಘ್ರದಲ್ಲಿಯೇ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


  (ಮಾಹಿತಿ: ಅಶೋಕ್ ಕುಮಾರ್​ ​)

  Published by:Seema R
  First published: