ಯಶ್ ಐಟಿ ವಿಚಾರಣೆ ಹಿಂದಿನ ಅಸಲಿ ಕಹಾನಿ; ರಾಕಿಂಗ್ ಸ್ಟಾರ್​ಗೆ ಟಿಪ್ಸ್ ಕೊಟ್ಟ ಪ್ರಭಾವಿ ರಾಜಕಾರಣಿ ಯಾರು?

ಐಟಿ ವಿಚಾರಣೆಯಲ್ಲಿ ಸಮರ್ಪಕ ಉತ್ತರ ಕೊಡದಿದ್ದರೆ ಕೇಸ್​ಗಳು ಬೀಳೋದು ನಿಶ್ಚಿತ. ಇದೇ ಆತಂಕದಲ್ಲಿ ಡಿಕೆ ಶಿವಕುಮಾರ್ ಅವರಿಂದ ಟಿಪ್ಸ್ ಪಡೆದದ್ದು ಯಶ್​ಗೆ ಉಪಯೋಗಕ್ಕೆ ಬಂದಿತು.

Vijayasarthy SN | news18
Updated:January 12, 2019, 8:59 PM IST
ಯಶ್ ಐಟಿ ವಿಚಾರಣೆ ಹಿಂದಿನ ಅಸಲಿ ಕಹಾನಿ; ರಾಕಿಂಗ್ ಸ್ಟಾರ್​ಗೆ ಟಿಪ್ಸ್ ಕೊಟ್ಟ ಪ್ರಭಾವಿ ರಾಜಕಾರಣಿ ಯಾರು?
ಯಶ್
Vijayasarthy SN | news18
Updated: January 12, 2019, 8:59 PM IST
- ಚಿದಾನಂದ ಪಟೇಲ್,

ಬೆಂಗಳೂರು(ಜ. 12): ಒಂದು ಕಡೆ ಕೆಜಿಎಫ್ ಸಿನಿಮಾದ ವಿನ್ನಿಂಗ್ ಓಟ, ಇನ್ನೊಂದು ಕಡೆ ಐಟಿ ರೇಡ್​ನ ಸ್ಫೋಟಕ ಆಟ – ಈ ಎರಡೂ ಪ್ರಸಂಗಗಳು ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಪ್ರತಿ ನಿತ್ಯವೂ ಮಾಧ್ಯಮಗಳಲ್ಲಿ ನಿರಂತರ ಸದ್ದಾಗುವಂತೆ ಮಾಡಿದ್ದವು. ಐಟಿ ರೇಡ್ ಇಡೀ ಸ್ಯಾಂಡಲ್​ವುಡ್​ಗೆ ಹೊಸ ಅನುಭವ. ಯಶ್ ಅವರಿಗೂ ಹೊಸ ಅನುಭವ. ರೇಡ್ ನಡೆದ ದಿನ ಅವರು ಬಹಳ ಕೂಲ್ ಆಗಿದ್ದರು. ಐಟಿ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಾವೇನು ತೆರಿಗೆ ವಂಚನೆ ಎಸಗಿಲ್ಲ. ಭಯ ಪಡುವಂಥದ್ದು ಏನೂ ಇಲ್ಲ ಎಂದು ಯಶ್ ಹೇಳಿದ್ದರು. ರೇಡ್ ಎರಡನೇ ದಿನವೂ ಮುಂದುವರಿದಾಗ ಯಶ್ ತಾಳ್ಮೆ ಕಳೆದುಕೊಂಡಿದ್ದು ಗಮನಕ್ಕೆ ಬಂದಿತ್ತು. ತಮ್ಮ ಖಾಸಗಿ ವಿಷಯಗಳು ಮಾಧ್ಯಮಗಳಿಗೆ ಯಾಕೆ ಲೀಕ್ ಆಗುತ್ತಿವೆ ಎಂದು ಐಟಿ ಅಧಿಕಾರಿಗಳನ್ನೇ ಯಶ್ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಸುಮಾರು 1 ವರ್ಷದ ಬಳಿಕ ಧೋನಿ ಬ್ಯಾಟ್​ನಿಂದ ಬಂತು ಅರ್ಧಶತಕ

ಐಟಿ ರೇಡ್ ಮುಗಿದು, ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದೂ ಆಯಿತು. ಆದರೆ, ವಿಚಾರಣೆಗೆ ಬರಬೇಕೆಂದು ಯಶ್ ಅವರಿಗೆ ಐಟಿ ಅಧಿಕಾರಿಗಳು ನೋಟೀಸ್ ಕೊಟ್ಟಾಗ ರಾಕಿಂಗ್ ಸ್ಟಾರ್ ನಿಜಕ್ಕೂ ಗೊಂದಲಕ್ಕೊಳಗಾಗಿದ್ದಂತಿತ್ತು. ಆ ಸಂದರ್ಭದಲ್ಲಿ ಯಶ್ ಅವರಿಗೆ ಆಪದ್ಬಾಂಧವರಂತೆ ನೆನಪಾಗಿದ್ದು ಒಬ್ಬ ಪ್ರಭಾವಿ ರಾಜಕಾರಣಿ. ಇಂಥ ಹಲವು ಪಟ್ಟು ಅಧಿಕ ಐಟಿ ರೇಡ್​ಗಳ ತೀವ್ರತೆಯನ್ನು ಅನುಭವಿಸಿರುವ ಕರ್ನಾಟಕದ ಏಕೈಕ ರಾಜಕಾರಣಿ ಎಂದರೆ ಅದು ಡಿಕೆ ಶಿವಕುಮಾರ್. ಕನಕಪುರ ಸಾಮ್ರಾಟ ಡಿಕೆಶಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ ಯಶ್, ಐಟಿ ವಿಚಾರಣೆ ಎದುರಿಸುವುದು ಹೇಗೆಂಬ ಟಿಪ್ಸ್ ಪಡೆದರಂತೆ. ಅನುಭವಿ ವ್ಯಕ್ತಿ ಹೇಳಿಕೊಟ್ಟ ಪಾಠಗಳು ಯಶ್ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಡಿಕೆಶಿ ಭೇಟಿ ಬಳಿಕ ನಿರಾಳವಾಗಿ ಐಟಿ ವಿಚಾರಣೆಗೆ ಹೋದ ಯಶ್ ಯಾವುದೇ ಆತಂಕವಿಲ್ಲದೆ ಅಧಿಕಾರಿಗಳ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟರೆನ್ನಲಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ತೋರಿಸಿದರು ಪೋರ್ನ್ ವಿಡಿಯೋ

ಇದೇ ಜನವರಿ 3ರಿಂದ 3 ದಿನಗಳ ತನಕ ಸ್ಯಾಂಡಲ್​ವುಡ್​ನ ಅನೇಕ ಪ್ರಭಾವಿ ವ್ಯಕ್ತಿಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದವು. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಂಗದೂರು, ರಾಕ್​ಲೈನ್ ವೆಂಕಟೇಶ್, ಕಿಚ್ಚ ಸುದೀಪ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಯಶ್ ಮೊದಲಾದವರ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿ ವ್ಯಾಪಕ ಶೋಧ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದವು. ಈ ದಾಳಿಗಳಲ್ಲಿ ಒಟ್ಟಾರೆ 100 ಕೋಟಿಗೂ ಹೆಚ್ಚು ಮೌಲ್ಯದ ‘ಅಕ್ರಮ’ ಆಸ್ತಿ ಪತ್ತೆಯಾಗಿದ್ದವೆನ್ನಲಾಗಿದೆ.
Loading...

ವಿಡಿಯೋ: 
ಇರುವಷ್ಟು ದಿನ ಚಚ್ಚಾಕುತ್ತೇನೆ: ರೇವಣ್ಣ
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...