• Home
  • »
  • News
  • »
  • state
  • »
  • Arrested 10 People: ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಕೇಸ್​: ಪೊಲೀಸರಿಂದ 10 ಮಂದಿಯ ಬಂಧನ

Arrested 10 People: ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಕೇಸ್​: ಪೊಲೀಸರಿಂದ 10 ಮಂದಿಯ ಬಂಧನ

ದರೋಡೆ ಕೇಸ್; ಆರೋಪಿಗಳನ್ನು ಬಂಧಿಸಿದ ಪೊಲೀಸರು

ದರೋಡೆ ಕೇಸ್; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಖತರ್ನಾಕ್​ ದರೋಡೆಕೋರರ ಬಂಧನ, ಬಂಧಿತರಿಂದ 311 ಗ್ರಾಂ ಚಿನ್ನಾಭರಣ, 44 ಸಾವಿರ ನಗದು ಸೇರಿ 35.5 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ ಹಾಗೂ 6 ಲಕ್ಷ ಮೌಲ್ಯದ ನಾಲ್ಕು ಬೈಕ್​​ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • Share this:

ಬೆಳಗಾವಿ (ಸೆ.28)-  ಗೋಕಾಕ್ (Gokak) ಚಿನ್ನಾಭರಣ  ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಪ್ರಕರಣವನ್ನು  ಭೇದಿಸುವಲ್ಲಿ ಬೆಳಗಾವಿ  ಪೊಲೀಸರು (Police) ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 10 ಜನ ದರೋಡೆಕೋರರ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.  ಬೆಳಗಾವಿ ಎಸ್ಪಿ ಡಾ.ಸಂಜೀವ ಪಾಟೀಲ್ (Sanjeev Patil) ಮಾರ್ಗದರ್ಶನದಲ್ಲಿ ಕಾರ್ಯಾಚರಣೆ (Operation) ನಡೆದಿದೆ. ಬಂಧಿತರಿಂದ 311 ಗ್ರಾಂ ಚಿನ್ನಾಭರಣ, 44 ಸಾವಿರ ನಗದು ಸೇರಿ 35.5 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದ್ದು,  6 ಲಕ್ಷ ಮೌಲ್ಯದ ನಾಲ್ಕು ಬೈಕ್​ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ


ಗೋಕಾಕ್ ತಾಲೂಕಿನ ಶಿಂಧಿಕರಬೇಟ ಗ್ರಾಮದ ಸಂಜೀವ ಪೋತದಾರ,‌ ರವೀಂದ್ರ ಪೋತದಾರ್ ಗೋಕಾಕ್ ನಗರದಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದರು. ನಿತ್ಯ ಕೆಲಸ ಮುಗಿಸಿ ನಿತ್ಯ ಗೋಕಾಕ್‌ದಿಂದ ಶಿಂಧಿಕುರಬೇಟ ಗ್ರಾಮಕ್ಕೆ ಮರಳುತ್ತಿದ್ದ ಸಹೋದರರು. ಇದನ್ನು ಗಮನಿಸಿ ದರೋಡೆ ಮಾಡಲು ಹೊಂಚು ಹಾಕಿದ್ದ ದುಷ್ಕರ್ಮಿಗಳು ಸೆ. 16ರಂದು ರಾತ್ರಿ ವೇಳೆ ಲೋಳಸೂರ ಗ್ರಾಮದ ಬಳಿ ವ್ಯಾಪಾರಿಗಳನ್ನು ಅಡ್ಡಗಟ್ಟಿದರು.


ಹಲ್ಲೆ ಮಾಡಿ ಬ್ಯಾಗ್​ ಕದ್ದು ಪರಾರಿ


ಕಬ್ಬಿಣದ ರಾಡ್‌ನಿಂದ ಹೊಡೆದು ಅವರ ಬಳಿ ಇದ್ದ ಬ್ಯಾಗ್‌ ಎತ್ತಿಕೊಂಡು ‍ಪರಾರಿಯಾಗಿದ್ದರು ಕಳ್ಳರು. ಈ ಬಗ್ಗೆ ಘಟಪ್ರಭಾ ಠಾಣೆಗೆ ದೂರು ಸಲ್ಲಿಸಿದ್ದ ಪೋತದಾರ ಸಹೋದರರು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಸ್ಕೆಚ್ ಸಿದ್ಧಪಡಿಸಿದ ಘಟಪ್ರಭಾ ಠಾಣೆ ಪೊಲೀಸರು. ಗೋವಾ, ಮಹಾರಾಷ್ಟ್ರ ರಾಜ್ಯದಲ್ಲಿರುವ ಹಲವು ಸಲ ಓಡಾಡಿ ಬಂದಿದ್ದರು. ಕೊನೆಗೂ ಆರೋಪಿಗಳ ಸುಳಿವು ಹಿಡಿದು ದೊಡ್ಡ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ 10 ಜನರನ್ನು ಬಂಧಿಸಲಾಗಿದ್ದು, ಸೆ. 24ರಂದು ಆರು ಮಂದಿ, ಸೆ. 27ಕ್ಕೆ ನಾಲ್ವರನ್ನು ಬಂಧಿಸಲಾಗಿದೆ.


ಇದನ್ನೂ ಓದಿ: CET Ranking List: ಬೆಳಗ್ಗೆ ಒಂದು ಡೇಟ್ ಸಂಜೆ ಮತ್ತೊಂದು ಡೇಟ್! ಸಿಇಟಿ ಪರಿಷ್ಕೃತ Ranking ಪಟ್ಟಿ ಬಿಡುಗಡೆ ದಿನಾಂಕ ಮತ್ತೆ ಮುಂದೂಡಿಕೆ!


10 ಮಂದಿ ಆರೋಪಿಗಳ ಬಂಧನ


ಬೆಳಗಾವಿ ತಾಲೂಕಿನ ಕಣಬರಗಿಯ ಸಿದ್ಧಾರ್ಥ ಚಾಂಗದೇವ ಕಡೋಲ್ಕರ್, ಪ್ರದೀಪ ಬಸವರಾಜ ಬೂಶಿ, ಮಾರುತಿ ರಾಜು ಸಾಳವಂಕೆ, ಸೌರಭ ಲಕ್ಷ್ಮಣ ಮಾಲಾಯಿ, ಸೋನೋಲಿ ಗ್ರಾಮದ ಮುತಗೇಕರ, ಮೆಳವಂಕಿ ಗ್ರಾಮದ ಅನಿಲ ರಾಮಚಂದ್ರ ಪತ್ತಾರ, ಶಿನ್ನೋಳಿ ಗ್ರಾಮದ ಪಂಕಜ ಖಾಂಡೇಕರ, ಕುದರೆಮನಿಯ ವಿಜಯ ನಾಗೋಬಾ ಕದಂ, ಸಾಗರ ಪಾಟೀಲ್,  ತುರ್ಕೇವಾಡಿ ಗ್ರಾಮದ ಮನೋಹರ ಸೋನಾರ ಬಂಧಿತರು. ಬಂಧಿತರೆಲ್ಲರೂ 19 ರಿಂದ 24 ವರ್ಷ ವಯಸ್ಸಿನೊಳಗೆ ಇದ್ದವರು.


ಇದನ್ನೂ ಓದಿ:  Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 


ಬಂಧಿತರಿಂದ ಹಣ, ಚಿನ್ನ ವಶಕ್ಕೆ ಪಡೆದ ಪೊಲೀಸರು


ಬಂಧಿತರಿಂದ 311 ಗ್ರಾಂ ಚಿನ್ನಾಭರಣ, 44 ಸಾವಿರ ನಗದು ಸೇರಿ 35.5 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ ಹಾಗೂ 6 ಲಕ್ಷ ಮೌಲ್ಯದ ನಾಲ್ಕು ಬೈಕ್​​ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕಾಕ್ ಡಿಎಸ್ಪಿ ಮನೋಜಕುಮಾರ ನಾಯ್ಕ ನೇತೃತ್ವದ ತಂಡದಿಂದ‌ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಎಸ್ಪಿ ಡಾ. ಸಂಜೀವ್ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಡಕಾಯಿತಿ ಮಾಡಿದ  ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳುವ ತನಿಖೆ ಮುಂದುವರೆದಿದೆ. ಚಿನ್ನಾಭರಣ ವ್ಯಾಪಾರಿಯನ್ನು ಟಾರ್ಗೆಟ್ ಮಾಡಲಾಗಿದ್ದ ದರೋಡೆ ಗೋಕಾಕ್ ನಲ್ಲಿ ಸದ್ದು ಮಾಡಿತ್ತು.

Published by:ಪಾವನ ಎಚ್ ಎಸ್
First published: