ಮೂರು ವರ್ಷ ಕಳೆದರೂ ಇನ್ನೂ ಆರಂಭವಾಗದ ರಸ್ತೆ ಕಾಮಗಾರಿ; ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು

ಇಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್ ಗಳು ಸಂಚರಿಸುತ್ತವೆ. ಹೀಗಾಗಿ ಇಲ್ಲಿನ ನಿವಾಸಿಗಳು ಓಡಾಡಲು ತೊಂದರೆ ಪಡುವಂತಾಗಿದೆ. ಅಲ್ಲದೇ, ಈ ರಸ್ತೆ ಧೂಳಿನಿಂದ ಕೂಡಿದ್ದು, ಜನರು ಪರಿತಪಿಸುವಂತಾಗಿದೆ.

ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ

ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ

  • Share this:
ಶಿವಮೊಗ್ಗ(ಫೆ.25) : ಈ ರಸ್ತೆಗೆ ಕಳೆದ ಮೂರು ವರ್ಷಗಳಿಂದ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ, ಈ ರಸ್ತೆ ಅಗಲೀಕರಣ ಆಗುತ್ತೆ ಅಂತಾ ಕಾದು ಕುಳಿತು ವರ್ಷಗಳೇ ಉರುಳುತ್ತಿವೆ. ರಸ್ತೆ ಅಗಲೀಕರಣಕ್ಕಾಗಿ ಮನೆಗಳ ಮಾಲೀಕರು ಮನೆ ತೆರವು ಮಾಡಿಕೊಟ್ಟಿದ್ದಾರೆ. ಅದರೆ, ಅದಕ್ಕೆ ಪರಿಹಾರದ ಹಣ ಸಿಗದೇ ಪರಿತಪಿಸುತ್ತಿದ್ದಾರೆ. ಅತ್ತ ರಸ್ತೆಯೂ ಇಲ್ಲ, ಮನೆಯೂ ಇಲ್ಲ. ಇತ್ತ ಪರಿಹಾರವೂ ಇಲ್ಲದೇ ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ.

ಇದು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ. ಶಿವಮೊಗ್ಗದ ಮುಖ್ಯ ಬಸ್ ನಿಲ್ದಾಣ ಹಿಂಭಾಗದಲ್ಲೇ ಹಾದು ಹೋಗಿದೆ ಈ ರಸ್ತೆ. ಬಹಳ ಕಿರಿದಾಗಿದ್ದ ಈ ರಸ್ತೆಯನ್ನು ಅಗಲೀಕರಣಗೊಳಿಸಿ, ಸುಗಮ ರಸ್ತೆ ಸಂಚಾರಕ್ಕೆ ಈ ಹಿಂದೆಯೇ ಪಾಲಿಕೆಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕಳೆದ 2014ರಲ್ಲಿ ಈ ಸಂಬಂಧ ತೀರ್ಮಾನಿಸಲಾಗಿದ್ದು, 2016 ರಲ್ಲಿ, ಇದಕ್ಕೆ ಚಾಲನೆ ಕೂಡ ನೀಡಲಾಗಿತ್ತು.

ಕ್ರಮೇಣ, ರಸ್ತೆ ಅಗಲೀಕರಣಕ್ಕೆ ಪಾಲಿಕೆ ಸಭೆಯಲ್ಲಿ ಅನುಮತಿ ಸಿಕ್ಕತ್ತು. ಆಗಲೀಕರಣಕ್ಕೆ ಮನೆ, ಭೂಮಿ ಕಳೆದುಕೊಳ್ಳವವರಿಗೆ ಪರಿಹಾರದ ಹಣವಾಗಿ, ಪ್ರತಿ ಚದರಡಿಗೆ 2 ಸಾವಿರ ರೂಪಾಯಿ ನಿಗಧಿಪಡಿಸಲಾಗಿತ್ತು. ನಿಮ್ಮ ಕಟ್ಟಡಗಳನ್ನು, ಮತ್ತು ನಿಮ್ಮ ಮನೆಗಳನ್ನು ತೆರವುಗೊಳಿಸಿ, ಜಾಗ ಖಾಲಿ ಮಾಡಿ ಅಂತಾ ಪಾಲಿಕೆ ನೋಟೀಸ್ ಕೂಡ ನೀಡಿತ್ತು.

ಸುಮಾರು 50 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡ ಮಾಲೀಕರು, ಮತ್ತು 36 ಕ್ಕೂ ಹೆಚ್ಚು ಮನೆ ಮಾಲೀಕರು, ತಮ್ಮ ಕಟ್ಟಡ, ಮನೆಗಳನ್ನು ತೆರವುಗೊಳಿಸಿದ್ದಾರೆ. ಅದರೆ, ರಸ್ತೆ ಕಾಮಗಾರಿ ಇನ್ನು ಅರಂಭವಾಗಿಲ್ಲ. ಮಿಳ್ಳಘಟ್ಟ ಬಡಾವಣೆಯ ಮುಖ್ಯ ರಸ್ತೆ, ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವುದಾಗಿದ್ದು, ಅಗಲೀಕರಣವಾದರೇ ಒಳ್ಳೆಯದು ಎಂಬ ಆಶಾಭಾವನೆ ಎಲ್ಲರದ್ದು. ಅಲ್ಲದೇ, ಈ ರಸ್ತೆ ಕಿರಿದಾಗಿದ್ದು, ಜನಸಂದಣಿ ಹೆಚ್ಚಾಗಿದೆ. ಇಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್ ಗಳು ಸಂಚರಿಸುತ್ತವೆ. ಹೀಗಾಗಿ ಇಲ್ಲಿನ ನಿವಾಸಿಗಳು ಓಡಾಡಲು ತೊಂದರೆ ಪಡುವಂತಾಗಿದೆ. ಅಲ್ಲದೇ, ಈ ರಸ್ತೆ ಧೂಳಿನಿಂದ ಕೂಡಿದ್ದು, ಜನರು ಪರಿತಪಿಸುವಂತಾಗಿದೆ.

ಇದನ್ನೂ ಓದಿ :  ಕಾಮಗಾರಿ ಮುಗಿದು 10 ವರ್ಷವಾದರೂ ಉಪಯೋಗಕ್ಕೆ ಬಾರದ ಅಂಡರ್​ಪಾಸ್; ಸಿಎಂ ತವರಲ್ಲಿ ಜನರ ಪರದಾಟ

ಒಟ್ಟು ಸಾವಿರ ಮೀಟರ್ ರಸ್ತೆ ಅಗಲೀಕರಣದ ಪ್ರಸ್ತಾವನೆ ಇದ್ದು, ಇದರಲ್ಲಿ ಮೊದಲ ಹಂತದಲ್ಲಿ 500 ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ಈಗಾಗಲೇ, ಇಲ್ಲಿನ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ 2 ವರ್ಷ ಕಳೆಯುತ್ತಾ ಬಂದಿದ್ದರೂ, ಇನ್ನೂ ಕೂಡ ರಸ್ತೆ ಅಗಲೀಕರಣವಾಗಿಲ್ಲ.

ಶಿವಮೊಗ್ಗದ ಹೃದಯ ಭಾಗದಲ್ಲಿರುವ ರಸ್ತೆಯೊಂದರ ಅಗಲೀಕರಣಕ್ಕೆ, ಶಿವಮೊಗ್ಗ ಮಹಾನಗರ ಪಾಲಿಕೆ ಮೀನಾಮೇಷ ಎಣಿಸುತ್ತಿದ್ದು, ಯಾವಾಗ ಮುಗಿಯುತ್ತಪ್ಪಾ ಈ ಅಗಲೀಕರಣ ಎನ್ನುವಂತಾಗಿದೆ. ಕಿಷ್ಕಿಂದೆಯಂತಹ ರಸ್ತೆ ಅಗಲೀಕರಣವಾದರೆ, ವಾಹನ ಸವಾರರಿಗೂ ಅನುಕೂಲವಾಗಲಿದೆ.
First published: