ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮೆಟ್ರೋ ಕಾಮಗಾರಿ (Namma Metro) ನಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದ್ದು, ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬ್ರಿಗೇಡ್ ರೋಡ್ ನಲ್ಲಿ (Brigade Road) ಏಕಾಏಕಿ ಗುಂಡಿ ಕಾಣಿಸಿಕೊಂಡಿದೆ. ಬ್ರಿಗೇಡ್ ರೋಡ್ನ ಬ್ರಿಗೇಡ್ ಟವರ್ ಬಳಿ ಸುಮಾರು 8 ಅಡಿ ಅಳದ ಗುಂಡಿ ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಅಶೋಕ್ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಗಾಯಗೊಂಡ ಇಬ್ಬರು ಬೈಕ್ ಸವಾರರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ರೋಡ್ ಬಂದ್ ಆಗಿದ್ದು, ಗುಂಡಿಯ ಸುತ್ತಲೂ ಬ್ಯಾರಿಕೇಡ್ ಮತ್ತು ಪರದೆ ಹಾಕಲಾಗಿದೆ. ಸದ್ಯ ಸವಾರರಿಗೆ ನಿರ್ಬಂಧ ಹೇರಲಾಗಿದೆ.
ತಪ್ಪಿದ ಭಾರೀ ಅನಾಹುತ
ರಸ್ತೆಯ ಮಧ್ಯ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ ಸಂಭವಿಸಿದ್ದು, ಸುಮಾರು ಎರಡು ಅಡಿಗಳಷ್ಟು ಅಗಲವಾಗಿ ಗುಂಡಿ ಬಿದ್ದಿದೆ. ರಸ್ತೆಯ ವಾಹನಗಳ ಸಂಚಾರ ಮಾರ್ಗ ಬದಲಾವಣೆಯನ್ನು ಪೊಲೀಸರು ಮಾಡಿದ್ದಾರೆ. ಸ್ಥಳದಲ್ಲಿ ಸಂಭವನೀಯ ಅನಾಹುತ ಅದೃಷ್ಟವಶಾತ್ ತಪ್ಪಿದೆ. ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಸದಾ ವಾಹನಗಳಿಂದ ಕೂಡಿರುವ ರಸ್ತೆಯ ನಡು ಭಾಗದಲ್ಲಿ ಮಣ್ಣು ಸಡಿಲಗೊಂಡು ಕುಸಿತಗೊಂಡಿದೆ.
ಸ್ಥಳೀಯ ವ್ಯಕ್ತಿ ಹೇಳಿದ್ದೇನು?
ಘಟನೆ ಕುರಿತಂತೆ ಮಾಹಿತಿ ನೀಡಿರುವ ಸ್ಥಳೀಯ ಇಮ್ರಾನ್ ಶರೀಫ್, ಬೈಕ್ನಲ್ಲಿ ಬರ್ತಿದ್ದ ಇಬ್ಬರು ಹಳ್ಳದ ಒಳಗಡೆ ಬಿದ್ದರು. ಎಲ್ಲರೂ ಓಡಿ ಬಂದು ಅವರನ್ನ ಮೇಲಕ್ಕೆ ಎತ್ತಿದರು. ಈಗಲೂ ಕೂಡ ಬಹಳ ಹಳ್ಳ ಬೀಳುತ್ತಿದೆ. ನಾನು ಇದೇ ರಸ್ತೆಯಲ್ಲಿ ಪ್ರತಿನಿತ್ಯ ಕಚೇರಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಬೈಕ್ ಸವಾರರು ಬೀಳುವ ಮುನ್ನವೇ, ಮತ್ತೊಂದು ಬೈಕ್ ಕೂಡ ಜಂಪ್ ಆಗಿತ್ತು. ಸಿಗ್ನಲ್ ಬಿಟ್ಟ ಕೂಡಲೇ ವಾಹನಗಳು ಚಲಿಸುತ್ತಿದ್ದ ಕಾರಣ ಹತ್ತಿರ ಹೋಗಿ ನೋಡಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಬಂದ ಕೂಡಲೇ ಅವಘಡ ನಡೆದು ಹೋಯ್ತು. ಇಬ್ಬರು ವ್ಯಕ್ತಿಗಳು ಅಪಘಾತಕ್ಕೆ ಒಳಗಾಗುವ ಮುನ್ನ, ದಂಪತಿಯೊಬ್ಬರು ಇಲ್ಲಿ ಬಚಾವ್ ಆಗಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Namma Metro: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ; ತಾಯಿ, ಮಗು ದುರ್ಮರಣ
ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್ ತುಂಬುತ್ತಿರೋ ಮೆಟ್ರೋ ಸಿಬ್ಬಂದಿ
ಇನ್ನು, ಮೆಟ್ರೋ ಸಿಬ್ಬಂದಿ ರಸ್ತೆ ದುರಸ್ಥಿ ಕಾರ್ಯವನ್ನು ಆರಂಭ ಮಾಡಿದ್ದು, ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್ ತುಂಬುತ್ತಿದ್ದಾರೆ. ಯಾವುದೇ ಅನಾಹುತ ಆಗದಂತೆ ಎಚ್ಚರ ವಹಿಸಿರುವ ಟ್ರಾಫಿಕ್ ಪೋಲಿಸರು ಸಂಚಾರವನ್ನು ಡೈವರ್ಟ್ ಮಾಡಿದ್ದಾರೆ.
ಇನ್ನು, ರಸ್ತೆಯ ಎರಡು ಬದಿಗಳಲ್ಲೂ ಕೂಡ ವಾಣಿಜ್ಯ ಕಟ್ಟಡಗಳಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ಸಾರ್ವಜನಿಕರಿಗೆ ಯಾರು ಕೂಡ ಓಡಾಟ ಮಾಡುವ ನೀಡಿಲ್ಲ. ಇದೇ ರಸ್ತೆಯಲ್ಲಿ ಶಾಲೆ ಇರುವ ಕಾರಣ ಗೇಟ್ ಬಂದ್ ಮಾಡಿ, ಬೇರೆ ಕಡೆಗೆ ಸಂಚಾರ ಡೈವಾರ್ಟ್ ಮಾಡಲಾಗಿದೆ.
‘BMRCL ತಪ್ಪುಗಳೇ ದುರಂತಕ್ಕೆ ಕಾರಣ’
ಇನ್ನು, ಮೆಟ್ರೋ ಪಿಲ್ಲರ್ (Metro Pillar Collapse) ದುರಂತ ಸ್ಥಳಕ್ಕೆ ನಿನ್ನೆ IISC ತಜ್ಞರ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಿಎಂಆರ್ಸಿಎಲ್ (BMRCL) ಅಧಿಕಾರಿಗಳಿಂದ IISC ತಜ್ಞ ಚಂದ್ರ ಕಿಶನ್ ಮಾಹಿತಿ ಪಡೆದರು. ಬಳಿಕ ಮಾತನಾಡಿದ IISC ಪ್ರೊಫೆಸರ್ ಚಂದ್ರ ಕಿಶನ್, ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕೆಲ ತಪ್ಪುಗಳೇ ಕಾರಣ ಅಂತ ಗೊತ್ತಾಗಿದೆ. ಕಾಮಗಾರಿಗೆ ಬಳಸಿದ ಕಟ್ಟಡ ಸಾಮಾಗ್ರಿಗಳ ಬಗ್ಗೆ ರಿಪೋರ್ಟ್ ಕೇಳಿದ್ದೇನೆ. ಕಬ್ಬಿಣ ತೂಕ ಜಾಸ್ತಿ ಆಗಿ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿದೆ. ಪಿಲ್ಲರ್ಗೆ ಸಪೋರ್ಟಿಂಗ್ ಕೊಡ್ಬೇಕಿತ್ತು ಅಂತ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ