ಇಂಟರ್​​ಲಾಕ್, ಅಟೋಮೆಟಿಕ್ ಸೋಲಾರ್ ಲೈಟ್ಸ್, ದಕ್ಷಿಣಕನ್ನಡದಲ್ಲಿ ಒಂದು‌ ಮಾದರಿ ರಸ್ತೆ

ಸಜಿಪಮೂಡದಿಂದ ಮಿತ್ತಮಜಲು ದೇವಸ್ಥಾನದವರೆಗೆ ನಿರ್ಮಿಸಲಾಗಿರುವ 1.5 ಕಿಲೋಮೀಟರ್ ದೂರದ ಈ ರಸ್ತೆಗೆ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ದೇಶ ಅಥವಾ ರಾಜ್ಯಗಳ ರಾಜಧಾನಿ ಹಾಗೂ ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮಾದರಿ ರಸ್ತೆಯಂತೆ ಈ ರಸ್ತೆಯನ್ನು ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ.

ಮಾದರಿ ರಸ್ತೆ

ಮಾದರಿ ರಸ್ತೆ

  • Share this:
ಜನಪ್ರತಿನಿಧಿಗಳ ಇಚ್ಛಾಶಕ್ತಿ, ಜನರ ಪಾಲ್ಗೊಳ್ಳುವಿಕೆಯಿಂದ ಸರಕಾರದ (Government) ಕೆಲಸವನ್ನು ಅಚ್ಚುಕಟ್ಟಾಗಿ ಮಾದರಿಯಾಗಿ ಮಾಡಬಹುದು ಎನ್ನೋದಕ್ಕೆ ಉದಾಹರಣೆಯೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ. ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಇಲ್ಲೊಂದು ರಸ್ತೆಯ ನಿರ್ಮಾಣಗೊಂಡಿದ್ದು, ಈ ರಸ್ತೆ ರಾಜ್ಯದ ಗ್ರಾಮ ಮಟ್ಟದಲ್ಲಿ ಎಲ್ಲೂ ಇಲ್ಲದಂತಹ  ರಸ್ತೆಯಂತೆ (Road) ಗುರುತಿಸಲ್ಪಟ್ಟಿದೆ. ಈ ರಸ್ತೆಯ ಎರಡೂ ಪಕ್ಕದಲ್ಲಿ ಪಾದಾಚಾರಿಗೆ ಹೋಗಲು ಫುಟ್ ಪಾತ್, ರಸ್ತೆಯುದ್ದಕ್ಕೂ ಸೋಲಾರ್ ಲೈಟ್ಸ್ (Solar Lights), ಇಕ್ಕೆಲಗಳಲ್ಲೂ ಚರಿಂಡಿ ವ್ಯವಸ್ಥೆ ಹೀಗೆ ದೇಶ, ರಾಜ್ಯ ರಾಜಧಾನಿಗಳಂತ (Capital city) ನಗರ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂತಹ ರಸ್ತೆಯಾಗಿ ಇದು ಹೊರಹೊಮ್ಮಿದೆ.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಮೂಲಭೂತ ಸೌಕರ್ಯಗಳ ಈಡೇರಿಕೆಯಾಗಿ ಕಾಲಕಾಲಕ್ಕೆ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಈ ಅನುದಾನಗಳನ್ನು ರಸ್ತೆ, ನೀರು, ಆರೋಗ್ಯ ಹಾಗೂ ಇತರ ಕಾರ್ಯಗಳಿಗಾಗಿ ಬಳಸಲಾಗುತ್ತದೆ. ಆದರೆ ಈ ಎಲ್ಲಾ ಕಾರ್ಯಗಳಲ್ಲೂ ಆಯಾ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ , ಜನರ ಪಾಲ್ಗೊಳ್ಳುವಿಕೆ ಇದ್ದರೆ ಮಾತ್ರ ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ.

ಸಜಿಪಮೂಡ ಗ್ರಾಮದಲ್ಲಿ ಮಾದರಿ ರಸ್ತೆ

ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಮಾದರಿ ರಸ್ತೆಯೊಂದನ್ನು ನಿರ್ಮಾಣವಾಗಿದೆ. ಹೌದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಈ ಮಾದರಿ ರಸ್ತೆಯ ನಿರ್ಮಾಣವಾಗಿದ್ದು, ಎಪ್ರಿಲ್ 3 ರಂದು ಇಲ್ಲಿನ ಜನ ಗ್ರಾಮದ ಸಂಭ್ರಮಾಚರಣೆಯ ರೂಪದಲ್ಲಿ ಈ ರಸ್ತೆಯ ಉದ್ಘಾಟನೆಯನ್ನು ಆಯೋಜಿಸಿದ್ದಾರೆ.

1.5 ಕಿಲೋಮೀಟರ್ ದೂರದ ಈ ರಸ್ತೆ

ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಈ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಸಜಿಪಮೂಡದಿಂದ ಮಿತ್ತಮಜಲು ದೇವಸ್ಥಾನದವರೆಗೆ ನಿರ್ಮಿಸಲಾಗಿರುವ 1.5 ಕಿಲೋಮೀಟರ್ ದೂರದ ಈ ರಸ್ತೆಗೆ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ದೇಶ ಅಥವಾ ರಾಜ್ಯಗಳ ರಾಜಧಾನಿ ಹಾಗೂ ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮಾದರಿ ರಸ್ತೆಯಂತೆ ಈ ರಸ್ತೆಯನ್ನು ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ.

ಇದನ್ನೂ ಓದಿ: Bengaluru Roads: ಬೆಂಗಳೂರಿನ ರಸ್ತೆಗಳ ಮಾನ ಮೂರು ಕಾಸಿಗೆ ಹರಾಜು! ಸ್ಟಾರ್ಟ್​ಅಪ್​ಗಳಿಗೆ ತೆಲಂಗಾಣ ಸಚಿವರಿಂದ ಆಹ್ವಾನ!

ಸಂಪೂರ್ಣ ಕಾಂಕ್ರೀಟೀಕರಣದ ಮೂಲಕ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ರಸ್ತೆಗೆ ಅಗತ್ಯವಿರುವ ಜಾಗವನ್ನು ಇಲ್ಲಿನ ಜನ ಯಾವುದೇ ತಕರಾರಿಲ್ಲದೆ ನೀಡಿದ್ದಾರೆ. ರಸ್ತೆಯ ಎರಡೂ ಕಡೆಗಳಲ್ಲಿ ಪಾದಾಚಾರಿಗಳು ನಡೆದಾಡಲು ಫುಟ್ ಪಾತ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಆಕರ್ಷಕ ಇಂಟರ್ ಲಾಕ್ ಗಳನ್ನು ಅಳವಡಿಸುವ ಮೂಲಕ ರಸ್ತೆಗೆ ಮೆರಗು ಬರುವಂತೆ ಮಾಡಲಾಗಿದೆ.

ರಸ್ತೆಯುದ್ಧಕ್ಕೂ ಸೋಲಾರ್ ಲೈಟ್

ಅಲ್ಲದೆ ರಸ್ತೆಯುದ್ಧಕ್ಕೂ ಸೋಲಾರ್ ಲೈಟ್ ಗಳನ್ನು ಹಾಕಲಾಗಿದ್ದು, ಈ ಲೈಟ್ಸ್ ಗಳು ಕತ್ತಲಾಗುತ್ತಿದ್ದಂತೆ ಸ್ವಯಂಚಾಲಿತವಾಗಿ ಉರಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ಮಳೆ ನೀರು ಹರಿಯದಂತೆ ರಸ್ತೆಯ ಇಕ್ಕೆಲದಲ್ಲೂ ನೀರು ಸಲೀಸಾಗಿ ಹರಿದು ಹೋಗುವಂತೆ ಚರಂಡಿಯನ್ನೂ ಮಾಡಲಾಗಿದ್ದು, ರಸ್ತೆಯ ಎಲ್ಲಾ ಉಸ್ತುವಾರಿಯನ್ನೂ ಸಜಿಪಮೂಡದ ನಾಗರಿಕ ಸೇವಾ ಸಮಿತಿ ನೋಡಿಕೊಳ್ಳುತ್ತಿದೆ ಎನ್ನುತ್ತಾರೆ ಸಮಿತಿಯ ಸಂಚಾಲಕರಾದ ವಿವೇಕ್ ಶೆಟ್ಟಿ ಸಜಿಪಮೂಡ.

2.5 ಕೋಟಿ ವೆಚ್ಚದ ಮಾದರ ರಸ್ತೆ

ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನೂ ಬೆಳೆಸಲು ಈಗಾಗಲೇ ಆಕರ್ಷಕ ಹೊಂಡಗಳನ್ನು ನಿರ್ಮಿಸಲಾಗಿದ್ದು, ಮಳೆಗಾಲದ ಸಮಯದಲ್ಲಿ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. 15 ಲಕ್ಷ ವೆಚ್ಚದಲ್ಲಿ ಇದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲು ಆರಂಭಗೊಂಡ ಕಾಮಗಾರಿಯು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರ ಸಹಕಾರದಿಂದಾಗಿ 2.5 ಕೋಟಿ ವೆಚ್ಚದ ಮಾದರಿ ರಸ್ತೆಯಾಗಿ ಮುಕ್ತಾಯಗೊಂಡಿದೆ.

ಇದನ್ನೂ ಓದಿ: Ration Cards: 324 ಸರ್ಕಾರಿ ನೌಕರರಿಂದ BPL ಕಾರ್ಡ್ ಬಳಕೆ, ಒಂದೇ ಸಲಕ್ಕೆ ಬಿತ್ತು ಲಕ್ಷ ಲಕ್ಷ ದಂಡ

ರಾಜ್ಯದ ಎಲ್ಲೂ ಗ್ರಾಮಮಟ್ಟದಲ್ಲಿ ಇಂಥಹ ರಸ್ತೆಯು ಕಾಣಸಿಗುವುದು ಸಾಧ್ಯವಿಲ್ಲ ಎನ್ನುವ ಗ್ರಾಮಸ್ಥರು, ಜನಪ್ರತಿನಿಧಿಗಳನ್ನು ಬಳಸಿಕೊಂಡು, ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಸರಕಾರದ ಅನುದಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಸಜಿಪಮೂಡದ ಜನ ತೋರಿಸಿಕೊಟ್ಟಿದ್ದಾರೆ.
Published by:Divya D
First published: