ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್​; ಸ್ಥಳದಲ್ಲೇ 6 ಮಂದಿ ಸಾವು, 20 ಜನರಿಗೆ ಗಾಯ

ಇಂದು ಬೆಳಗ್ಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

Latha CG | news18-kannada
Updated:September 12, 2019, 12:06 PM IST
ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್​; ಸ್ಥಳದಲ್ಲೇ 6 ಮಂದಿ ಸಾವು, 20 ಜನರಿಗೆ ಗಾಯ
ಪ್ರಾತಿನಿಧಿಕ ಚಿತ್ರ
  • Share this:
ಕೊಲ್ಲಾಪುರ(ಸೆ.12): ಖಾಸಗಿ ಬಸ್ಸೊಂದು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸತಾರಾದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸತಾರಾ ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೊಳಗಾದ ಬಸ್​ ಪುಣೆಯಿಂದ ಕರ್ನಾಟಕಕ್ಕೆ ತೆರಳುತ್ತಿತ್ತು. ಕರ್ನಾಟಕದ ಎಸ್​ಆರ್​ಎಸ್​(SRS) ಟ್ರಾವೆಲ್ಸ್​​ಗೆ ಸೇರಿದ ಬಸ್​ ಇದಾಗಿದೆ. ಮೃತರ ಬಗ್ಗೆ ಇನ್ನೂ ಸಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಜೆಡಿಎಸ್ ಚಿಂತನ ಸಭೆಗೆ ಜಿಟಿಡಿ ಗೈರು; ನಿಮ್ಮ ಕಣ್ಮುಂದೆಯೇ ಪಕ್ಷ ಕಟ್ಟಿ ಔತಣ ಕೊಡಿಸ್ತೀವಿ ಎಂದು ಹೆಚ್​ಡಿಡಿ ಸವಾಲು

ಲಾರಿಯ ಟೈರ್​ ಪಂಚರ್​ ಆಗಿದ್ದ ಕಾರಣ ಪೆಟ್ರೋಲ್​ ಪಂಪ್​ ಬಳಿ ಟ್ರಕ್​ನ್ನು ಪಾರ್ಕಿಂಗ್​ ಮಾಡಲಾಗಿತ್ತು. ಇದನ್ನು ಗಮನಿಸದ ಬಸ್​ ಚಾಲಕ ಹಿಂಬದಿಯಿಂದ ಲಾರಿಗೆ ಗುದ್ದಿದ್ದಾನೆ. ಈ ವೇಳೆ ಬಸ್​ನಲ್ಲಿದ್ದ ಬಹುತೇಕ ಪ್ರಯಾಣಿಕರು ನಿದ್ದೆಗೆ ಜಾರಿದ್ದರು.
ವಿಷಯ ತಿಳಿದ ತಕ್ಷಣ ಸತಾರಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುವಾಗ, ಆ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಆಗಿತ್ತು.

ಸತಾರಾ ಎಸ್​ಪಿ ತೇಜಸ್ವಿ ಸತ್ಪುಟೆ ಈ ಅಪಘಾತವನ್ನು ಖಚಿತಪಡಿಸಿದ್ದಾರೆ. ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸತಾರಾ ತಾಲೂಕು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
First published: September 12, 2019, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading