Rising Karnataka: ಇಂದು ನ್ಯೂಸ್​18 ನೆಟ್​ವರ್ಕ್​ನ ಹೆಮ್ಮೆಯ ಪ್ರಸ್ತುತಿ ರೈಸಿಂಗ್ ಕರ್ನಾಟಕ ಕಾರ್ಯಕ್ರಮ; ಸಿಎಂ, ಡಿಸಿಎಂ ಸೇರಿದಂತೆ ಗಣ್ಯರ ಉಪಸ್ಥಿತಿ

Setting The Development Agenda | ಕರ್ನಾಟಕದ ಅಭಿವೃದ್ಧಿ ಅಜೆಂಡಾ: ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರು, ನೀತಿ ನಿರೂಪಕರು, ವಿವಿಧ ಕ್ಷೇತ್ರದ ತಜ್ಱರು ಇಂದಿನ ಈ ಸಮಾವೇಶದಲ್ಲಿ ಹಾಜರಿರಲಿದ್ದಾರೆ. ಇವರ ಸಮ್ಮುಖದಲ್ಲಿ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.

news18-kannada
Updated:December 14, 2019, 11:01 AM IST
Rising Karnataka: ಇಂದು ನ್ಯೂಸ್​18 ನೆಟ್​ವರ್ಕ್​ನ ಹೆಮ್ಮೆಯ ಪ್ರಸ್ತುತಿ ರೈಸಿಂಗ್ ಕರ್ನಾಟಕ ಕಾರ್ಯಕ್ರಮ; ಸಿಎಂ, ಡಿಸಿಎಂ ಸೇರಿದಂತೆ ಗಣ್ಯರ ಉಪಸ್ಥಿತಿ
ರೈಸಿಂಗ್ ಕರ್ನಾಟಕ
  • Share this:
ಬೆಂಗಳೂರು (ಡಿ. 14): ದೇಶದ ಅತಿದೊಡ್ಡ ಸುದ್ದಿಜಾಲ ನ್ಯೂಸ್​18 ನೆಟ್​ವರ್ಕ್ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ 'ರೈಸಿಂಗ್ ಕರ್ನಾಟಕ' ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಬಳ್ಳಾರಿ ರಸ್ತೆಯ ಫೋರ್ ಸೀಸನ್ಸ್​ ಹೋಟೆಲ್​ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಉಪಚುನಾವಣೆಯ ಬಳಿಕ ಮತ್ತಷ್ಟು ಪ್ರಬಲರಾಗಿರುವ ಸಿಎಂ ಯಡಿಯೂರಪ್ಪ ಇಂದು ನ್ಯೂಸ್​18 ಕನ್ನಡದ 'ರೈಸಿಂಗ್ ಕರ್ನಾಟಕ' ವೇದಿಕೆಯಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ತಮ್ಮ ಯೋಜನೆಗಳು, ದೃಷ್ಟಿಕೋನದ ಬಗ್ಗೆ ಮಾತನಾಡಲಿದ್ದಾರೆ.

ಇದನ್ನೂ ಓದಿ: ‘ರಾಜಕೀಯ ಏನೇ ಇರಲಿ, ನಾವು ಉತ್ತಮ ಸ್ನೇಹಿತರು; ಸಿದ್ದರಾಮಯ್ಯರ ಆರೋಗ್ಯ ಚೇತರಿಸಿಕೊಂಡಿದೆ‘; ಸಚಿವ ವಿ. ಸೋಮಣ್ಣ

ಬರ ಇರಲಿ, ಪ್ರವಾಹ ಇರಲಿ, ಕನ್ನಡ ಭಾಷೆ, ನೆಲ, ಜಲ, ಪರಂಪರೆ, ಸಂಸ್ಕೃತಿ ಪರ ಹೋರಾಟ ಇರಲಿ, ಪ್ರತಿಯೊಂದು ಸಂದರ್ಭದಲ್ಲು ರಾಜ್ಯದ ಪರವಾಗಿ ರಾಜ್ಯದ ಜನರ ಆಶೋತ್ತರಗಳ ಪರವಾಗಿ ಧ್ವನಿಯೆತ್ತಿದ್ದು ನ್ಯೂಸ್ 18 ಕನ್ನಡ. ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ ನ್ಯೂಸ್ 18 ಕನ್ನಡ. ನ್ಯೂಸ್ 18 ನೆಟ್​ವರ್ಕ್​ನ ಹೆಮ್ಮೆಯ ಪ್ರಸ್ತುತಿಯೇ ರೈಸಿಂಗ್ ಕರ್ನಾಟಕ ಕಾರ್ಯಕ್ರಮದ ಪರಿಕಲ್ಪನೆ. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾದ ಈ ಕರುನಾಡನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಪಂಚದ ಭೂಪಟದಲ್ಲಿ ಮುಂಚೂಣಿಯಲ್ಲಿ ಕೊಂಡೊಯ್ಯುವ ಚರ್ಚಾ ವೇದಿಕೆಯೇ ಈ ರೈಸಿಂಗ್ ಕರ್ನಾಟಕ ಸಮಾವೇಶ.

ಇದನ್ನೂ ಓದಿ: Bengaluru Crime: ಆಸ್ತಿಗಾಗಿ ಪೀಡಿಸುತ್ತಿದ್ದ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರು, ನೀತಿ ನಿರೂಪಕರು, ವಿವಿಧ ಕ್ಷೇತ್ರದ ತಜ್ಱರು ಇಂದಿನ ಈ ಸಮಾವೇಶದಲ್ಲಿ ಹಾಜರಿರಲಿದ್ದಾರೆ . ಇವರ ಸಮ್ಮುಖದಲ್ಲಿ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇಂದು ಸಂಜೆ ನಡೆಯುವ ಸಮಾರಂಭಕ್ಕೆ ಪಾಸ್​ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
First published: December 14, 2019, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading