ಅರಸೀಕೆರೆಯ ಗ್ರಾಮದಲ್ಲಿ ಬಲವಂತದ ಮತಾಂತರ; ಕಾಳಿ ಸ್ವಾಮಿ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಡೆ

ತಾವು ಯಾವುದೇ ಮತಾಂತರ ಮಾಡುತ್ತಿಲ್ಲ. ಕೆಲವರು ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಎರಡು ಗುಂಪುಗಳಾಗಿದ್ದು, ಒಂದು ಗುಂಪನ್ನು ಕಂಡರೆ ಮತ್ತೊಂದು ಗುಂಪಿನವರು ದ್ವೇಷ ಕಾರುತ್ತಾರೆ. ಇದ್ರಲ್ಲಿ ನನ್ನ ಪಾತ್ರವಿಲ್ಲಾ ಎಂದು ಫಾಸ್ಟರ್ ರಾಜು ಪ್ರತಿಕ್ರಿಯಿಸಿದ್ದಾರೆ.

ಬನ್ನಿಮರದ ಹಟ್ಟಿ ಗ್ರಾಮದಲ್ಲಿ ರಿಷಿಕುಮಾರ ಸ್ವಾಮೀಜಿ

ಬನ್ನಿಮರದ ಹಟ್ಟಿ ಗ್ರಾಮದಲ್ಲಿ ರಿಷಿಕುಮಾರ ಸ್ವಾಮೀಜಿ

  • News18
  • Last Updated :
  • Share this:
ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಬನ್ನಿಮರದ ಹಟ್ಟಿ ಎಂಬ ಗ್ರಾಮದಲ್ಲಿ ಬಲವಂತವಾಗಿ ಹಿಂದೂಗಳನ್ನ ಮತಾಂತರ ಮಾಡಲಾಗುತ್ತಿದೆ.‌ ಕಾಕತಾಳೀಯವೆಂಬಂತೆ, ಮತಾಂತರ ಮಾಡಲು ಯತ್ನಿಸಿದ ಬಳಿಕ ಈ ಗ್ರಾಮದಲ್ಲಿ ಸಾವು ನೋವುಗಳು ಹೆಚ್ಚಾಗಿದ್ದು, ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ. 

ರಾಜು ಫಾಸ್ಟರ್ ಎಂಬ ವ್ಯಕ್ತಿಯತ್ತ ಗ್ರಾಮಸ್ಥರು ಬೆರಳು ತೋರಿಸುತ್ತಾರೆ. ಈತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕ ಕುಗ್ರಾಮಗಳನ್ನ ಟಾರ್ಗೆಟ್ ಮಾಡಿ ಅಲ್ಲಿನ ಹಿಂದೂಗಳನ್ನ ಬಲವಂತವಾಗಿ ಮತಾಂತರ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬನ್ನಿಮರದ ಹಟ್ಟಿ ಗ್ರಾಮದಲ್ಲಿ ಸುಮಾರು 50 ಕುಟುಂಬಗಳಿದ್ದು, ಅತೀ ಹೆಚ್ಚು ಬಡವರಿದ್ದಾರೆ. ಈ ಗ್ರಾಮಸ್ಥರಿಗೆ ಇನ್ನಿಲ್ಲದ ಆಮಿಷ ತೋರಿಸಿ ಸುಮಾರು 9 ಕುಟುಂಬಗಳನ್ನ ಮತಾಂತರ ಮಾಡಿದ್ದಾರೆನ್ನಲಾಗಿದೆ. ಮತಾಂತರಗೊಂಡ ಮಕ್ಕಳು ತಮ್ಮ ತಂದೆ ತಾಯಿಯನ್ನೂ ಮತಾಂತರ ಆಗುವಂತೆ ಬಲವಂತ ಮಾಡುತ್ತಿದ್ದು, ಒಪ್ಪದಿದ್ದವರನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆಯಲ್ಲಿದ್ದ ಹಿಂದೂ ದೇವರ ಫೋಟೋಗಳನ್ನೂ ಮನೆಯ ಹೊರಗೆ ಬಿಸಾಡಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸ್​ ಠಾಣೆಗೆ ತೆರಳಿದ ಡಿಕೆ ಶಿವಕುಮಾರ್​; ಅಷ್ಟಕ್ಕೂ ಆಗಿದ್ದೇನು?

ಗ್ರಾಮದಲ್ಲಿ ನಿರ್ಮಾಣವಾಗಿರುವ ಚರ್ಚ್​ಗೆ ಕರೆದೊಯ್ದು ತೀರ್ಥ ಕುಡಿಸಿದ ಬಳಿಕ ಈ ಗ್ರಾಮದಲ್ಲಿ ಸಾವು ನೋವುಗಳು ಹೆಚ್ಚಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಗ್ರಾಮಸ್ಥರು ಕಂಗಾಲಾಗಿದ್ದು, ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

Rishikumara Swamiji with Raju Foster
ಕ್ರೈಸ್ತ ಧರ್ಮೀಯ ರಾಜು ಫಾಸ್ಟರ್ ಜೊತೆ ಋಷಿಕುಮಾರ ಸ್ವಾಮಿ ಚರ್ಚೆ


ಋಷಿಕುಮಾರ ಸ್ವಾಮೀಜಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಮತಾಂತರದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು‌. ಗ್ರಾಮಸ್ಥರನ್ನ ಮಾತನಾಡಿಸಿ ಎಲ್ಲರಿಂದ ಮಾಹಿತಿ ಪಡೆದು ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಮಾತನಾಡಿದ ಋಷಿಕುಮಾರ ಸ್ವಾಮೀಜಿ, ಈ‌ ಗ್ರಾಮದಲ್ಲಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ ಎಂದು ಹೇಳಿದರು. ಇನ್ನೂ ಕೆಲವು ಸ್ವಾಮೀಜಿಗಳೊಂದಿಗೆ ಸೇರಿಕೊಂಡು ಈ ಗ್ರಾಮಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತೇವೆ. ಮತ್ತು ಎಲ್ಲಾ ಸ್ವಾಮೀಜಿಗಳು ಸೇರಿ ಸರ್ಕಾರಕ್ಕೆ ಮನವಿ ಮಾಡಿ ಈ ಗ್ರಾಮವನ್ನ ದತ್ತು ತೆಗೆದುಕೊಂಡು ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಎಚ್​ಡಿಕೆ ನಾಲಿಗೆ ಮೇಲೆ ಹತೋಟಿ ಕಳೆದುಕೊಂಡಿದ್ದಾರೆ; ವಿಜಯೇಂದ್ರ ವ್ಯಂಗ್ಯ

ಈ ಗ್ರಾಮದಲ್ಲಿ ಚರ್ಚ್ ನಿರ್ಮಾಣ ಮಾಡಿ ಅಲ್ಲೇ ಪ್ರಾರ್ಥಿಸುವಂತೆ ಬಲವಂತವಾಗಿ ಹಿಂಸೆ ನೀಡುತ್ತಿರುವುದು ಕಂಡು ಬಂದಿದೆ. ಈ ವಿಚಾರದಲ್ಲಿ ಅರಸೀಕೆರೆಯ ಫಾಸ್ಟರ್ ರಾಜು ಎಂಬುವರ ವಿರುದ್ದ ಕೆಲ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಆದರೆ ಫಾಸ್ಟರ್ ರಾಜು ಅವರು ತಾವು ಯಾವುದೇ ಮತಾಂತರ ಮಾಡುತ್ತಿಲ್ಲ. ಕೆಲವರು ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಮ್ಮ ವಿರುದ್ದದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಗ್ರಾಮದಲ್ಲಿ ಎರಡು ಗುಂಪುಗಳಾಗಿದ್ದು, ಒಂದು ಗುಂಪನ್ನು ಕಂಡರೆ ಮತ್ತೊಂದು ಗುಂಪಿನವರು ದ್ವೇಷ ಕಾರುತ್ತಾರೆ. ಆದರಿಂದ ಕೆಲವರು ತಮ್ಮ ವಿರುದ್ದ ಆರೋಪ ಮಾಡಿದ್ದಾರೆ. ಇದ್ರಲ್ಲಿ ನನ್ನ ಪಾತ್ರವಿಲ್ಲಾ ಎಂದು ಫಾಸ್ಟರ್ ರಾಜು ಪ್ರತಿಕ್ರಿಯಿಸಿದ್ದಾರೆ.

ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದಲ್ಲಿನ 9 ಕುಟುಂಬದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು ಎನ್ನಲಾಗಿತ್ತು. ಆದರೆ ಇವರೆಲ್ಲರೂ ಗ್ರಾಮದಲ್ಲಿನ ಹಿಂದೂ ದೇವಾಲಯಕ್ಕೆ ಬಂದು ಕಾಳಿ ಸ್ವಾಮೀಜಿಯ ನೇತೃತ್ವದಲ್ಲಿ ಮತ್ತೆ ಲಿಂಗ ಪೂಜೆ ಮಾಡಿ ಹಿಂದೂ ಧರ್ಮಕ್ಕೆ ಸೇರ್ಪಡೆಯಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: