ಹಿಂದೂಗಳನ್ನು ಎದುರಾಕೊಂಡ್ರೆ ಬಿಎಸ್​ವೈ ಸರ್ಕಾರ ಮೂರು ತಿಂಗಳು ಇರಲ್ಲ; ಋಷಿಕುಮಾರ ಸ್ವಾಮೀಜಿ ಕಿಡಿ

ಇಡೀ ರಾಜ್ಯ, ರಾಜ್ಯದ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಮಾಡುತ್ತಿದೆ ಎಂದು ಕಿಡಿಕಾರಿದರು.

ಋಷಿಕುಮಾರ ಸ್ವಾಮೀಜಿ

ಋಷಿಕುಮಾರ ಸ್ವಾಮೀಜಿ

  • Share this:
ಚಿಕ್ಕಮಗಳೂರು(ನ.12): ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಸಿಎಂ ಬಿಎಸ್ ಯಡಿಯೂರಪ್ಪ  ಪೂರ್ಣಾವಧಿ ಸರ್ಕಾರ ಮಾಡುತ್ತಾರೆ ಎಂದು ಆದರೆ,  ಹಿಂದೂಗಳಿಗೆ ಹೀಗೆ ಮಾಡಿದ್ರೆ, ಮೂರು ತಿಂಗಳು ಬಿಎಸ್ ವೈ ಸರ್ಕಾರ ಇರೋದಿಲ್ಲ, ಉಂಡುಂಡು ಮಲಗೋದು, ದಿನಕ್ಕೊಂದು ಕಾನೂನು ತರೋದಷ್ಟೆ ಸರ್ಕಾರದ ಸಾಧನೆಯಾಯ್ತು, ಯೋಗಿ ಸಕಾರವನ್ನ ನೋಡಿ ಕಲಿಯರಿ, ಅವರು 6 ಲಕ್ಷ ದೀಪ ಹಚ್ಚುತ್ತಿದ್ದಾರೆ ಎಂದು ಬಿ.ಎಸ್.ವೈ ಸರ್ಕಾರದ ವಿರುದ್ಧ  ಋಷಿಕುಮಾರ ಸ್ವಾಮೀಜಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಪಟಾಕಿ ನಿಷೇಧದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಸಿರು ಪಟಾಕಿಯಂತೆ. ಇದ್ಯಾವುದು ಹೊಸದು. ಎಲೆ ಸುತ್ತಬೇಕಾ ಅಥವ ಪೇಪರ್ ಹರಿದು ಹಸಿರು ಬಣ್ಣದ ಪೇಪರ್ ಸುತ್ತಬೇಕಾ, ಇಲ್ಲಾ ಹಸಿರು ದಾರ ಸುತ್ತಾಬೇಕಾ, ಹಸಿರು ಪಟಾಕಿ ಎಲ್ಲಿ ಸಿಗುತ್ತೆ ಅಂತಾ ಸ್ವಲ್ಪ ಹೇಳಿ ಮುಖ್ಯಮಂತ್ರಿ ಗಳೇ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ದತ್ತಮಾಲಾ ಅಭಿಯಾನಕ್ಕೆ ಕಡಿಮೆ ಜನ ಸೇರಿಸಿ ಎಂದು ಹೇಳಿರುವ ಜಿಲ್ಲಾಡಳಿತದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ನೀವು ಹೇಳುವ ಕೋವಿಡ್ ನಿಯಂತ್ರಣಕ್ಕೆ ನಾವು ಬದ್ಧ. ಅದಕ್ಕೆ ಈ ಬಾರಿ ರೋಡ್ ಶೋ ನಿಲ್ಲಿಸಿದ್ದೇವೆ. ಅಂತರ ಕಾಪಾಡಾಲು ಬದ್ಧ. ಆರ್.ಆರ್.ನಗರದಲ್ಲಿ ಪ್ರಚಾರದ ವೇಳೆ ಸರ್ಕಾರ ಅಂತರ ಕಾಪಾಡಿತ್ತಾ? ಶಿರಾದಲ್ಲಿ ತಮಟೆ, ನಗಾರಿ ಹೊಡೆದು ಕುಣಿದರು ಸರ್ಕಾರ ಅಲ್ಲಿ ಅಂತರ ಕಾಪಾಡಿತ್ತಾ? ಹಿಂದೂ ಕಾರ್ಯಕ್ರಮಗಳಿಗೆ ಏಕೆ ತಡೆ ಒಡ್ಡುತ್ತೀರಾ ಎಂದು ಸಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸೇನಾಧಿಕಾರಿ ಎಂದು ನಂಬಿಸಿ ನೂರಾರು ಜನರಿಗೆ ವಂಚಿಸಿದ ಆರೋಪಿ ಬಂಧನ

ಇದೇ ತಿಂಗಳ 26 ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. ಈ ವರ್ಷ ಜಿಲ್ಲಾಡಳಿತ ತಡೆಯೊಡ್ಡುತ್ತಿದೆ. ಜನರನ್ನ ಸೇರಿಸಿ ಆದರೆ, ಕಡಿಮೆ ಜನರನ್ನ ಸೇರಿಸಿ. ನೀವು ಮಾತ್ರ ಹೋಗಿ ಬನ್ನಿ ಎಂದು ಹೇಳಿದೆ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು. ಇದು ಇಡೀ ರಾಜ್ಯ ಕಾಯುತ್ತಿರುವ ದಿನಗಳು. ಇಡೀ ರಾಜ್ಯ, ರಾಜ್ಯದ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿ.ಟಿ.ರವಿ ನಮ್ಮವರು…ನಮ್ಮವರು ಎಂದು ಹೇಳುತ್ತಾ, ಕಳೆದ ವರ್ಷ ವಿಗ್ರಹವನ್ನ ಬೀದಿಯಲ್ಲಿ ಇಡುವಂತಹ ಕೆಲಸ ಮಾಡಿದ್ದರು. ನಾವು ಅದನ್ನ ದೇವಸ್ಥಾನದಲ್ಲಿಟ್ಟು, ತ್ರಿಕಾಲ ಪೂಜೆ ಮಾಡುತ್ತಿದ್ದೇವೆ. ನಾವು ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯಕ್ಕೆ ಕರೆ ಕೊಟ್ಟಿದ್ದೇವೆ ಎಂದರು.

ಇನ್ನು ದತ್ತಪೀಠದಲ್ಲಿ ಯಾಗ ನಿಲ್ಲಲ್ಲ, ಆಚರಣೆ ನಿಲ್ಲಲ್ಲ, ದತ್ತಪೀಠ ದಲ್ಲಿ ಏನು ಕ್ರಮ ಬೇಕೋ ಜಿಲ್ಲಾಡಳಿತ ತೆಗೆದುಕೊಳ್ಳಿ, ಅದನ್ನ ಬಿಟ್ಟು ದತ್ತಪೀಠಕ್ಕೆ ಬರುವ ಭಕ್ತರನ್ನ ತಡೆಯುವುದನ್ನ ಮಾಡಬೇಡಿ, ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಡಳಿತ ಪೂರ್ಣ ಬೆಂಬಲ ನೀಡಬೇಕೆಂದು ಒತ್ತಾಯಿಸಿದ್ದಾರೆ.
Published by:Latha CG
First published: