Shivamogga: ಶಿವಮೊಗ್ಗ ಮತ್ತೆ ಕೊತಕೊತ! ಶಾಲೆಯ ಗೇಮ್ಸ್​ನಲ್ಲಿ ಗಲಾಟೆ, 144 ಸೆಕ್ಷನ್ ವಿಸ್ತರಣೆ

ಶಿವಮೊಗ್ಗದಲ್ಲಿ ಅದ್ಯಾವಾಗ ಶಾಂತಿ ನೆಲೆಸುತ್ತೋ ಅಂತಾ ಕಾದು ಕುಳಿತುಕೊಳ್ಳುವಂತೆ ಆಗಿದೆ. ಒಂದಿಲ್ಲೊಂದು ಕೋಮುಗಲಭೆಗಳು ನಡೆಯುತ್ತಿದ್ದು ಜನರ ನಿದ್ದೆಗೆಡಿಸಿದೆ. ಇದೀಗ ಶಿರಾಳಕೊಪ್ಪ ಎಂಬಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಜಗಳವಾಗಿ ಗಲಾಟೆ ಶುರುವಾಗಿದೆ.

ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಗಲಾಟೆ, ಅಂಗಡಿ ಬಂದ್

ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಗಲಾಟೆ, ಅಂಗಡಿ ಬಂದ್

  • Share this:
ಶಿವಮೊಗ್ಗದಲ್ಲಿ (Shivamogga) ಒಂದಿಲ್ಲೊಂದು ಕೋಮುಗಲಭೆಗಳು (Communal riot)  ನಡೆಯುತ್ತಲೇ ಇದೆ. ಕೋಮು ಕಿಚ್ಚಿನಿಂದ ಮಲೆನಾಡಿನಲ್ಲಿ ಶಾಂತಿಯೇ (Peace) ದೂರವಾಗಿದೆ. ಒಂದು ಗಲಾಟೆ ಕಡಿಮೆ ಆಗ್ತಾ ಜನಜೀವನ ಎಂದಿನಂತೆ ಆಯ್ತು ಎನ್ನುವಾಗಲೇ ಮತ್ತೊಂದು ಗಲಾಟೆ ಶುರುವಾಗ್ತಿದೆ. ವೀರ ಸಾವರ್ಕರ್ (Veer Savarkar) ಫೋಟೋ ವಿವಾದದ ಬಳಿಕ ಮತ್ತೆ ಶಿವಮೊಗ್ಗ ನಿಗಿನಿಗಿ ಅಂತಿತ್ತು. ನಿಷೇಧಾಜ್ಞೆ ಬಳಿಕ ಸ್ವಲ್ಪ ಕಂಟ್ರೋಲ್​ಗೆ ಬಂದಿತ್ತು. ಈಗ ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿದೆ. ವಲಯಮಟ್ಟದ ಶಾಲಾ ಕ್ರೀಡಾಕೂಟದಲ್ಲಿ (School) ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ಅದರಿಂದ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದೆ. ಪೊಲೀಸ್​ ಭದ್ರತೆ (Police security) ಹೆಚ್ಚಿಸಲಾಗಿದೆ.

ಶಿವಮೊಗ್ಗದಲ್ಲಿ ಅದ್ಯಾವಾಗ ಶಾಂತಿ ನೆಲೆಸುತ್ತೋ ಅಂತಾ ಕಾದು ಕುಳಿತುಕೊಳ್ಳುವಂತೆ ಆಗಿದೆ. ಒಂದಿಲ್ಲೊಂದು ಕೋಮುಗಲಭೆಗಳು ನಡೆಯುತ್ತಿದ್ದು ಜನರ ನಿದ್ದೆಗೆಡಿಸಿದೆ. ಇದೀಗ ಶಿರಾಳಕೊಪ್ಪ ಎಂಬಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಜಗಳವಾಗಿ ಗಲಾಟೆ ಶುರುವಾಗಿದೆ.

ಶಿರಾಳಕೊಪ್ಪ ಪಟ್ಟಣದಲ್ಲಿ ಗಲಾಟೆ

ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿಯೇ ಎರಡು ಕೋಮಿನ ಯುವಕರ ನಡುವೆ ಹೊಡೆದಾಟ ನಡೆದಿದೆ.

Riot at Shivamogga school sports event one injured hospitalized prohibition order extended
ಶಿವಮೊಗ್ಗದಲ್ಲಿ ಅಂಗಡಿ ಮುಂಗಟ್ಟು ಬಂದ್


ಶಿರಾಳಕೊಪ್ಪ ಪಟ್ಟಣ ಸಂಪೂರ್ಣ ಬಂದ್

ಗಲಾಟೆಯಲ್ಲಿ ಗಾಯಗೊಂಡವರನ್ನು ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿರಾಳಕೊಪ್ಪ ಪಟ್ಟಣ ಸಂಪೂರ್ಣ ಬಂದ್ ಆಗಿದೆ. ಏಕಾಏಕಿ ಬಿಗುವಿನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌ ಮಾಡಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸಪ್ಪನ ಜೂಜಾಟ, ಕೋಲಾರದ ಸರ್ಕಲ್ ಇನ್ಸ್​ಪೆಕ್ಟರ್ ಅರೆಸ್ಟ್!

ಶಾಲಾ ಕ್ರೀಡಾಕೂಟದಲ್ಲಿ ಗಲಾಟೆ
ಶಿರಾಳಕೊಪ್ಪ ಟೌನ್‌ನ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ವಲಯಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಅಡ್ಡಲಾಗಿ ಚೇರನ್ನು ಹಾಕಿಕೊಂಡು ಕುಳಿತುಕೊಂಡಿದ್ದರು. ಆಗ ಪಕ್ಕಕ್ಕೆ ಸರಿಯುವಂತೆ ಶಿಕಾರಪುರದ ಮಂಚಿನಕೊಪ್ಪ ಗ್ರಾಮದ ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಚೇರ್​ನಲ್ಲಿ ಕುಳಿತಿದ್ದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಹೊಡೆದಿದ್ದಾರೆ.

ರಸ್ತೆಯಲ್ಲಿ ಅಡ್ಡಗಟ್ಟಿ ಮತ್ತೆ ಗಲಾಟೆ

ನಂತರ ತಮ್ಮ ಊರಿಗೆ ಹೋಗಲೆಂದು ಬೈಕ್‌ಗಳಲ್ಲಿ ಹಿಂದಿರುಗುತ್ತಿದ್ದಾಗ, ಗಲಾಟೆ ಮಾಡಿದ ವ್ಯಕ್ತಿಯು ತನ್ನೊಂದಿಗೆ ಪರ್ವೀಜ್, ಜಬೀವುಲ್ಲಾ, ಶಕೀಲ್ ಹಾಗೂ ಇತರರನ್ನು ಜೊತೆ ಕರೆದುಕೊಂಡು ಹೆಚ್.ಕೆ ರಸ್ತೆಯ ಹೊಂಡದ ಕೆರೆ ಸರ್ಕಲ್‌ನ ಬಳಿ ಅಡ್ಡಗಟ್ಟಿದ್ದಾರೆ. ಕಲ್ಲು, ದೊಣ್ಣೆ ಮತ್ತು ರಾಡಿನಿಂದ ಹಲ್ಲೆ ಮಾಡಿದ್ದಾರೆ.

ಗಲಾಟೆಯಲ್ಲಿ ಓರ್ವ ಯುವಕನಿಗೆ ಗಾಯ, ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳ ಬಾಗಿಲುಗಳನ್ನು ಹಾಕಿಸಿದ್ದಾರೆ.

ಶಿವಮೊಗ್ಗದಲ್ಲಿ 144 ಸೆಕ್ಷನ್ ಮತ್ತೆ ವಿಸ್ತರಣೆ

ಶಿವಮೊಗ್ಗದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಆಗಸ್ಟ್ 26ರಂದು ಬೆಳಗ್ಗೆ ಆರು ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶಿಸಿದ್ದಾರೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಭಾವಚಿತ್ರ ತೆರವು ಸಂಬಂಧಿಸಿದಂತೆ ಆಗಸ್ಟ್ 15ರಂದು‌ ನಡೆದಿದ್ದ ಗಲಭೆ ಹಿನ್ನೆಯಲ್ಲಿ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ: ಗಂಡನ ಕೊಲೆಗೆ ಸುಪಾರಿ ಕೊಟ್ರೆ ಆ ಹಂತಕರು ಮಾಡಿದ್ದೇ ಬೇರೆ! ಸಾಯಬೇಕಾದವ ಸೀದಾ ಮನೆಗೇ ಬಂದ!

ಶಿವಮೊಗ್ಗದ ಕೋಟೆ, ದೊಡ್ಡಪೇಟೆ, ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಪರಿಸ್ಥಿತಿ ತಿಳಿಗೊಂಡಿರುವುದರಿಂದ ಹಲವು ಕಡೆ ನಿರ್ಬಂಧ ತೆರವುಗೊಳಿಸಲಾಗಿದೆ. ಇಡೀ ನಗರಾದ್ಯಂತ ವಿಧಿಸಲಾಗಿದ್ದ‌ ನಿಷೇಧಾಜ್ಞೆಯನ್ನು ಮೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ ಆದೇಶಿಸಲಾಗಿದೆ.

ಇನ್ನು ಶಿವಮೊಗ್ಗದಲ್ಲಿ ವೈಯಕ್ತಿಕ ಹಳೆದ್ವೇಷದ ಹಿನ್ನೆಲೆ ಎರಡು ಕೋಮಿನ ಯುವಕರ ನಡುವೆ ಗಲಾಟೆಯಾಗಿದೆ. ಶಿವಮೊಗ್ಗದ ಕೋಟೆಗಂಗೂರಿನ ಹಮಾಲಿ ಕ್ವಾಟರ್ಸ್ ಬಳಿ ಘಟನೆ ಮೊಹಮ್ಮದ್ ಕಿಸರ್ ಹಾಗು‌ ವಿಜಯ್ ಮತ್ತು ಭಾಸ್ಕರ್ ಎಂಬುವರ ನಡುವೆ ಗಲಾಟೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Thara Kemmara
First published: