ಶಿವಸೇನಾದಿಂದ ವಿಶ್ವಾಸ ದ್ರೋಹ; ರಾಜ್ಯ ಬಿಜೆಪಿ ನಾಯಕರ ಕಿಡಿ

ರಾಜ್ಯಪಾಲರು ಎಲ್ಲಾ ಪಕ್ಷಗಳನ್ನೂ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಸಂವಿಧಾನದ ಪ್ರಕಾರ ಎಲ್ಲಾ ಪ್ರಯತ್ನ ಮಾಡಿದಾಗಲೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ, ರಾಷ್ಟ್ರಪತಿ ಆಳ್ವಿಕೆ ಬರುವುದು ಸಹಜವೇ ಆಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

news18
Updated:November 12, 2019, 5:39 PM IST
ಶಿವಸೇನಾದಿಂದ ವಿಶ್ವಾಸ ದ್ರೋಹ; ರಾಜ್ಯ ಬಿಜೆಪಿ ನಾಯಕರ ಕಿಡಿ
ಕೇಂದ್ರ ಸಚಿವ ಪ್ರಲ್ಹಾದ್​ಜೋಶಿ
  • News18
  • Last Updated: November 12, 2019, 5:39 PM IST
  • Share this:
ಹುಬ್ಬಳ್ಳಿ(ನ. 12): ಮಹಾರಾಷ್ಟ್ರದಲ್ಲಿ ಬಿಜೆಪಿ ಸಂಗ ತೊರೆದು ಎನ್​ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಶಿವಸೇನಾ ನಡೆಗೆ ರಾಜ್ಯದ ಬಿಜೆಪಿ ಮುಖಂಡರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಿವಸೇನೆಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಕ್ರಮವನ್ನು ಸಮರ್ಥಿಸಿಕೊಂಡಿದ್ಧಾರೆ.

ನರೇಂದ್ರ ಮೋದಿ, ದೇವೇಂದ್ರ ಫಡ್ನವಿಸ್ ನಾಯಕತ್ವಕ್ಕೆ ಜನಾದೇಶ ಸಿಕ್ಕಿತ್ತು. ಆದರೆ, ಈಗ ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ರಚನೆಯಾಗುವ ಸ್ಥಿತಿ ಇಲ್ಲ. ಅನಿವಾರ್ಯತೆಯ ಕಾರಣದಿಂದ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಿರಬಹುದು ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಉಪಚುನಾವಣೆ ಬಳಿಕ ಬಿಜೆಪಿ ಸೇರ್ಪಡೆ?

ಮಹಾರಾಷ್ಟ್ರದ ಜನರ ವಿಶ್ವಾಸಕ್ಕೆ ಶಿವಸೇನಾದವರು ದ್ರೋಹ ಎಸಗಿದ್ದಾರೆ. ಜನರ ತೀರ್ಪನ್ನು ಬುಡಮೇಲು ಮಾಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಪೈಕಿ ಯಾರಿಗೆ ಹೆಚ್ಚು ಸ್ಥಾನ ಸಿಗುತ್ತದೋ ಆ ಪಕ್ಷದವರಿಗೆ ಸಿಎಂ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಆದರೆ, ಶಿವಸೇನಾದವರು ಮಾತು ತಪ್ಪಿದ್ದಾರೆ. ಶಿವಸೇನಾ ನಮ್ಮ ಜೊತೆ ಸರ್ಕಾರದಲ್ಲಿದ್ದೂ ಟೀಕೆ ಟಿಪ್ಪಣಿ ಮಾಡುವ ಹವ್ಯಾಸ ಬೆಳೆಸಿಕೊಂಡಿತ್ತು. ನಮ್ಮ ಹಳೆಯ ಸ್ನೇಹಿತರು ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆವು. ಶಿವಸೇನಾ ಹದ್ದು ಮೀರಿ ಕಾಂಗ್ರೆಸ್ ಮತ್ತು ಎನ್​ಸಿಪಿ ಜೊತೆ ಹೋಗಿದ್ದು ದುರಂತ ಎಂದು ಪ್ರಲ್ಹಾದ್ ಜೋಷಿ ಟೀಕಿಸಿದ್ದಾರೆ.

ಬಿಜೆಪಿ ಮತ್ತು ಶಿವಸೇನಾ ಕೂಡಿಯೇ ಚುನಾವಣೆಗೆ ಹೋಗಿದ್ದೆವು. ಶಿವಸೇನಾಗೆ ಅಧಿಕಾರದ ದಾಹವಾಗಿ ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ. ಅವರದ್ದು ಜನಾದೇಶದ ವಿರುದ್ಧದ ನಡವಳಿಕೆಯಾಗಿದೆ. ಅವರಿಗೆ ತಾವೇ ಸಿಎಂ ಆಗಬೇಕೆನ್ನುವ ಹಠವಿದೆ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಶಿವಸೇನಾ, ಕಾಂಗ್ರೆಸ್, ಎನ್​​ಸಿಪಿ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್​ 10, ಜೆಡಿಎಸ್​ 2 ಸ್ಥಾನ ಗೆಲ್ಲಲಿದೆ; ಸತೀಶ್​ ಜಾರಕಿಹೊಳಿ

ರಾಜ್ಯಪಾಲರು ಎಲ್ಲಾ ಪಕ್ಷಗಳನ್ನೂ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಸಂವಿಧಾನದ ಪ್ರಕಾರ ಎಲ್ಲಾ ಪ್ರಯತ್ನ ಮಾಡಿದಾಗಲೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ, ರಾಷ್ಟ್ರಪತಿ ಆಳ್ವಿಕೆ ಬರುವುದು ಸಹಜವೇ ಆಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.ಇನ್ನು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಮ್ಮ ತಂದೆಯ ಹಳೆಯ ಪ್ರಕರಣವೊಂದನ್ನು ಉಲ್ಲೇಖಿಸಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಪೂರ್ವ ಹೊಂದಾಣಿಕೆಗೆ ಮಾನ್ಯತೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬಿಜೆಪಿ ಮತ್ತು ಶಿವಸೇನಾ ಚುನಾವಗೆ ಮುನ್ನವೇ ಮೈತ್ರಿಕೊಂಡಿದ್ದವು. ಆದರೆ, ಶಿವಸೇನಾದವರು ಕಾಂಗ್ರೆಸ್ ಮತ್ತು ಎನ್​ಸಿಪಿ ಜೊತೆ ಹೊಂದಾಣಿಕೆಗೆ ಮುಂದಾಗಿದ್ದು ಅನೈತಿಕವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯಾದಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

(ವರದಿ: ಪರಶುರಾಮ್ ತಹಶೀಲ್ದಾರ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading