• Home
  • »
  • News
  • »
  • state
  • »
  • Traffic Rules Break: ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿ ಓಡಾಟ; ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ 17,500 ರೂ ದಂಡ!

Traffic Rules Break: ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿ ಓಡಾಟ; ಬೈಕ್ ಸವಾರನಿಗೆ ಬಿತ್ತು ಬರೋಬ್ಬರಿ 17,500 ರೂ ದಂಡ!

ಬೈಕ್​ ಸವಾರನಿಗೆ ಭಾರೀ ದಂಡ

ಬೈಕ್​ ಸವಾರನಿಗೆ ಭಾರೀ ದಂಡ

ಹೆಲ್ಮೆಟ್ ಇಲ್ಲದೆ ಸಂಚರಿಸಿದ ಬೈಕ್ ಸವಾರನೊಬ್ಬರಿಗೆ ಬರೋಬ್ಬರಿ 17,500 ರೂಪಾಯಿ ದಂಡ ಬಿದ್ದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದಂಡ ಬಿದ್ದ ಪ್ರಕರಣ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಸವಾರ ಬೈಕ್ ನನ್ನು ಪೊಲೀಸರಿಗೆ ಒಪ್ಪಿಸಿ ಹೋಗಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ  (ನ.25): ಸಂಚಾರಿ ನಿಯಮ (Traffic Rules) ಉಲ್ಲಂಘಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲಿಯೂ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಮೇಲೆ ವಿಧಿಸುವ ದಂಡದ ಪ್ರಮಾಣವೂ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಸಿಸಿ ಕ್ಯಾಮರಾ (CC Camera) ಕಣ್ಗಾವಲು, ಪೊಲೀಸ್ ಹದ್ದಿನ ಕಣ್ಣು ತಪ್ಪಿಸಿ ಅಡ್ಡಾಡಬಹುದು ಅಂದುಕೊಂಡವರಿಗೆ ಪೊಲೀಸ್ ಇಲಾಖೆ (Police Department) ಶಾಕ್ ನೀಡ್ತಿದೆ. ದೊಡ್ಡ ಪ್ರಮಾಣದಲ್ಲಿ ದಂಡ ತೆರಬೇಕಾಗಿ ಬಂದಾಗ ಕೆಲವೊಬ್ಬರು ವಾಹನವನ್ನೇ ಬಿಟ್ಟು ಹೋದ ಪ್ರಸಂಗಗಳು ರಾಜ್ಯದಲ್ಲಿ (Karnataka) ನಡೆದಿದ್ದವು. ಇದೀಗ ಅಂಥದ್ದೇ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಬೈಕ್ ಸವಾರನಿಗೆ (Bike Rider) ಬರೋಬ್ಬರ್ 17500 ರೂಪಾಯಿ ದಂಡ ಬಿದ್ದಿದ್ದು, ದಂಡಕ್ಕೆ ಬೆಚ್ಚಿದ ಸವಾರ, ಬೈಕ್​ನನ್ನು ಸಂಚಾರಿ ಪೊಲೀಸರಿಗೆ (Traffic Police) ಒಪ್ಪಿಸಿ ಹೋಗಿದ್ದಾನೆ.


ಬೈಕ್ ಸವಾರನಿಗೆ ಭಾರೀ ದಂಡ


ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ಭಾರೀ ದಂಡ ಬಿದ್ದಿದೆ. 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೈಕ್‌ ಸವಾರನಿಗೆ 17,500 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಉತ್ತರ ಸಂಚಾರ ಠಾಣೆ ಪೊಲೀಸರಿಂದ ಬೈಕ್ ಸವಾರನಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿ, ಭಾರಿ ದಂಡ ಹಾಕಿಸಿಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿಯ ಮಹ್ಮದ್‌ ರಫೀಕ್‌ ಗುಡಗೇರಿ ಎಂದು ಗುರುತಿಸಲಾಗಿದೆ.


Riding without a helmet; A fine of Rs 17,500 for the bike rider!
ಬೈಕ್​ ಸವಾರನಿಗೆ ಭಾರೀ ದಂಡ


23 ಕಡೆ ಸಂಚಾರ ನಿಯಮ ಉಲ್ಲಂಘನೆ


ಮಹ್ಮದ್ ರಫೀಕ್ 2017 ರಿಂದ ಈವರೆಗೆ ನಗರದ ವಿವಿಧೆಡೆ ಹೆಲ್ಮೆಟ್‌  ಇಲ್ಲದೆ ಬೈಕ್‌ ಓಡಿಸಿದ್ದ. ಹುಬ್ಬಳ್ಳಿಯ ತೋಳನಕೆರೆ ಯಿಂದ ವಿದ್ಯಾನಗರದ ಕಡೆಗೆ ಹೆಲ್ಮೆಟ್‌ ಧರಿಸಿದೆ ಬೈಕ್‌ ನಲ್ಲಿ ಬರುತ್ತಿದ್ದ ಮಹ್ಮದ್‌ ರಫೀಕ್‌ ನನ್ನು ಸಂಚಾರಿ ಠಾಣೆಯ ಎಎಸ್‌ಐ ರಮ್‌ಜಾನಬಿ ಅಳಗಡವಾಡಿ ಮತ್ತು ಕಾನ್​ ಸ್ಟೇಬಲ್‌ ಚವ್ಹಾಣ್ ತಡೆದಿದ್ದಾರೆ.


ಪೊಲೀಸರ ಕೈಗೆ ಸಿಕ್ಕಿಬಿದ್ದ ರಫೀಕ್​


ಈ ವೇಳೆ ಬೈಕ್ ಸಂಖ್ಯೆ ಎಂಟ್ರಿ ಮಾಡಿ ಚೆಕ್ ಮಾಡಿದಾಗ ನಗರದ 23 ಕಡೆ ಸಂಚಾರ ನಿಯಮ ಉಲ್ಲಂಘಿಸಿದ್ದ ಅಂಶ ಬೆಳಕಿಗೆ ಬಂದಿದೆ. 2017 ರಿಂದಲೇ ಸಂಚಾರ ನಿಯಮ ಉಲ್ಲಂಘಿಸುತ್ತ ಬೈಕ್‌ ಓಡಿಸುತ್ತಿದ್ದ ರಫೀಕ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.


ಬೈಕ್​ ಬಿಟ್ಟು ಹೋದ ಸವಾರ


2017 ರಲ್ಲಿ ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದರೆ 100 ದಂಡ ಇತ್ತು. 2019 ರಲ್ಲಿ ಅದಕ್ಕೆ 500 ದಂಡ ನಿಗದಿಯಾಗಿದೆ. ನಿಯಮ ಉಲ್ಲಂಘಿಸಿರುವ ಕುರಿತು ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ದಂಡದ ರಸೀದಿ ತೆಗೆದುಕೊಟ್ಟಿದ್ದಾರೆ. ಆದರೆ ಅಷ್ಟೊಂದು ಹಣ ಈಗಲೇ ಪಾವತಿಸಲು ಸಾಧ್ಯವಿಲ್ಲ ಎಂದು ಬೈಕ್‌ ಚಾವಿ ಕೊಟ್ಟು ರಫೀಕ್ ಹೊರಟು ಹೋಗಿದ್ದಾನೆ. ಸದ್ಯ ರಫೀಕ್ ಬೈಕ್ ನ್ನು ಸಂಚಾರಿ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ.


ಇದನ್ನೂ ಓದಿ:Voter Id Scam: ಮತದಾರರ ಪಟ್ಟಿ ಮರುಪರಿಷ್ಕರಣೆಗೆ ಡೆಡ್‌ಲೈನ್; ಬೆಂಗಳೂರು ಡಿಸಿ, ಪಾಲಿಕೆ ಅಧಿಕಾರಿ ತಲೆದಂಡ!


ಬೈಕ್ ಸವಾರರಿಗೆ ಎಚ್ಚರಿಕೆ, ಹೆಲ್ಮೆಟ್​ ಧರಿಸದಿದ್ರೆ ಬೀಳುತ್ತೆ ದಂಡ


ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೈಕ್ ಸವಾರನಿಗೆ ದಂಡ ಬಿದ್ದಿದೆ. ಬೈಕ್ ಸವಾರನಿಗೆ ಬಿದ್ದಿರೋ ದಂಡದ ಸುದ್ದಿ ತಿಳಿದು ಬೇರೆ ಬೈಕ್ ಸವಾರರು ಎಚ್ಚೆತ್ತುಕೊಂಡಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದೆ ಪೊಲೀಸರ ಕಣ್ತಪ್ಪಿಸುತ್ತಿದ್ದವರೂ ಈಗ ಹೆಲ್ಮೆಟ್ ಹಾಕಲು ಮುಂದಾಗಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ಓಡಾಡುವವರಿಗೆ ಭಾರೀ ದಂಡ ವಿಧಿಸಿ ಟ್ರಾಫಿಕ್​ ಪೊಲೀಸರು ಶಾಕ್​ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: