• Home
  • »
  • News
  • »
  • state
  • »
  • ಗಣಿನಾಡಿನಲ್ಲಿ ರೈತನ ಕೈ ಹಿಡಿದ ಹಿರೇಕಾಯಿ ಬೆಳೆ.. ಕೈ ತುಂಬಾ ಲಾಭ ತಂದು ಕೊಟ್ಟ ತರಕಾರಿ

ಗಣಿನಾಡಿನಲ್ಲಿ ರೈತನ ಕೈ ಹಿಡಿದ ಹಿರೇಕಾಯಿ ಬೆಳೆ.. ಕೈ ತುಂಬಾ ಲಾಭ ತಂದು ಕೊಟ್ಟ ತರಕಾರಿ

ಹಿರೇಕಾಯಿ ತೋಟ

ಹಿರೇಕಾಯಿ ತೋಟ

ಕೇವಲ 9 ಎಕರೆಯಲ್ಲಿ ಹಿರೇಕಾಯಿ ಬೆಳೆದು ಕೈತುಂಬ ದುಡಿಯುವ ಮಾರ್ಗ ಕಂಡುಕೊಂಡಿದ್ದಾರೆ. ದೂರದ ಹೈದರಾಬಾದ್​​ ಹಾಗೂ ಸಿಕಿ‌ಂದರಾಬಾದ್ ಮಾರುಕಟ್ಟೆಯಲ್ಲಿ ಈ ಹಿರೇಕಾಯಿ ಬಹಳ ಸದ್ದು ಮಾಡುತ್ತಿದೆ. ಕೆಜಿ ತೂಕದ ಈರೇಕಾಯಿ ಇದೀಗ 30 - 40 ರೂ. ಗೆ ಮಾರಾಟ ಆಗುತ್ತಿರೋದು ಕೂಡ ವಿಶೇಷ.

  • Share this:

    ಬಳ್ಳಾರಿ ಗಣಿಗಾರಿಕೆ ಎಂದರೆ ಸಾಕು. ಉತ್ತುಂಗದ ಶಿಖರದೆತ್ತರಕ್ಕೆ ನೋಡೋ ಕಣ್ಣುಗಳೇ ಸಾಕಷ್ಟಿವೆ. ಆದರೆ, ಅದೇ ಗಣಿಗಾರಿಕೆಯಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸಿರೋ ಮಂದಿ ಇದ್ದಾರೆ. ಅದಕ್ಕೆ ಪರ್ಯಾಯವಾಗಿ ವ್ಯವಹಾರ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ತೃಪ್ತಿದಾಯಕ ಜೀವನ ನಡೆಸುತ್ತಿರೋದು ನಮ್ಮ ಮುಂದೆಯೂ ಇದ್ದಾರೆ. ಆ ಪೈಕಿ ರಾಮರೆಡ್ಡಿ- ಒಂಕಾರರೆಡ್ಡಿ ಎನ್ನುವ ಇಬ್ಬರು ಸಹೋದರರು ತಮಗಿರುವ ನೂರು ಎಕರೆ ಆಸ್ತಿಯ ಪೈಕಿ ಕೇವಲ 9 ಎಕರೆಯಲ್ಲಿ ಹಿರೇಕಾಯಿ ಬೆಳೆದು ಕೈತುಂಬ ದುಡಿಯುವ ಮಾರ್ಗ ಕಂಡುಕೊಂಡಿದ್ದಾರೆ.  


    ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಂದಿಕೊಂಡಿರುವ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಹೋಬಳಿಯ ತಿಮ್ಮಲಾಪುರ ಗ್ರಾಮದಲ್ಲಿರುವ ತ‌ಮ್ಮ ತಂದೆಯಿಂದ ಪಿತ್ರಾರ್ಜಿತವಾಗಿ ಬಂದಂತಹ ಸುಮಾರು ಒಂಭತ್ತು ಎಕರೆ ಭೂಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ  ಹಿರೇಕಾಯಿ ಬೆಳೆಯ‌ನ್ನ ಬೆಳೆದಿದ್ದಾರೆ‌. ಇದೀಗ ದೂರದ ಹೈದರಾಬಾದ್​​ ಹಾಗೂ ಸಿಕಿ‌ಂದರಾಬಾದ್ ಮಾರುಕಟ್ಟೆಯಲ್ಲಿ ಈ ಹಿರೇಕಾಯಿ ಬಹಳ ಸದ್ದು ಮಾಡುತ್ತಿದೆ. ಕೆಜಿ ತೂಕದ ಈರೇಕಾಯಿ ಇದೀಗ 30 - 40 ರೂ. ಗೆ ಮಾರಾಟ ಆಗುತ್ತಿರೋದು ಕೂಡ ವಿಶೇಷ ಗಮನಾರ್ಹದ ಸಂಗತಿಯಾಗಿದೆ.ಹೀಗಾಗಿ, ಎಕರೆಗೆ ನಾಲ್ಕು ಲಕ್ಷ ರೂ.ಗಳಂತೆ ಒಂಭತ್ತು ಎಕರೆಯಲ್ಲಿ ಬೆಳೆದ ಈರೇಕಾಯಿ ಬೆಳೆಯಿಂದ 36 ಲಕ್ಷ ರೂ.ಗಳವರೆಗೂ ವಾರ್ಷಿಕ ಆದಾಯ ಬರಲಿದೆ ಎಂದು ರಾಮರೆಡ್ಡಿ ತಿಳಿಸಿದ್ದಾರೆ.


    ರಾಮರೆಡ್ಡಿ ಮೂಲತಃ ಬಳ್ಳಾರಿ ಕಪ್ಪಗಲ್ಲು ರಸ್ತೆಯ ನಿವಾಸಿಯಾಗಿದ್ದ ರಾಮರೆಡ್ಡಿ ಅವರು, 2004 ನೇ ಇಸವಿಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿಯೇ ಬಳ್ಳಾರಿಗೆ ಬರುತ್ತಾರೆ. ಆ ವರ್ಷದಲ್ಲಿಯೇ ಹಾಲಿ ಸಚಿವ ಆನಂದಸಿಂಗ್ ಅವರ ಒಡೆತನದ ಎಸ್ ವಿಕೆ ಮೈನ್ಸ್ ನ ಅಂಗ ಸಂಸ್ಥೆಯಾದ ಗಜಾನನ ಮಿನರಲ್ಸ್ ನ 24 ಎಕರೆಯಲ್ಲಿನ ಗಣಿಗಾರಿಕೆ ಲೀಸ್ ಪಡೆಯುತ್ತಾರೆ‌. ಗುಣಮಟ್ಟದ ಅದಿರು ಇರದ ಕಾರಣ, ಅದನ್ನ ಒಂದು ವರ್ಷದ ಮಟ್ಟಿಗೆ ಇಟ್ಟುಕೊಂಡು ಹಾಲಿ ಸಚಿವ ಬಿ.ಶ್ರೀರಾಮುಲು ಅವರಿಗೆ ಮಾರಾಟ ಮಾಡುತ್ತಾರೆ.


    ಇದನ್ನೂ ಓದಿ: ಚಹಾ ಮಾರಿ ಕುಟುಂಬಕ್ಕೆ ಆಸರೆಯಾದ ಬಾಲಕಿ; ಒಳ್ಳೆ ಶಿಕ್ಷಣ ಪಡೆದು ಸೇನೆ ಸೇರುವಾಸೆ ಯಶೋಧಗೆ


    ಗಣಿಗಾರಿಕೆ ಪ್ರದೇಶದ ಮರು ಪ್ರಕ್ರಿಯೆ ನಡೆಸಲು ಅವರ ಬಳಿ ಹಣ ಇರದ ಪರಿಸ್ಥಿತಿ ಎದುರಾಗುತ್ತೆ. ಆ ಬಳಿಕ, ಸಂಡೂರಿನ ಸ್ವಾಮಿಹಳ್ಳಿ ಬಳಿ ಮೈನಿಂಗ್ ಕಂಪನಿಯನ್ನ ಲೀಸ್ ಪಡೆಯು ತ್ತಾರೆ‌. ಕೊಂಚಮಟ್ಟಿಗೆ ಹಣ ಬಂದ ಹಿನ್ನಲೆಯಲ್ಲಿ ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಕಪ್ಪಗಲ್ಲು ರಸ್ತೆಯಲ್ಲಿ ಮನೆಯನ್ನ ನಿರ್ಮಿಸಿಕೊಂಡಿರುತ್ತಾರೆ. ಇದಕ್ಕಿದಂತೆಯೇ ಗಣಿಗಾರಿಕೆಯಲ್ಲಿ ನಷ್ಟ ಉಂಟಾಗಿ, ಮನೆ- ಮಠ ಕಳೆದುಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಕೊಂಡೇ ವಾಪಾಸ್ ತಿಮ್ಮಲಾಪುರ ಗ್ರಾಮಕ್ಕೆ ತೆರಳುತ್ತಾರೆ. ಅಷ್ಟೊತ್ತಿಗಾಗಲೇ ದಶಕ ಪೂರ್ಣಗೊಂಡಿ ರುತ್ತೆ.


    ಪೂರ್ವಿಕರು ಉಳಿಸಿರೋ ಪಿತ್ರಾರ್ಜಿತ ಆಸ್ತಿಯೇ ನಮಗೆ ಗತಿಯೆಂದು ತಿಳಿದ ರಾಮರೆಡ್ಡಿ- ಒಂಕಾರರೆಡ್ಡಿ ಅವರು, ಕೇವಲ ಒಂದು ಲಕ್ಷ ರೂ.ಗಳ ವೆಚ್ಚದಲ್ಲಿ ಹಿರೇಕಾಯಿ ಬೆಳೆಯನ್ನ ಎಕರೆಯಲ್ಲಿ ಬೆಳೆಯಲಾರಂಭಿಸಿ ಈಗ 9- 10 ಎಕರೆಯಲ್ಲಿ ಹಿರೇಕಾಯಿ ಬೆಳೆಯನ್ನ ಬೆಳೆಯುತ್ತಿ ರೋದಾಗಿ ರಾಮರೆಡ್ಡಿ ತಿಳಿಸಿದ್ದಾರೆ. ಎಕರೆಗೆ ನಾಲ್ಕು ಲಕ್ಷ ರೂ.ಗಳ ವಾರ್ಷಿಕ ಆದಾಯ ಹರಿದು‌ ಬರುತ್ತೆ ಅಂದರು.


    ವರದಿ: ವಿನಾಯಕ ಬಡಿಗೇರ

    Published by:Kavya V
    First published: