ಗದಗದಲ್ಲಿ ನಡೆಯುತ್ತಿದೆಯಾ ಅಕ್ಕಿ ಮಾಫಿಯಾ; ನ್ಯೂಸ್ 18 ಕನ್ನಡ ಕಾರ್ಯಾಚರಣೆಯಲ್ಲಿ ರಹಸ್ಯ ಬಯಲು

ಜೋಳ ಬಿಟ್ಟು ಬೇರೆ ಏನು ಇಲ್ಲ ಎಂದು ಹೇಳುತ್ತಿದ್ದ ಆಸಾಮಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದ್ದ. ಯಾವಾಗ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮನೆಯದ್ದ ಎಲ್ಲ ಚೀಲಗಳನ್ನು ಪತ್ತೆ ಮಾಡಿದರೋ ಆಗ ಜೋಳದ ಚೀಲಗಳ ಮಧ್ಯದಲ್ಲಿ ಅಡಗಿಸಿದ್ದ ಅಕ್ಕಿ ಚೀಲಗಳು ಪತ್ತೆಯಾಗಿವೆ.

news18-kannada
Updated:August 14, 2020, 8:04 AM IST
ಗದಗದಲ್ಲಿ ನಡೆಯುತ್ತಿದೆಯಾ ಅಕ್ಕಿ ಮಾಫಿಯಾ; ನ್ಯೂಸ್ 18 ಕನ್ನಡ  ಕಾರ್ಯಾಚರಣೆಯಲ್ಲಿ ರಹಸ್ಯ ಬಯಲು
ಲಕ್ಷ್ಮಣ ಸುಣಗಾರ
  • Share this:
ಗದಗ: ಗದಗ ಜಿಲ್ಲೆಯಲ್ಲಿ ಬಡವರ ಪಾಲಿನ ಅಕ್ಕಿಯನ್ನು ಕಾಳ ಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮಣ ಸುಣಗಾರ ಎಂಬ ವ್ಯಕ್ತಿ ಮನೆಯೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದಾರೆ. ನಿಮ್ಮ ನ್ಯೂಸ್ 18 ಕನ್ನಡ ನಡೆಸಿದ ರಹಸ್ಯ ಕಾರ್ಯಾಚರಣೆ ವೇಳೆ ಲಕ್ಷ್ಮಣ ಸುಣಗಾರ ಎಂಬಾತ ಒಂದು ಕೆ.ಜಿ ಅಕ್ಕಿಗೆ‌ 13 ರೂ.ನಂತೆ ಖರೀದಿ ಮಾಡುತ್ತಿದ್ದುದು ಬಯಲಿಗೆ ಬಂದಿದೆ.

ನಿಮ್ಮ ಬಳಿ ಎಷ್ಟು ಅನ್ನಭಾಗ್ಯದ ಅಕ್ಕಿಯಿದೆ ಅದನ್ನು ತೆಗೆದುಕೊಂಡು ಬನ್ನಿ, ಖರೀದಿ ಮಾಡುತ್ತೇನೆ ಎಂದು ಹೇಳುತ್ತಾನೆ. ನ್ಯೂಸ್​18 ಕನ್ನಡದ ವಿಡಿಯೋದಲ್ಲಿ ಅದು ಬಟಾ ಬಯಲಾಗಿದೆ.  ಮನೆಯೊಂದರಲ್ಲಿ‌ ಜೋಳ ಖರೀದಿ ಮಾಡುತ್ತೇನೆ ಅಂತ ಹೇಳಿಕೊಂಡು ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ಬೆಲೆಗೆ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾನೆ ಈ ಆಸಾಮಿ. ಮೇಲ್ನೋಟಕ್ಕೆ ಜೋಳವನ್ನು ಮಾತ್ರ ಖರೀದಿ ಮಾಡುತ್ತಾನೆ ಎನ್ನುವಂತೆ ನಾಟಕವಾಡುವ ಈ ಲಕ್ಷ್ಮಣ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಬೆಚ್ಚಿ ಬಿದ್ದಿದ್ದಾನೆ. ನೋಡಿ ಸರ್ ನಾವು ಕೇವಲ ಜೋಳವನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಅಂತ ಹೇಳುತ್ತಾನೆ. ಪೊಲೀಸರು ಮನೆಯನ್ನು ಜಾಲಾಡಿದಾಗ ಮನೆಯಲ್ಲಿದ್ದ ಅಕ್ರಮವಾಗಿ ಸಂಗ್ರಹಣೆ ಮಾಡಿದ ಅನ್ನಭಾಗ್ಯದ ಅಕ್ಕಿ ಸಿಕ್ಕಿದೆ.

ಇದನ್ನೂ ಓದಿ: ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ; ಬಿ.ಎಲ್. ಸಂತೋಷ್‌ಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಗದಗ ಡಿವೈಎಸ್​ಪಿ ಪ್ರಲ್ಹಾದ್ ಅವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಠಾಣೆ  ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ನೇರವಾಗಿ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಬನ್ನಿ ಸರ್ ಚೆಕ್ ಮಾಡಿಕೊಳ್ಳಿ, ಜೋಳ ಬಿಟ್ಟು ಬೇರೆ ಏನು ಇಲ್ಲ ಎಂದು ಹೇಳುತ್ತಿದ್ದ ಆಸಾಮಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದ್ದ. ಯಾವಾಗ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮನೆಯದ್ದ ಎಲ್ಲ ಚೀಲಗಳನ್ನು ಪತ್ತೆ ಮಾಡಿದರೋ ಆಗ ಜೋಳದ ಚೀಲಗಳ ಮಧ್ಯದಲ್ಲಿ ಅಡಗಿಸಿದ್ದ ಅಕ್ಕಿ ಚೀಲಗಳು ಪತ್ತೆಯಾಗಿವೆ. 50 ಕೆ.ಜಿ. ಯ 36 ಅನ್ನಭಾಗ್ಯ ಅಕ್ಕಿ‌ ಚೀಲ್ ಗಳು ಪತ್ತೆಯಾಗಿವೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತನಾದ ಲಕ್ಷ್ಮಣ ಸುಣಗಾರ ಎನ್ನುವಾತನನ್ನು ಬಂಧಿಸಲಾಗಿದೆ. ಇನ್ನೂ ಈತ ಯಾರಿಗೆ ಅನ್ನಭಾಗ್ಯ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಅಂತಾರೆ ಗದಗ ಪೊಲೀಸ್ ವರಿಷ್ಠಾಧಿಕಾರಿಗಳು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿತ್ತು. ಆದ್ರೆ ಜಿಲ್ಲೆಯನ್ನು ಬಿಟ್ಟು ತಾಲೂಕು ಕೇಂದ್ರದಲ್ಲಿ ಸಹ ಬಡವರ ಪಾಲಿನ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಹಾಗಾಗಿ ಪೊಲೀಸರು ಸಮಗ್ರವಾದ ತನಿಖೆ ಮಾಡಿದಾಗ ಮಾತ್ರ ಈ ಅಕ್ರಮ ದಂಧೆ ಜಾಲದಲ್ಲಿ ಯಾರ್ಯಾರು ಇದ್ದಾರೆ ಎನ್ನುವುದು ಗೊತ್ತಾಗಬೇಕಾಗಿದೆ.
Published by: Sushma Chakre
First published: August 14, 2020, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading