Vegetable Price: ಗಗನಕ್ಕೇರಿದ ತರಕಾರಿ ಬೆಲೆ; ಜನಸಾಮನ್ಯರು ತತ್ತರ: ಯಾವುದರ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಆದ್ರೆ ಇದೀಗ ಬರೋಬ್ಬರಿ 100 ರೂ. ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಎರಡ್ಮೂರು ವಾರಗಳಿಂದ ಏರಿಕೆಯಾಗಿರುವ (Price Hike) ತರಕಾರಿ ಬೆಲೆ (Vegetable Price) ಮಾತ್ರ ಇಳಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಚೀಲ ತುಂಬ ದುಡ್ಡು (Money) ತೆಗೆದುಕೊಂಡು ಹೋಗಿ, ಜೇಬು ತುಂಬ ತರಕಾರಿ ತೆಗೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಟೊಮಾಟೋ ಬೆಲೆ (Tomato Price) ಮಾತ್ರ ಶತಕದಲ್ಲಿಯೇ ಇದೆ. ಟೊಮಾಟೋ ಜೊತೆಗೆ ಇನ್ನುಳಿದ ಎಲ್ಲ ತರಕಾರಿ ಬೆಲೆಯೂ ಹಂತ ಹಂತವಾಗಿ ಏರಿಕೆ ಆಗುತ್ತಿದೆ. ಹಾಗಲಕಾಯಿ ಮಾತ್ರವಲ್ಲ, ಯಾವ ತರಕಾರಿ ತಿಂದ್ರೂ ಈಗ ಕಹಿ ಆಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ತರಕಾರಿ ಬೆಲೆ ಕೂಡ ಈಗ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಆದ್ರೆ ಇದೀಗ ಬರೋಬ್ಬರಿ 100 ರೂ. ಆಗಿದೆ. ಮೂಲಂಗಿ, ಬೀಟ್ ರೂಟ್ ಮತ್ತು ನವಿಲುಕೋಸು ಹೊರತುಪಡಿಸಿ ಉಳಿದೆಲ್ಲ ತರಕಾರಿ ಬೆಲೆ ಏರಿಕೆ ಕಂಡಿದೆ. ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದರ ಪಟ್ಟಿ ಇಲ್ಲಿದೆ







































































ತರಕಾರಿಬೆಲೆ (ರೂ.ಗಳಲ್ಲಿ) ಪ್ರಮಾಣ ಕೆಜಿ
ಫಾರಂ ಬಟಾಣಿ180
ಟೊಮಾಟೋ100
ಬೀನ್ಸ್100
ಹೀರೇಕಾಯಿ70
ಬೀಟ್ ರೂಟ್35
ನವಿಲುಕೋಸು40
ಮೂಲಂಗಿ30
ಬದನೆಕಾಯಿ40
ಅವರೆಕಾಳು45
ಎಲೆಕೋಸು50
ಬೆಂಡೆಕಾಯಿ50
ದೊಡ್ಡ ಮೆಣಸಿನಕಾಯಿ40
ಸೌತೆಕಾಯಿ30
ಹುರುಳಿ40
ಕ್ಯಾರೆಟ್50
ನುಗ್ಗೇಕಾಯಿ40-50

ಸೊಪ್ಪು ಬೆಲೆ ಏರಿಕೆ

ಇನ್ನೂ ಪುದಿನಾ ಚಿಕ್ಕ ಕಟ್ಟು 15 ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಕೋತಂಬರಿ ಸೊಪ್ಪು ಸಹ 40 ರಿಂದ 50 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನುಳಿದಂತೆ ದಂಟು, ಸಬ್ಬಕ್ಕಿ ಸಹ 20 ರೂ. ಗೆ ಏರಿಕೆಯಾಗಿದೆ. ನಿಂಬೆ ಹಣ್ಣಿನ ಬೆಲೆ ಕೊಂಚ ಇಳಿಕೆಯಾಗಿದ್ದು, 3 ರಿಂದ 5 ರೂ.ಗೆ ಒಂದು ಸಿಗುತ್ತಿದೆ.

ಇದನ್ನೂ ಓದಿ:  Bengaluru Schoolಗಳಿಗೆ ಹುಸಿ ಬಾಂಬ್ ಮೇಲ್ ಪ್ರಕರಣದ ಹಿಂದೆ 17 ವರ್ಷದ ಬಾಲಕ: ಹೇಗೆ? ಎಲ್ಲಿಂದ ಬಂದಿದ್ದು ಆ ಮೇಲ್?

ಕೋಲಾರದಲ್ಲಿ 1 ಸಾವಿರ ಗಡಿದಾಟಿದ ಟೊಮೆಟೊ, ಕೊಳ್ಳಲು ಗ್ರಾಹಕರ ಹಿಂದೇಟು

ಏಷ್ಯಾದಲ್ಲೆ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರೊ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಬೆಲೆ 1 ಸಾವಿರ ಗಡಿದಾಟಿದೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ಕೆಜಿ ತೂಕದ ಒಂದು ಬಾಕ್ಸ್, 1 ಸಾವಿರ ರೂಪಾಯಿ ಗಡಿದಾಟಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.

ಕೋಲಾರದ ರೈತರಿಗೆ ಮಾತ್ರ ಭಾರೀ ನಷ್ಟ

ಆದರೆ ಈ ಸಂತಸ ಕೋಲಾರ ರೈತರ ಪಾಲಿಗೆ ಪೂರ್ಣ ಪ್ರಮಾಣದಲ್ಲಿ ಸಿಗದಂತಾಗಿದೆ. ಕೋಲಾರ ಜಿಲ್ಲೆಯಲ್ಲೀಗ ಟೊಮೆಟೊ ಬೆಳೆ ಕಡಿಮೆ ಪ್ರಮಾಣದಲ್ಲಿದೆ. ನೆರೆಯ ಆಂದ್ರದಿಂದ ಹಾಗು ಹೊರ ರಾಜ್ಯಗಳಿಂದ ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಸಾಲು ಸಾಲು ನಷ್ಟ ಅನುಭವಿಸಿರೊ ರೈತರು, ಈ ಸಲ ಟೊಮೆಟೊ ಬೆಳೆಯೋ ಸಾಹಸಕ್ಕೆ ಕೈ ಹಾಕಿಲ್ಲ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶನಿವಾರ (ಮೇ 21) ಕೇಂದ್ರವು ಕ್ರಮವಾಗಿ ಲೀಟರ್‌ಗೆ 8 ಮತ್ತು 6 ರೂ. ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರಕ್ಕೆ ವರ್ಷಕ್ಕೆ ಸುಮಾರು 1 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಟ್ವಿಟರ್‌ನಲ್ಲಿ ಹಣದುಬ್ಬರವನ್ನು ನಿಗ್ರಹಿಸುವ ಮತ್ತು ಉಜ್ವಲ ಯೋಜನೆಯಡಿ ಸಿಲಿಂಡರ್‌ಗಳನ್ನು ಒದಗಿಸುವ ಕುರಿತು ಇತರ ಹೇಳಿಕೆಗಳೊಂದಿಗೆ ಪ್ರಕಟಿಸಿದ್ದಾರೆ.

ಇದನ್ನೂ ಓದಿ:  Ramanagara: ತುಂಬಿ ಹರಿಯುತ್ತಿರುವ ಇಗ್ಗಲೂರಿನ HDD ಬ್ಯಾರೇಜ್, ಪ್ರವಾಸಿಗರ ಆಗಮನ 

ಉಕ್ರೇನ್ ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾತೈಲ (Crude Oil) ಬೆಲೆ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇತ್ತು. ಆದರೆ ಈಗ ಇಂಧನ ಬೆಲೆ ದಿಢೀರ್ ಇಳಿಕೆ ಕಂಡಿದೆ.
Published by:Mahmadrafik K
First published: