Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು‌ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ

ಪ್ರವೀಣ್ ನೆಟ್ಟಾರು ಹತ್ಯೆ ನಡೆದು 17 ದಿನಗಳಲ್ಲೇ 3 ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೊಲೀಸ್ ತಂಡ ಬಂಧಿಸಿತ್ತು. ಇದಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇಲಾಖೆಯಿಂದ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗಳಿಗೂ ಈ ಹಣವನ್ನು ಇದೀಗ ಹಂಚಲಾಗಿದೆ.

ಕೊಲೆಯಾದ ಪ್ರವೀಣ್​ ನೆಟ್ಟಾರು

ಕೊಲೆಯಾದ ಪ್ರವೀಣ್​ ನೆಟ್ಟಾರು

  • Share this:
ಬಿಜೆಪಿ ಮುಖಂಡ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣ (Murder case) ಕೇವಲ ಕರ್ನಾಟಕ (Karnataka) ಮಾತ್ರವಲ್ಲದೇ ದೇಶದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ (BJP) ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು (Accused) ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ಭಾರೀ ಪರಿಶ್ರಮಪಟ್ಟಿದೆ. ಹತ್ಯೆ ನಡೆದು 17 ದಿನಗಳಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೊಲೀಸ್ ತಂಡ ಬಂಧಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಿದೆ. ಈಗ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ (Award) ನೀಡಲಾಗಿದೆ.

ಹತ್ಯೆ ನಡೆದು 17 ದಿನಗಳಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೊಲೀಸ್ ತಂಡ ಬಂಧಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇಲಾಖೆಯಿಂದ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗಳಿಗೂ ಈ ಹಣವನ್ನು ಇದೀಗ ಹಂಚಲಾಗಿದೆ.

ಹಂತಕರ ಪತ್ತೆ ಹಗಲಿರುಳು ಕೆಲಸ

ಜುಲೈ 21ರಂದು ಬೆಳ್ಳಾರೆಯ ಕಳಂಜದಲ್ಲಿ ನಡೆದ ಮಸೂದ್ ಎಂಬಾತನ ಕೊಲೆಯ‌ ಜೊತೆಗೆ ಜುಲೈ 26 ರಂದು ನಡೆದ  ಪ್ರವೀಣ್ ನೆಟ್ಟಾರು ಹತ್ಯೆಯ ಹಂತಕರನ್ನು ಬಂಧಿಸಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಪೊಲೀಸರ ತಂಡ ಹಗಲಿರುಳು‌ ದುಡಿದು ಆರೋಪಿಗಳನ್ನು ಬಂಧಿಸಿದೆ.

Reward for the team that arrested the killers of BJP leader Praveen Nettar
ಪ್ರವೀಣ್ ನೆಟ್ಟಾರು


17 ದಿನದಲ್ಲೇ ಆರೋಪಿಗಳ ಬಂಧನ

ಅತ್ಯಂತ ಕ್ಲಿಷ್ಟಕರವಾದ ಪ್ರವೀಣ್ ನೆಟ್ಟಾರು ಹಂತಕರನ್ನು ಹಿಡಿಯಲು ಪೊಲೀಸ್ ತಂಡ ಕರ್ನಾಟಕ ಹಾಗೂ ಕೇರಳದ ಮೂಲೆ‌ ಮೂಲೆಗೂ ತೆರಳಿ ಹುಡುಕಾಟ ನಡೆಸಿತ್ತು. ಹತ್ಯೆ ನಡೆದು 17 ದಿನಗಳಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೋಲೀಸ್ ತಂಡ ಬಂಧಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: 2017ರಲ್ಲಿ ಮಾಂಸ ತಿಂದು ಮೈಸೂರು ದಸರಾ ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?

82 ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ

ಪ್ರವೀಣ್ ನೆಟ್ಟಾರು ಹಂತಕರನ್ನು ಬಂಧಿಸಲು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 82 ಪೊಲೀಸರ ತಂಡ ಹಗಲಿರುಳು ಕಾರ್ಯಾಚರಣೆ ನಡೆಸಿದೆ. ಎಸ್​​ಪಿ, ಡಿವೈಎಸ್​ಪಿ, 4 ಇನ್ಸ್‌ಪೆಕ್ಟರ್, 4 ಸಬ್ ಇನ್ಸ್‌ಪೆಕ್ಟರ್ ಹಾಗೂ  ಇತರೆ ಸಿಬ್ಬಂದಿಯ ತಂಡದ ಕಾರ್ಯವನ್ನು ಇದೀಗ ರಾಜ್ಯ ಪೋಲೀಸ್ ಇಲಾಖೆ ಗುರುತಿಸಿದೆ. ಪ್ರಕರಣವನ್ನು ರಾಜ್ಯ ಸರಕಾರ ಎನ್​​ಐಎಗೆ ವಹಿಸಿದ ಬಳಿಕವೂ ಅತ್ಯಂತ ನಿಷ್ಠೆಯಿಂದ ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಈಗ ತನಿಖೆಯ ಎಲ್ಲಾ ಜಬಾವ್ದಾರಿಗಳನ್ನು ಎನ್ಐಎ ಕೈಗೆ ನೀಡಲಾಗಿದೆ.

Reward for the team that arrested the killers of BJP leader Praveen Nettar
ಆರೋಪಿ ಝಾಕಿರ್


ಪೊಲೀಸ್ ತಂಡಕ್ಕೆ 10 ಲಕ್ಷ ಬಹುಮಾನ

ಪೋಲೀಸರ ಈ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಸ್ವತಃ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇಲಾಖೆಯಿಂದ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗೂ ಈ ಹಣವನ್ನು ಹಂಚಲಾಗಿದೆ. ಮಂಗಳೂರಿನ ಪೋಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಬಹುಮಾನ ಹಾಗು ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.

ಹಂತಕರ ಹಿಡಿದ ಖಾಕಿಗೆ ಬಹುಮಾನ ಹಂಚಿಕೆ

ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಬ್ ಇನ್ಸ್‌ಪೆಕ್ಟರ್​ಗಿಂತ ಕೆಳ‌ಹಂತದ ಸಿಬ್ಬಂದಿಗಳಿಗೆ ಮೂರು ಶ್ರೇಣಿಯಲ್ಲಿ ಬಹುಮಾನದ ಮೊತ್ತವನ್ನು ವಿತರಿಸಲಾಗಿದೆ. ಪ್ರಮುಖ ಕಾರ್ಯಾಚರಣೆ ಮಾಡಿದ‌ ಸಿಬ್ಬಂದಿಗೆ ತಲಾ 12 ಸಾವಿರ, ಬಳಿಕದ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗೆ ಕ್ರಮವಾಗಿ 7 ಸಾವಿರ ಮತ್ತು 5 ಸಾವಿರ ರೂಪಾಯಿಗಳನ್ನು ನೀಡಲಾಗಿದೆ.

Reward for the team that arrested the killers of BJP leader Praveen Nettar
ಪೊಲೀಸ್ ತಂಡಕ್ಕೆ ಬಹುಮಾನ


ಇದನ್ನೂ ಓದಿ: ಸಡಿಲಗೊಳ್ಳದ ಹಿಜಾಬ್ ಹಠ, ಶಿಕ್ಷಣ ಸಂಸ್ಥೆಗಳಿಗೆ ಗುಡ್ ​ಬೈ; 145 ಮಕ್ಕಳು ಹೊರಟ್ಟಿದ್ದೆಲ್ಲಿಗೆ?

ಸಬ್ ಇನ್ಸ್‌ಪೆಕ್ಟರ್ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ತಲಾ 25 ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ವಿತರಿಸಲಾಗಿದೆ. ಪ್ರವೀಣ್ ಹಂತಕರನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಪ್ರವೀಣ್‌ ಕುಟುಂಬ ಸೇರಿದಂತೆ ಜಿಲ್ಲೆಯ ಜನ ಮೆಚ್ಚುಗೆ ಹಾಗು ಅಭಿನಂದನೆಯನ್ನು ಸಲ್ಲಿಸಿದೆ. ಇದೀಗ ಪೋಲೀಸರಿಗೆ ಬಹುಮಾನ ವಿತರಿಸುವ ಮೂಲಕ  ಮತ್ತಷ್ಟು‌ ಕಾರ್ಯಾಚರಣೆಯನ್ನು ನಡೆಸುವಂತೆ ಪೋಲೀಸ್‌ ಇಲಾಖೆ‌ ಹುರಿದುಂಬಿಸಿದೆ.
Published by:Thara Kemmara
First published: