• Home
  • »
  • News
  • »
  • state
  • »
  • ನಕಲಿ ದಾಖಲೆ ಸೃಷ್ಟಿಸಿ 40 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಮೀನು ಮಾರಾಟಕ್ಕೆ ಯತ್ನಿಸಿದ ಅಧಿಕಾರಿಗಳು

ನಕಲಿ ದಾಖಲೆ ಸೃಷ್ಟಿಸಿ 40 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಮೀನು ಮಾರಾಟಕ್ಕೆ ಯತ್ನಿಸಿದ ಅಧಿಕಾರಿಗಳು

ಸರ್ಕಾರಿ ಜಮೀನು

ಸರ್ಕಾರಿ ಜಮೀನು

ಆದರೀಗ, ಈ ಜಮೀನು ಕಾಪಾಡಬೇಕಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಭೂಗಳ್ಳರೊಂದಿಗೆ ಸೇರಿ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • Share this:

ಯಲಹಂಕ(ಆ.05): ಯಲಹಂಕ ತಾಲ್ಲೂಕು ಜಾಲ ಹೋಬಳಿ ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್​​ 19 ಮತ್ತು 92ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸುಮಾರು 46 ಕೋಟಿ ರೂ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಭೂಗಳ್ಳರೊಂದಿಗೆ ಸೇರಿ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಮಾರಾಟ ಮಾಡುವ ಯತ್ನಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಮುಂದಾಗಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.


ಇದೇ ಜನವರಿ ತಿಂಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 16 ಎಕರೆ ಸರ್ಕಾರಿ ಜಮೀನನ್ನು ಯಲಹಂಕ ತಹಶೀಲ್ದಾರ್, ಉಪ ತಹಶಿಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ತಂಡ ಪೂರ್ಣವಾಗಿ ತೆರವುಗೊಳಿಸಿದೆ. ಈ ಜಾಗದಲ್ಲಿ ನಾಮ ಫಲಕ ಅಳವಡಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ಬೇಲಿ ಹಾಕಿದರು.


ಇನ್ನು, ತೆರವುಗೊಳಿಸಲಾದ ಈ ಜಮೀನಿನಲ್ಲಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಯಲಹಂಕ ತಹಶೀಲ್ದಾರ್ ಅವರು ಕಳೆದ ನಾಲ್ಕು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದರು ಎಪಿಎಂಸಿ ಹಸ್ತಾಂತರಿಸುವ ಕಡತ ಸರ್ಕಾರದಿಂದ ಅಂಕಿತ ಹಾಕಲಾಗಿದೆ. ಕಡತ ವಿಲೇವಾರಿ ಮಾಡಿ ಎಪಿಎಂಸಿಗೆ ಹಸ್ತಾಂತರ ಆಗುವ ಹಂತದಲ್ಲಿದೆ.


ಆದರೀಗ, ಈ ಜಮೀನು ಕಾಪಾಡಬೇಕಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಭೂಗಳ್ಳರೊಂದಿಗೆ ಸೇರಿ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಈ ಮಧ್ಯೆ ಭೂ ಒತ್ತುವರಿದಾರರಾದ ನಂಜಪ್ಪ, ನಾಗರಾಜ, ಪಟೇಲಪ್ಪ, ಅಶ್ವಥಪ್ಪ, ಮೈಲಾರಪ್ಪ, ಅಪ್ಪಣ್ಣ ಸೇರಿದಂತೆ ಒಟ್ಟು 14 ಜನ ಒತ್ತುವರಿದಾರರು ಸದರಿ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಬೆಂ.ನಗರ ವಿಶೇಷ ಜಿಲ್ಲಾಧಿಕಾರಿಗಳು, ಬೆಂ. ಉತ್ತರ ಉಪ ವಿಭಾಗಾಧಿಕಾರಿಗಳು ಹಾಗೂ ಯಲಹಂಕ ತಹಶೀಲ್ದಾರ್ ರವರಿಗೂ ಅರ್ಜಿ ಸಲ್ಲಿಸಿ ಗಮನಕ್ಕೆ ತಂದಿದ್ದಾರೆ.


ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19: ಒಂದೇ ದಿನ 5619 ಕೇಸ್​, 1.51 ಲಕ್ಷ ದಾಟಿದ ಸೋಂಕಿತರ ಸಂಖ್ಯೆ


ಈ ಕುರಿತು ನ್ಯೂಸ್-18ಗೆ ಪ್ರತಿಕ್ರಿಯೆ ನೀಡಿರುವ ಯಲಹಂಕ ತಹಶಿಲ್ದಾರ್ ಎನ್. ರಘುಮೂರ್ತಿರವರು ಒಮ್ಮೆ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದ ಭೂಮಿಯನ್ನು ಯಾವುದೇ ಕಾರಣಕ್ಕೂ ಪುನಃ ಒತ್ತುವರಿ ಮಾಡಲಾಗುವುದಿಲ್ಲ. ಪರಭಾರೆ  ಮಾಡಲು ಅವಕಾಶ ಮಾಡಿಕೊಡಬಾರದೆಂಬ ಸರ್ಕಾರದ ಆದೇಶವಿದೆ. ಆದರೆ, ತಿಮ್ಮಸಂದ್ರ ಗ್ರಾಮದ ಸದರಿ ನಂ.19 ಮತ್ತು 92ರಲ್ಲಿ ನಿಯಮ ಉಲ್ಲಂಘಿಸಿದ್ದಾರೆಂದು ತಿಳಿದು ಬಂದಿದೆ. ಒತ್ತುವರಿ ಕುರಿತು ಶೀಘ್ರದಲ್ಲೇ ಸೂಕ್ತ ತನಿಖೆ ನಡೆಸಿ ಭೂ ಒತ್ತುವರಿದಾರರು ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಹಾಗೆಯೇ ವಶಕ್ಕೆ ಪಡೆದಿರುವ ಜಾಗ ಒಂದಿಂಚು ಬಿಡದೆ ಎಪಿಎಂಸಿಗೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Published by:Ganesh Nachikethu
First published: