ನಕಲಿ ಕಂದಾಯ ರಸೀದಿ ಸೃಷ್ಠಿ; ದಾವಣಗೆರೆ ಪಾಲಿಕೆ ಖಜಾನೆಗೆ ಕನ್ನ
ಮಧ್ಯವರ್ತಿಗಳಾದ ಗುರುರಾಜ್, ವೆಂಕಟೇಶನನ್ನು ಬಂಧಿಸಿದ ಪೊಲೀಸರು, ಅವರಿಂದ ನಕಲಿ ಫಾರಂ ಹಾಗೂ ನಕಲಿ ರಬ್ಬರ್ ಸ್ಡಾಂಪ್ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
news18-kannada Updated:October 15, 2020, 1:33 PM IST

ದಾವಣಗೆರೆ ಪೊಲೀಸ್
- News18 Kannada
- Last Updated: October 15, 2020, 1:33 PM IST
ದಾವಣಗೆರೆ(ಅ.15): ಮಾರ್ಕ್ಸ್ ಕಾರ್ಡ್, ಜಾತಿ ಪ್ರಮಾಣಪತ್ರ ನಕಲಿ ಮಾಡುವ ಜಾಲದ ಬಗ್ಗೆ ಗೊತ್ತಿದೆ. ಆದ್ರೆ, ಪಾಲಿಕೆಗೆ ಕಟ್ಟುವ ಕಂದಾಯ, ಶುಲ್ಕಗಳ ನಕಲಿ ರಸೀದಿಯನ್ನು ಸೃಷ್ಟಿ ಮಾಡಿದ ಖದೀಮರು ಪಾಲಿಕೆ ಖಜಾನೆಗೆ ಕನ್ನ ಹಾಕಿದ್ದಾರೆ. ಹಲವಾರು ವರ್ಷಗಳಿಂದ ನಿರಾತಂಕವಾಗಿದ್ದ ಕಿರಾತಕರನ್ನು ಪೊಲೀಸರು ಹೆಡಮುರಿ ಕಟ್ಟಿದ್ದಾರೆ. ಈ ನಕಲಿ ರಸೀದಿ ಜಾಲ ಸಿಕ್ಕಿಬಿದ್ದಿದಾದ್ರೂ ಹೇಗೆ ಅಂತೀರಾ. ಈ ಸ್ಟೋರಿ ನೋಡಿ. ಎಲ್ಲರಿಗೂ ಅವರದ್ದೇ ಆದ ಗಡಿಬಿಡಿ. ನಿವೇಶನ, ಮನೆ, ಕಟ್ಟಡ, ನೀರು ಸರಬರಾಜಿನ ಕಂದಾಯ ಪಾವತಿ, ಖಾತಾ ಎಕ್ಸ್ಟ್ರಾಕ್ಟ್, ಜನನ-ಮರಣ ಪ್ರಮಾಣ ಪಡೆಯಲು ಶುಲ್ಕ ಪಾವತಿ ಇದಾವುದಕ್ಕೂ ಯಾರಲ್ಲೂ ಸಮಯವೂ ಇಲ್ಲ, ತಾಳ್ಮೆಯೂ ಇಲ್ಲ. ಇದಕ್ಕಾಗಿ ಮಧ್ಯವರ್ತಿಗಳ ಸಹಾಯ ಕೈ ಚಾಚುತ್ತಾರೆ. ಅವರಿಗೊಂದಷ್ಟು ಹಣ ಕೊಟ್ಟು ತಮ್ಮ ಕೆಲಸ ಆದ್ರೆ ಸಾಕು ಅಂತಾರೆ. ಇಂಥವರೇ ಮಧ್ಯವರ್ತಿಗಳ ಜೀವನಾಧಾರ. ದುರಾಸೆಗೆ ಈಡಾದ ಕೆಲವು ಬ್ರೋಕರ್ಗಳು ಪಾಲಿಕೆ ರೆವಿನ್ಯೂ ಅಧಿಕಾರಿಯ ನಕಲಿ ರಬ್ಬರ್ ಸ್ಟಾಂಪ್ ಮಾಡಿಸಿಕೊಂಡಿದ್ದಾರೆ.
ಪಾಲಿಕೆಗೆ ಸಂದಾಯವಾಗಬೇಕಾದ ಕಂದಾಯ ಅಥವಾ ಶುಲ್ಕವನ್ನು ಪಾಲಿಕೆ ಖಾತೆ ಜಮಾ ಮಾಡುವ ಬದಲು ತಮ್ಮ ಜೇಬಿಗೆ ಇಳಿಸಿ ನಕಲಿ ಸಹಿಯುಳ್ಳ ರಸೀದಿಯನ್ನೂ ಕೊಡುತ್ತಾರೆ. ಸಾರ್ವಜನಿಕರ ಮೋಸ ಮಾಡುವ ಜತೆ ಪಾಲಿಕೆ ಖಜಾನೆಗೆ ಕನ್ನ ಹಾಕುತ್ತಾರೆ. ಇಂಥ ಗ್ಯಾಂಗ್ ಒಂದು ಸಿಕ್ಕಿ ಬಿದ್ದಿದ್ದು, ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾರೆ ಎಂದು ಪಾಲಿಕೆಯ ಮೇಯರ್ ಬಿ.ಜಿ. ಅಜಯಕುಮಾರ್ ಮಾಹಿತಿ ನೀಡುತ್ತಾರೆ. ನಕಲಿ ಖಾತಾ ಎಕ್ಸ್ಟ್ರಾಕ್ಟ್ ಹಾವಳಿ ಹಲವು ದಿನಗಳಿಂದ ಇದೆ. ಈಗ ಬಹಿರಂಗವಾಗಿದೆ. ಬೆಂಗಳೂರು ಡ್ರಗ್ಸ್ ಪ್ರಕರಣ; ಸಿಸಿಬಿ ಪೊಲೀಸರಿಗೆ ತಲೆನೋವಾದ ಆರೋಪಿ ಅಶ್ವಿನ್ ಬೂಗಿ
ಸಾರ್ವಜನಿಕರಿಂದ ಚಲನ್ ಹಣ ಪಡೆದು ನಕಲಿ ಸೀಲ್ವುಳ್ಳ ರಸೀದಿ ನೀಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರ ನೀಡಿದ್ದೇವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುತ್ತಾರೆ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪಾಲಿಕೆ ಆಯುಕ್ತರ ನಿರ್ದೇಶನದಂತೆ, ಪಾಲಿಕೆ ಅಧಿಕಾರಿ ನಾಗರಾಜ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಆರೋಪಿ ಮಧ್ಯವರ್ತಿ ಮಹೇಶ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ನಕಲಿ ಖಾತೆ ಎಕ್ಸ್ಟ್ರಾಕ್ಟ್ ನೀಡಿದ್ದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ಜತೆ ತನಗೆ ಸಹಕರಿಸಿದ್ದ ಇಬ್ಬರು ಮಧ್ಯವರ್ತಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ. ಮಧ್ಯವರ್ತಿಗಳಾದ ಗುರುರಾಜ್, ವೆಂಕಟೇಶನನ್ನು ಬಂಧಿಸಿದ ಪೊಲೀಸರು, ಅವರಿಂದ ನಕಲಿ ಫಾರಂ ಹಾಗೂ ನಕಲಿ ರಬ್ಬರ್ ಸ್ಡಾಂಪ್ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದೇವೆ ಎನ್ನುತ್ತಾರೆ ದಾವಣಗೆರೆ ಎಸ್ ಪಿ ಹನುಮಂತರಾಯ.
ಪಾಲಿಕೆ ಖಜಾನೆಗೆ ಕನ್ನ ಹಾಕಿದ ಖದೀಮರ ಹಿಂದೆ ಪಾಲಿಕೆ ಅಧಿಕಾರಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಸಮಗ್ರ ತನಿಖೆ ನಡೆಸಿ ಈವರೆಗೆ ಖಜಾನೆಗಾದ ನಷ್ಟ ಭರ್ತಿ ಕಾರ್ಯಕ್ಕೆ ಇನ್ನಷ್ಟು ಕಠಿಣಕ್ರಮಗಳು ಅಗತ್ಯವಾಗಿದೆ.
ಪಾಲಿಕೆಗೆ ಸಂದಾಯವಾಗಬೇಕಾದ ಕಂದಾಯ ಅಥವಾ ಶುಲ್ಕವನ್ನು ಪಾಲಿಕೆ ಖಾತೆ ಜಮಾ ಮಾಡುವ ಬದಲು ತಮ್ಮ ಜೇಬಿಗೆ ಇಳಿಸಿ ನಕಲಿ ಸಹಿಯುಳ್ಳ ರಸೀದಿಯನ್ನೂ ಕೊಡುತ್ತಾರೆ. ಸಾರ್ವಜನಿಕರ ಮೋಸ ಮಾಡುವ ಜತೆ ಪಾಲಿಕೆ ಖಜಾನೆಗೆ ಕನ್ನ ಹಾಕುತ್ತಾರೆ. ಇಂಥ ಗ್ಯಾಂಗ್ ಒಂದು ಸಿಕ್ಕಿ ಬಿದ್ದಿದ್ದು, ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾರೆ ಎಂದು ಪಾಲಿಕೆಯ ಮೇಯರ್ ಬಿ.ಜಿ. ಅಜಯಕುಮಾರ್ ಮಾಹಿತಿ ನೀಡುತ್ತಾರೆ. ನಕಲಿ ಖಾತಾ ಎಕ್ಸ್ಟ್ರಾಕ್ಟ್ ಹಾವಳಿ ಹಲವು ದಿನಗಳಿಂದ ಇದೆ. ಈಗ ಬಹಿರಂಗವಾಗಿದೆ.