Viral News: 6 ತಿಂಗಳಿಂದ ಕಾಗೆಯ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ ಈ ಗ್ರಾಮದ ಜನರು
Revengeful crow : ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಮನುಷ್ಯರ ಮೇಲೆ ಪದೇ ಪದೇ ದಾಳಿ ನಡೆಸಿ, ಬೆಚ್ಚಿ ಬೀಳುವಂತೆ ಮಾಡಿರುವ ಒಂಟಿ ಕಾಗೆ, ಕಳೆದ ಆರು ತಿಂಗಳಿನಿಂದ ಓಬಳಾಪುರ ಗ್ರಾಮದ ಜನರು ಹೈರಾಣಾಗಿ ಹೋಗುವಂತೆ ಮಾಡಿದೆ.
ಕೆಲವೊಂದು ಊರುಗಳಲ್ಲಿ (Village) ಮಂಗಗಳ (Monkey)ಕಾಟ ಅಧಿಕವಾಗಿದೆ, ಮಂಗಗಳಿಂದ ಆ ಗ್ರಾಮದ ಜನರು ಹೈರಾಣಾಗಿದ್ದಾರೆ ಅಂತ ಆಗಾಗ ನಾವು ಕೇಳಿರುತ್ತೇವೆ.. ಇನ್ನು ಕೆಲವು ಕಡೆ ಬೀದಿನಾಯಿಗಳು (Dogs) ಹಾಗೂ ಹಂದಿಗಳ (Pig) ಹಾವಳಿ ಹೆಚ್ಚಾಗಿ ಇರುತ್ತದೆ.. ಅಚಾನಕ್ಕಾಗಿ ಇದ್ದಕ್ಕಿದ್ದಂತೆಯೇ ದಾಳಿ ನಡೆಸುವ ಹಂದಿ ನಾಯಿ ಹಾಗೂ ಮಂಗಗಳ ಹಾವಳಿಗೆ ಬೇಸತ್ತ ಜನರು, ಅವುಗಳ ಕಾಟದಿಂದ (Torcher) ತಪ್ಪಿಸಿಕೊಳ್ಳಲು ನಾನಾ ಯೋಜನೆಗಳನ್ನು ಮಾಡುತ್ತಿರುತ್ತಾರೆ.. ಮತ್ತೆ ಕೆಲವು ಜನರು ಹಂದಿ ನಾಯಿ ಹಾಗೂ ಮಂಗಗಳ ಕಾಟದಿಂದ ಜನರು ಬೇಸತ್ತು ಅವುಗಳ ಸಮಸ್ಯೆಗೆ (Problem) ಮುಕ್ತಿ ಕೊಡುವಂತೆ ಎಷ್ಟೋ ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿರುತ್ತಾರೆ.. ಆದರೆ ಇಲ್ಲಿ ವಿಚಿತ್ರ ಎಂಬುವಂತೆ ಚಿತ್ರದುರ್ಗದ ಗ್ರಾಮವೊಂದರ ಜನರಿಗೆ ನಿರಂತರವಾಗಿ ಕಾಗೆಯೊಂದು ಕಾಟ ಕೊಡುತ್ತಿದೆ.. ಹೀಗಾಗಿ ಹೇಗಪ್ಪ ಈ ಕಾಗೆಯ ಕಾಟದಿಂದ ತಪ್ಪಿಸಿಕೊಳ್ಳುವುದು ಎಂದು ಚಿಂತಾಕ್ರಾಂತರಾಗಿದ್ದಾರೆ.
ಕಾಗೆ ಕಾಟಕ್ಕೆ ಹೈರಾಣದ ಜನರು...
ಸಾಮಾನ್ಯವಾಗಿ ನಾವು ನಡೆದುಕೊಂಡು ಹೋಗುವಾಗ ಅಥವಾ ಕುಳಿತಾಗ ನಮ್ಮ ತಲೆಯ ಮೇಲೆ ಅಚಾನಕ್ಕಾಗಿ ಇದಕ್ಕಿದಂತೆ ಕಾಗೆಯೊಂದು ಬಂದು ಕುಟುಕಿ ಹೋಗೋದು ಅನಿರೀಕ್ಷಿತ ಘಟನೆ.. ಆದರೆ ಹೀಗೆ ಮಾಡಿದ್ರೆ ಕಾಗೆಯಿಂದ ಶನಿದೋಷ ಉಂಟಾಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.. ಆದ್ರೆ ಚಿತ್ರದುರ್ಗದ ಈ ಗ್ರಾಮದಲ್ಲಿ ಮಾತ್ರ ನಿರಂತರವಾಗಿ ಒಂಟಿ ಕಾಗೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪ್ರತಿಯೊಬ್ಬರಿಗೂ ಕುಟುಕಿ ತನ್ನ ಹಾವಳಿ ಮೆರೆಯುತ್ತಿದೆ.
ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಮನುಷ್ಯರ ಮೇಲೆ ಪದೇ ಪದೇ ದಾಳಿ ನಡೆಸಿ, ಬೆಚ್ಚಿ ಬೀಳುವಂತೆ ಮಾಡಿರುವ ಒಂಟಿ ಕಾಗೆ, ಕಳೆದ ಆರು ತಿಂಗಳಿನಿಂದ ಓಬಳಾಪುರ ಗ್ರಾಮದ ಜನರು ಹೈರಾಣಾಗಿ ಹೋಗುವಂತೆ ಮಾಡಿದೆ.. ಇದಿಷ್ಟು ಸಾಲದು ಎಂಬಂತೆ ಈ ಒಂಟಿ ಕಾಗೆ ಮನೆಯ ಕಿಟಕಿ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಗೂ ಕೂಡ ಹಾನಿ ಮಾಡುತ್ತಾ ಬಂದಿದೆ.. ಗಾಜುಗಳು ಕಣ್ಣಿಗೆ ಬಿದ್ದರೆ ಸಾಕ್ ಆಗುವವರೆಗೂ ಆ ಕಾಗೆ ಕುಟುಕುತ್ತಲೇ ಇರುತ್ತದಂತೆ.. ಇನ್ನು ಗ್ರಾಮದ ಹಲವು ಜನರಿಗೆ ಕಾಗೆ ದಾಳಿಮಾಡಿ ಕುಟುಕಿ ಕುಟುಕಿ ಹಲವರ ತಲೆಯಲ್ಲಿ ಗಾಯಗಳು ಕೂಡ ಆಗಿದೆ ಎಂದು ಓಬಳಾಪುರ ಗ್ರಾಮದ ಜನರು ಅಳಲು ತೋಡಿಕೊಂಡಿದ್ದಾರೆ.
ಆಂಜನೇಯಸ್ವಾಮಿ ಶಾಪದಿಂದ ಕಾಟ ಕೊಡುತ್ತಿರುವ ಕಾಗೆ!
ಇನ್ನು ಓಬಳಾಪುರ ಗ್ರಾಮಸ್ಥರ ಪ್ರಕಾರ ಕಾಗೆ ಎಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿರುವುದಕ್ಕೆ ಆಂಜನೇಯಸ್ವಾಮಿಯ ಶಾಪವೇ ಕಾರಣವಂತೆ. ಕಳೆದ ಹಲವು ವರ್ಷದಿಂದ ಆಂಜನೇಯ ಸ್ವಾಮಿ ದೇಗುಲ ಪಾಳು ಬಿದ್ದಿದ್ದು, ಅದರ ಅಭಿವೃದ್ಧಿ ಕಾರ್ಯ ಇದುವರೆಗೂ ನಡೆದಿಲ್ಲವಂತೆ. ಕಳೆದ ಹತ್ತು ವರ್ಷದ ಹಿಂದೆ ಗ್ರಾಮಸ್ಥರು ದೇವಸ್ಥಾನದ ಅಭಿವೃದ್ಧಿ ಹಾಗೂ ಪ್ರಾಣಪ್ರತಿಷ್ಠಾಪನೆ ಗೆ ಕೈ ಹಾಕಿದ್ದರು ಅದನ್ನ ಪೂರ್ತಿ ಮಾಡದೇ ಅರ್ಧಕ್ಕೆ ಬಿಟ್ಟಿರುವುದಕ್ಕೆ ಆಂಜನೇಯಸ್ವಾಮಿ ಶಾಪ ಕೊಟ್ಟಿದ್ದಾರಂತೆ. ಹೀಗಾಗಿ ಶನಿ ಕಾಗೆಯ ರೂಪದಲ್ಲಿ ಬಂದು ಕಾಟ ಕೊಡುತ್ತಿದ್ದಾನೆ ಎಂದು ಓಬಳಾಪುರ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ದೇವಸ್ಥಾನ ಮರು ನಿರ್ಮಾಣವಾದರೆ ಕಾಗೆ ಕಾಟದಿಂದ ಮುಕ್ತಿ ಎಂಬ ನಂಬಿಕೆ
ಇನ್ನು ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಭರಮಸಾಗರ ಓಬಳಾಪುರ ಗ್ರಾಮಸ್ಥರಿಗೆ ಕಾಟ ಕೊಡುತ್ತಿರುವ ಕಾಗೆ ಯಿಂದ ಮುಕ್ತಿಪಡೆಯಲು, ಪೂರ್ಣವಾಗದೆ ಹಲವು ವರ್ಷಗಳಿಂದ ಪಾಳುಬಿದ್ದಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಮರು ನಿರ್ಮಾಣ ಮತ್ತು ಪ್ರಾಣಪ್ರತಿಷ್ಠಾಪನೆ ಮಾಡಿದರೆ ಗ್ರಾಮಕ್ಕೆ ಒಳ್ಳೆಯದಾಗಿ ಕಾಗೆಗೂ ಶಾಂತಿಯಾಗುತ್ತದೆ.. ಹೀಗಾಗಿ ಆದಷ್ಟು ಬೇಗ ದೇವಸ್ಥಾನ ಮರುನಿರ್ಮಾಣ ಮಾಡಿ ಪ್ರಾಣಪ್ರತಿಷ್ಠಾಪನೆ ಮಾಡಬೇಕು ಎಂದು ಗ್ರಾಮದ ಹಿರಿಯರು ಒತ್ತಾಯ ಮಾಡುತ್ತಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ