ತೆಲಂಗಾಣ/ಹೈದರಾಬಾದ್: ಕರ್ನಾಟಕದಲ್ಲಿ (Karnataka) ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಕಾಂಗ್ರೆಸ್ (Congress) ಅನ್ನು ಸೋಲಿಸಲು ತೆಲಂಗಾಣ (Telangana) ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (Chief Minister K Chandrashekar Rao) ಅವರು ಕರ್ನಾಟಕದ ಪ್ರಮುಖ ರಾಜಕಾರಣಿಯೊಬ್ಬರಿಗೆ ₹ 500 ಕೋಟಿ ಆಫರ್ ನೀಡಿದ್ದಾರೆ ಎಂದು ಟಿಪಿಸಿಸಿ ಅಧ್ಯಕ್ಷ ಎ ರೇವಂತ್ ರೆಡ್ಡಿ (Congress president A Revanth Reddy) ಆರೋಪಿಸಿದ್ದಾರೆ. ಕೆಸಿಆರ್ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ವಿರುದ್ಧದ ಭಾಷಣಗಳನ್ನು ಮಾಡುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಬಿಜೆಪಿಗೆ (BJP) ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
కేసీఆర్ కుట్ర అంతా కాంగ్రెస్ పైనే!
కేసీఆర్ బీజేపీ ఏజెంట్! మోడీ, అమిత్షా డైరెక్షన్లో ఓట్లు చీల్చే కథ నడుపుతున్న రింగ్ లీడర్ కేసీఆర్!
ఈ దుర్మార్గుడు, నీచ్ కమీనే, "కచరా" యొక్క కుట్రలు మీరే వినండి! తెలంగాణ ప్రజలార!
కేసీఆర్ తెలంగాణ ద్రోహి మాత్రమే కాదు, దేశ ప్రజల ద్రోహి కూడ! pic.twitter.com/NvaejlNbRK
— Telangana Congress (@INCTelangana) January 18, 2023
ಕರ್ನಾಟಕದ ರಾಜಕಾರಣಿಯೊಬ್ಬರಿಗೆ 500 ಕೋಟಿ ಆಫರ್
ಅಲ್ಲದೇ ಕೆಸಿಆರ್ ಅವರು ಕರ್ನಾಟಕದ ರಾಜಕಾರಣಿಯೊಬ್ಬರಿಗೆ 500 ಕೋಟಿ ರೂಪಾಯಿ ಆಫರ್ ಕೂಡ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರೊಬ್ಬರ ಜೊತೆಗೆ ತೆಲಂಗಾಣದಲ್ಲಿರುವ ಎರ್ರವೆಲ್ಲಿ ಫಾರ್ಮ್ಹೌಸ್ನಲ್ಲಿ ಮಾತುಕತೆ ನಡೆಸಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿಗಳಿದೆ. ಅವುಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
30 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕೆಸಿಆರ್ ಪ್ರಯತ್ನ
ಕಾಂಗ್ರೆಸ್ ಚುನಾವಣಾ ರಣತಂತ್ರ ರೂಪಿಸಿದ ಸುನೀಲ್ ಕಾನುಗೋಲು ಮತ್ತು ಅವರ ತಂಡ ಕಾಂಗ್ರೆಸ್ ವಾರ್ ರೂಂನಲ್ಲಿ ಸಿದ್ಧಪಡಿಸಿದ ಸಮೀಕ್ಷಾ ವರದಿಗಳು ಕೆಸಿಆರ್ ಕೈಗೆ ಸಿಕ್ಕಿದೆ. ಈ ಹಿನ್ನೆಲೆ ಕೆಸಿಆರ್ ನಿರ್ದೇಶನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಬಾರಿ ಕರ್ನಾಟಕದಲ್ಲಿ 130 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂಬುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಆದರೆ 130 ಕ್ಷೇತ್ರಗಳ ಪೈಕಿ 30 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕೆಸಿಆರ್ ಪ್ರಯತ್ನಿಸುತ್ತಿದ್ದಾರೆ.
ಯುಪಿ ಚುನಾವಣೆ ವೇಳೆ ಕೆಸಿಆರ್ ಏಕೆ ಬೆಂಬಲ ನೀಡಲಿಲ್ಲ?
ಇದೇ ವೇಳೆ ಇತ್ತೀಚಿಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ಅವರು ಏಕೆ ಸ್ಪರ್ಧಿಸಲಿಲ್ಲ ಎಂದು ರೇವಂತ್ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಥವಾ ಎಸ್ಪಿ ನಾಯಕ ಅಖಿಲೇಶ್ ಯಾದವ್ಗೆ ಕೆಸಿಆರ್ ಏಕೆ ಬೆಂಬಲವನ್ನು ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ
ದೇಶದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. 245 ಟಿಎಂಸಿಎಫ್ ಸಾಮರ್ಥ್ಯದ ನಾಗಾರ್ಜುನ ಸಾಗರ ಅಣೆಕಟ್ಟು ಮತ್ತು ಇತರ ಎಲ್ಲ ಅಣೆಕಟ್ಟುಗಳನ್ನು ನಿರ್ಮಿಸಿದ್ದು, ದೇಶದ 1.45 ಲಕ್ಷ ಹಳ್ಳಿಗಳಿಗೆ ವಿದ್ಯುತ್ ಮತ್ತು 1 ಲಕ್ಷ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ವೈಜಾಗ್ ಸ್ಟೀಲ್ ಪ್ಲಾಂಟ್ ಅನ್ನು ನಿರ್ಮಿಸಿದೆ, ಎಲ್ಐಸಿ ಮತ್ತು ಏರ್ ಇಂಡಿಯಾವನ್ನು ಸ್ಥಾಪಿಸಿದೆ ಮತ್ತು ದೇಶದಲ್ಲಿ ಹೆಚ್ಚಿನ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಬಿಆರ್ಎಸ್ ಸಾರ್ವಜನಿಕ ಸಭೆಗೆ ಹೆಚ್ಡಿಕೆ ಗೈರು
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಕೆಸಿಆರ್ ಅವರ ಈ ದುರುದ್ದೇಶವನ್ನು ಅರಿತ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಖಮ್ಮಂನಲ್ಲಿ ನಡೆದ ಬಿಆರ್ಎಸ್ ಸಾರ್ವಜನಿಕ ಸಭೆಗೆ ಗೈರಾಗಿದ್ದರು. ಇಷ್ಟರಲ್ಲಿಯೇ ಕೆಸಿಆರ್ ಅವರ ನಿಜಸ್ವಭಾವ ಎಲ್ಲ ಪಕ್ಷಗಳಿಗೂ ಗೊತ್ತಾಗಲಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: HDK with KCR: ತೆಲಂಗಾಣ ಸಿಎಂ ಜೊತೆ ಕೈ ಜೋಡಿಸ್ತಾರಾ ಕರ್ನಾಟಕ ಮಾಜಿ ಸಿಎಂ? ಎಚ್ಡಿಕೆ-ಕೆಸಿಆರ್ 3 ಗಂಟೆ ಚರ್ಚಿಸಿದ್ದೇನು?
ಗೆಲ್ಲಲು ಹಣವಿಲ್ಲದಿದ್ರೆ ಸಲಾದು ಜನರ ವಿಶ್ವಾಸವೂ ಬೇಕು
ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ತೆಲಂಗಾಣಕ್ಕೂ, ಕಾಂಗ್ರೆಸ್ಗೂ ಏನು ಸಂಬಂಧ? ಕೇವಲ ಹಣದಲ್ಲಿ ಚುನಾವಣೆ ನಡೆಸುವುದಕ್ಕೆ ಸಾಧ್ಯವಿಲ್ಲ. ಬರೀ ಹಣವಿದ್ದರೆ ಸಾಲುವುದಿಲ್ಲ, ಜೊತೆಗೆ ಜನರ ವಿಶ್ವಾಸ ಕೂಡ ತುಂಬಾ ಮುಖ್ಯ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ