ನಾನು ಟಿವಿ ನೋಡಿ ನಾಲ್ಕೈದು ದಿನ ಆಯ್ತು, ರಾಜ್ಯದ ಬೆಳವಣಿಗೆ ಬಗ್ಗೆ ನನಗೇನು ಗೊತ್ತಿಲ್ಲ; ಸಚಿವ ರೇವಣ್ಣ

ಮೈಸೂರು ಕ್ಷೇತ್ರದ ನಾಯಕರಾದ ಸಿದ್ದರಾಮಯ್ಯ, ವಿಶ್ವನಾಥ್​ ಹಾಗೂ ಜಿಟಿ ದೇವೇಗೌಡ ನಡುವೆ ಮೂಡಿರುವ ಭಿನ್ನಮತ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಮೈತ್ರಿ ನಾಯಕರ ನಡುವೆ ಮೂಡಿರುವ ಅಸಮಾಧಾನಗಳು ಬಹಿರಂಗಗೊಂಡಿದೆ. ಆದರೆ, ಈ ವಿವಾದಗಳಿಂದ ಸಿಎಂ ಸೇರಿದಂತೆ ಇತರೆ ಜೆಡಿಎಸ್​ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ.

ರೇವಣ್ಣ

ರೇವಣ್ಣ

  • News18
  • Last Updated :
  • Share this:
ಬೆಂಗಳೂರು (ಮೇ.14): ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​, ಸಿದ್ದರಾಮಯ್ಯ ಸರ್ಕಾರ ಟೀಕಿಸುವ ಮೂಲಕ ಮೈತ್ರಿ ನಾಯಕರ ಒಳಬೇಗುದಿ ಜಗಜಾಹೀರು ಆಗಿದೆ. ಮೈಸೂರು ಕ್ಷೇತ್ರದ ನಾಯಕರಾದ ಸಿದ್ದರಾಮಯ್ಯ, ಜಿಟಿ ದೇವೇಗೌಡ, ವಿಶ್ವನಾಥ್​ ಮುನಿಸು ಮತ್ತೊಮ್ಮೆ ಬಹಿರಂಗಗೊಳ್ಳುವ ಮೂಲಕ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.  ಆದರೆ, ಈ ವಿವಾದಗಳಿಂದ ದೊಡ್ಡ ಗೌಡರ ಕುಟುಂಬ ಅಂತರ ಕಾಯ್ದುಗೊಳ್ಳುವ ಮೂಲಕ ಮೌನಕ್ಕೆ ಶರಣಾಗಿದೆ.

ಸಿದ್ದರಾಮಯ್ಯ, ವಿಶ್ವನಾಥ್​ ನಡುವಿನ ವಾಕ್ಸಾಮರ ಕುರಿತು ಪ್ರತಿಕ್ರಿಯಿಸಿರುವ ಸಚಿವ ರೇವಣ್ಣ, 'ನಾನು ಟಿವಿ ನೋಡಿ ನಾಲ್ಕೈದು ದಿನ ಕಳೆದಿದೆ. ಯಾರು ಏನು ಹೇಳಿದ್ದರು, ಹೇಳುತ್ತಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ' ಎನ್ನುವ ಮೂಲಕ ಜಾರಿಕೊಳ್ಳುವ ಯತ್ನ ಮಾಡಿದ್ದಾರೆ.

'ಪಕ್ಷದಲ್ಲಿ ಹಿರಿಯರು ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರು ಇದ್ದಾರೆ. ಏನಾದರೂ ಅವರು ನೋಡಿಕೊಳ್ಳುತ್ತಾರೆ. ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದೇನೆ. ನನಗೆ ಲೋಕೋಪಯೋಗಿ ಚಿಕ್ಕ ಖಾತೆ ಕೊಟ್ಟಿದ್ದು, ಅದನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ'  ಎಂದಿದ್ದಾರೆ.

ಮೂಲಗಳ ಪ್ರಕಾರ, ಮೈತ್ರಿ ನಾಯಕರ ನಡುವೆ ಮೂಡಿರುವ ಈ ಕಿಡಿ ಕುರಿತು ಯಾವುದೇ ನಾಯಕರು ಪ್ರತಿಕ್ರಿಯಿಸಿದಂತೆ ಸಿಎಂ ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್​ನ ಯಾವುದೇ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗಿಲ್ಲ.

ಯಡಿಯೂರಪ್ಪ ಜ್ಯೋತಿಷ್ಯ ಸುಳ್ಳಾಗಲಿದೆ: 

ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಅವರ ಜ್ಯೋತಿಷ್ಯ ಸುಳ್ಳಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಯಡಿಯೂರಪ್ಪ ಸಂಖ್ಯಾಶಾಸ್ತ್ರ ಹೇಳ್ತಾರೇನೋ. ಹಾಗಾದರೆ, ನಾನೂ ಫೋನ್‌ ಮಾಡಿ ಸ್ವಲ್ಪ ‌ಶಾಸ್ತ್ರ ಕೇಳ್ಕೋತೀನಿ. ಯಡಿಯೂರಪ್ಪ ನಮಗೆಲ್ಲ ಬಾಂಬೆ ಡಬ್ಬಾ ತೋರಿಸುತ್ತಿದ್ದಾರೆ. ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಅಂತಿದ್ದಾರೆ. ಆ ರೀತಿ ಏನು ಆಗುವುದಿಲ್ಲ. ಬಿಜೆಪಿಯವರು ಬಿಡುವ ಬಾಂಬ್ ಎಲ್ಲಾ ಠುಸ್ ಆಗುತ್ತದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ‌ ಅಧಿಕಾರಕ್ಕೆ ಬರಲ್ಲ ಎಂದರು.

ಇದನ್ನು ಓದಿ: ಒಂದೇ ಹೋಟೆಲ್​​ನಲ್ಲಿದ್ದರೂ ಭೇಟಿಯಾಗದ ಸಿದ್ದರಾಮಯ್ಯ, ಎಚ್​ಡಿಕೆ; ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ಜೆಡಿಎಸ್​ ನಾಯಕರು

ಜೆಡಿಎಸ್​  ನಾಯಕರ ಮನೆ ಮೇಲೆ ಐಟಿ ಇಲಾಖೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದೆ. ಜೆಡಿಎಸ್  ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡಿಸುತ್ತಿದ್ದಾರೆ. ತರಕಾರಿ ಮಾರುವವರು, ಪೂಜಾರಿ ಎಲ್ಲರ ಮನೆಯಲ್ಲೂ ದಾಳಿ ನಡೆಸಿದ್ದಾರೆ. ಈ ದಾಳಿಗಳಿಂದ ಅವರಿಗೆ ಏನು ಸಿಗಲಿಲ್ಲ. ಅವರಿಗೆ ಕೇವಲ ಜೆಡಿಎಸ್ ನವರೇನಾ ಅವರಿಗೆ ಕಾಣಿಸುತ್ತಿದ್ದಾರೆ.  ಯಾಕೆ ಬಿಜೆಪಿ ಯವರ ಮನೆಯಲ್ಲಿ ಹಣ ಇಲ್ವಾ,ಅವರ ಮನೆ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published: