ರಾಮ ಮಂದಿರದ ಭಜನೆ ಬಿಟ್ಟು ಬಿಜೆಪಿ ಅವರಿಗೆ ಏನು ಗೊತ್ತು; ರೇವಣ್ಣ ಪ್ರಶ್ನೆ

news18
Updated:September 5, 2018, 4:22 PM IST
ರಾಮ ಮಂದಿರದ ಭಜನೆ ಬಿಟ್ಟು ಬಿಜೆಪಿ ಅವರಿಗೆ ಏನು ಗೊತ್ತು; ರೇವಣ್ಣ ಪ್ರಶ್ನೆ
news18
Updated: September 5, 2018, 4:22 PM IST
ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ (ಸೆ.5): ರಾಮಮಂದಿರ ಕಟ್ಟುವುದಾಗಿ ಅಧಿಕಾರಕ್ಕೆ ಬಂದ  ಬಿಜೆಪಿಗೆ ರಾಮಮಂದಿರ ಭಜನೆ ಬಿಟ್ಟರೆ ಬೇರೆ ಏನು ಇಲ್ಲ. ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಕೇವಲ  ಆರೋಪಗಳನ್ನು ಮಾಡುತ್ತಿರುವುದು ಅವರ ಕೆಲಸವಾಗಿದೆ ಎಂದು ಸಚಿವ ರೇವಣ್ಣ ವಾಗ್ದಾಳಿ ನಡೆಸಿದರು.

ಕೊಡಗಿನ ಜನ 25 ವರ್ಷಗಳ ಕಾಲ ಬಿಜೆಪಿಗೆ ಮತ ಹಾಕಿದರು. ಅದೇ ಕೊಡಗು ಪ್ರವಾಹದಿಂದ ತತ್ತರಿಸಿದಾಗ ಒಂದು ಪೈಸೆಯನ್ನು ಬಿಡುಗಡೆ ಮಾಡಿಸಿಲ್ಲ ಅವರಿಗೆ ನಮ್ಮ ಬಗ್ಗೆ ಆರೋಪ ಮಾಡುವ ಯಾವುದೇ  ನೈತಿಕತೆಯೂ ಇಲ್ಲ. . ಬೆಂಗಳೂರಿನಿಂದ ಹಣವನ್ನು ಎತ್ತಿ ಕೊಡಗಿಗೆ ನೀಡಿದರು ಎಂದು ಆರೋಪ ಮಾಡುವ ಬಿಜೆಪಿ ನಾಯಕರು ಅಲ್ಲಿನ ಜನಕ್ಕೆ ಏನು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಮಾಡುವ ಏನು ಮಾಡುತ್ತಾರೆ., ಎಲ್ಲಿ ಹೋಗುತ್ತಾರೆ ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿಲ್ಲ. ಅದನ್ನು ಬಿಟ್ಟು ರೇವಣ್ಣ ಎಲ್ಲಿ ಹೋದರು. ದೇವೇಗೌಡರು ಏನು ಮಾಡಿದರು ಎಂದು ತೋರಿಸುವುದರಲ್ಲಿಯೇ ಮಾಧ್ಯಮಗಳು ಮಗ್ನವಾಗಿರುತ್ತವೆ. ನಮ್ಮ ಬಗ್ಗೆ ಪರ-ವಿರೋಧವಾಗಿ ಮಾಧ್ಯಮಗಳು ತೋರಿಸಿದರೂ ಅದರ ಲಾಭಾ ನಮಗೆ. ಜನ ರೇವಣ್ಣ ಬಳಗ್ಗೆ ಏನು ಮಾಡಿದರೂ ಸಂಜೆ ಏನು ಮಾಡಿದರೂ ಎಂದು ನೋಡುತ್ತಾರೆ. ಇದರಿಂದ ನಮಗೆ ಉಪಯೋಗವಾಗಿದೆ ಎಂದು ಮಾಧ್ಯಮದ ವಿರುದ್ಧ ಹರಿಹಾಯ್ದರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ