ಹೊಸಾ ಶಿಕ್ಷಣ ನೀತಿ... ಕೇಂದ್ರ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ. ಶಿಕ್ಷಣದ ಜೊತೆ ಜೊತೆಯಲ್ಲೇ ಉದ್ಯೋಗವಕಾಶವನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾದ ನೂತನ ಶಿಕ್ಷಣ ನೀತಿ. ಯಾವ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು, ಯಾವ ತರಗತಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವ ಉದ್ಯೋಗಕ್ಕೆ ಯಾವ ರೀತಿಯ ಶಿಕ್ಷಣವನ್ನು ನೀಡಬೇಕು ಅನ್ನೋದೆ ನೂತನ ಶಿಕ್ಷಣ ನೀತಿಯಲ್ಲಿರೋ ನಿಜವಾದ ಸಾರ.
ಮಕ್ಕಳ ಬೌಧಿಕಮಟ್ಟವನ್ನು ಹೆಚ್ಚಿಸುವ ಜೊತೆಗೆ ಔದ್ಯೋಗಿಕ ಶಿಕ್ಷಣವನ್ನು ನೀಡಲು ಶಿಕ್ಷಕರಿಗೂ ಈ ನೂತನ ಶಿಕ್ಷಣ ನೀತಿ ಸಹಕಾರಿಯಾಗಿದೆ. ಕೊರೋನಾ ಕಷ್ಟಕಾಲದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವುದು ಕಷ್ಟಸಾಧ್ಯ. ಈ ಸಂಕಷ್ಟದ ಕಾಲದಲ್ಲಿ ದೇಶದ ಅತೀ ದೊಡ್ಡ ನ್ಯೂಸ್ ನೆಟ್ವರ್ಕ್ ಸುದ್ದಿಸಂಸ್ಥೆ ನೆಟ್ವರ್ಕ್ 18 ವಿನೂತನ ಪ್ರಯತ್ನವೊಂದಕ್ಕೆ ಮುನ್ನುಡಿಬರೆದಿದೆ. ನ್ಯೂಸ್ 18 ಕನ್ನಡದಲ್ಲಿ ನೂತನ ಶಿಕ್ಷಣ ನೀತಿಯ ಬಗ್ಗೆಗಿನ ಸಂಪೂರ್ಣ ಜ್ಞಾನ ಸೇರಿದಂತೆ ಔದ್ಯೋಗಿಕ ಶಿಕ್ಷಣ ಎಂದರೇನು? ಅದರ ಉಪಯೋಗ ಹಾಗೂ ಪೋಷಕರು ತೆಗೆದುಕೊಳ್ಳಬೇಕಾದ ನಿರ್ಧಾರಗಳು ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.
ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥನಾರಾಯಣ, ಪ್ರಾಥಮಿಕ-ಪ್ರೌಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕ್ರೀಡಾ ಸಚಿವ ಸಿ.ಟಿ ರವಿ ಸೇರಿದಂತೆ ಶಿಕ್ಷಣ ಕ್ಷೇತ್ರದ ದಿಗ್ಗಜರುಗಳು ನ್ಯೂಸ್18ಕನ್ನಡದ ಒಂದೇ ವೇದಿಕೆಯಲ್ಲಿ ಶಿಕ್ಷಣದ ಬಗೆಗಿನ ನಿಮ್ಮೆಲ್ಲಾ ಅನುಮಾನಗಳನ್ನು ಪರಿಹರಿಸಲಿದ್ದಾರೆ.
ಇದೇ 28-29-30ನೇ ತಾರೀಖಿನಂದು ಸಂಜೆ 4ರಿಂದ 5 ಗಂಟೆವೆರೆಗೆ ನೇರಪ್ರಸಾರದಲ್ಲಿ ಶಿಕ್ಷಣದ ಎಲ್ಲಾ ಮಜಲುಗಳ ಬಗ್ಗೆ ಚರ್ಚಿಸಲಿದ್ದಾರೆ. ನೀವು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳಬಹುದು.
28 ಆಗಸ್ಟ್ 2020 |
29 ಆಗಸ್ಟ್ 2020 |
30 ಆಗಸ್ಟ್ 2020 |
ಎಸ್. ಸುರೇಶ್ ಕುಮಾರ್, ಪ್ರಾಥಮಿಕ-ಪ್ರೌಡ ಶಿಕ್ಷಣ ಸಚಿವ |
ಡಾ. ಸಿ. ಎನ್. ಅಶ್ವಥನಾರಾಯಣ, ಉನ್ನತ ಶಿಕ್ಷಣ ಸಚಿವ |
ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ |
ಶೀತಲ್, ಕೇಂಬ್ರಿಡ್ಜ್ ಸಂಸ್ಥೆ ನಿರ್ದೇಶಕಿ |
ಡಾ. ಪಿ. ಶ್ಯಾಮರಾಜು, ರೇವಾ ಯುನಿವರ್ಸಿಟಿ ಕುಲಪತಿ |
ಸಿ. ಟಿ. ರವಿ, ಕ್ರೀಡಾ ಸಚಿವ |
ನಾಗೇಂದ್ರಪ್ಪ, ಸಲಹೆಗಾರ |
ನಾಗಸಿಂಹ, ಸಲಹೆಗಾರ |
ವಿದ್ಯಾ ಶಂಕರ್ ವಿ. ಸಿ., ಕರ್ನಾಟಕ ಮುಕ್ತ ವಿ. ವಿ. ಮೈಸೂರು |
ಜಗದೀಶ್ ಶೇಖರ್ ನಾಯ್ಕ್, ಕೌಶಲ್ಯ ಆಧಾರಿತ ತಜ್ಞ |
ಹರೀಶ್ ಕೆ., ಕೌಶಲ್ಯ ಆಧಾರಿತ ತಜ್ಞ |
ಪ್ರಕೃತಿ ಬನವಾಸಿ, ಆನ್ಲೈನ್ ಶಿಕ್ಷಣ ತಜ್ಞೆ |
|
ಪ್ರೋ. ಟಿ. ವಿ. ಕಟ್ಟಿ ಮಣಿ, ಯುಜಿಸಿ ರಾಜ್ಯ ಸಹಾಯಕ ಅಧಿಕಾರಿ |
ಪ್ರೋ. ಬ್ರಹ್ಮಾನಂದ ಎಸ್. ಹೆಚ್., ಗೀತಾ ಯುನಿವರ್ಸಿಟಿ |
|
ಡಾ. ಆನಂದ್ ಪಾಂಡುರಂಗಿ, ಮನಶ್ಶಾಸ್ತ್ರಜ್ಞ |
ಡಾ. ಎಸ್. ವಿ. ಸೋಮಣ್ಣ, ಎಕ್ಸೆಲ್ ಅಕಾಡೆಮಿಕ್ಸ್ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ