• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Reva College Student Murder Case: ಚಾಕು ಇರಿದು ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದವ ಅರೆಸ್ಟ್

Reva College Student Murder Case: ಚಾಕು ಇರಿದು ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದವ ಅರೆಸ್ಟ್

ಕೊಲೆಯಾದ ಭಾಸ್ಕರ್ ಜೆಟ್ಟಿ

ಕೊಲೆಯಾದ ಭಾಸ್ಕರ್ ಜೆಟ್ಟಿ

Student Murder: ಭಾಸ್ಕರ್ ಜೆಟ್ಟಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಕುಸಿದು ಬೀಳುತ್ತಿದ್ದಂತೆ ಕಾರ್​ನಲ್ಲಿ ಪರಾರಿಯಾಗಿ ಮೂಡಿಗೆರೆಯ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದನು.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ನಗರದ ಬಾಗಲೂರು ಪೊಲೀಸ್ (Bagaluru Police) ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ (Reva College) ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅನಿಲ್ ಎಂಬಾತನನ್ನು ಬಂಧಿಸುವಲ್ಲಿ (Accused Arrestes) ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗ ಎಂಬಾತನನ್ನು ಬಂಧಿಸಲಾಗಿದೆ. ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದ (Bcom Students) ಆರೋಪಿ ಅನಿಲ್ ಚಾಕು ಇರಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ (Mudigere Forest Area) ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದರು. ಗಲಾಟೆಗೂ ತನಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಜೋಶ್​ನಲ್ಲಿ ಭಾಸ್ಕರ್ ಜೆಟ್ಟಿ ಎದೆಗೆ ಚಾಕುವಿನಿಂದ ಇರಿದಿದ್ದನು.


ಶುಕ್ರವಾರ (ಏಪ್ರಿಲ್ 28, 2023) ರೇವಾ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (College Fest) ಆಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಗುಂಪುಗಳ ನಡೆದ ಗಲಾಟೆ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ ಎಂಬಾತನ ಕೊಲೆಯಲ್ಲಿ ಅಂತ್ಯವಾಗಿತ್ತು.


ಗಲಾಟೆ ತನಗೆ ಸಂಬಂಧ ಇಲ್ಲದಿದ್ರೂ ಏಕಾಏಕಿ ನುಗ್ಗಿ ಬಂದಿದ್ದ ಅನಿಲ್ ಡ್ರ್ಯಾಗರ್​​​ನಿಂದ ಎದೆಗೆ ಇರಿದಿದ್ದನು. ಭಾಸ್ಕರ್ ಜೆಟ್ಟಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಕುಸಿದು ಬೀಳುತ್ತಿದ್ದಂತೆ ಕಾರ್​ನಲ್ಲಿ ಪರಾರಿಯಾಗಿ ಮೂಡಿಗೆರೆಯ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದನು.


ಏನಿದು ಗಲಾಟೆ?


ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದಾನೆ. ಇದೇ ವಿಷಯವಾಗಿ ಭರತೇಶ್ ಮತ್ತು ಶರತ್ ನಡುವೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೊಲೆಯಾದ ಭಾಸ್ಕರ್ ಗೆಳೆಯ ಶರತ್ ಜೊತೆಯಲ್ಲಿದ್ದನು.




ಇದನ್ನೂ ಓದಿ:  Cash Seize: ದಾಖಲೆ ಇಲ್ಲದೆ ಸಾಗಾಟ ಮಾಡ್ತಿದ್ದ ಐದು ಕೋಟಿ ರೂಪಾಯಿ ನಗದು ಜಪ್ತಿ!


ಶರತ್ ಹಾಗೂ ಭರತೇಶ್ ಇಬ್ಬರು ತಮ್ಮ ಗೆಳೆಯರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಅನಿಲ್ ಎಂಬಾತ ಭಾಸ್ಕರ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕಾಲೇಜ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಚಾಕು ಮತ್ತು ರಾಡ್ ತಂದಿರುವ ಮಾಹಿತಿ ಲಭ್ಯವಾಗಿದೆ.

top videos
    First published: