ಬೆಂಗಳೂರು: ರಾಜಧಾನಿ ರೇವಾ ಕಾಲೇಜಿನಲ್ಲಿ (Reva College) ಶುಕ್ರವಾರ ವಿದ್ಯಾರ್ಥಿಯೋರ್ವನ (Student) ಕೊಲೆ ನಡೆದಿತ್ತು. ಇದೀಗ ಬಾಗಲೂರು ಠಾಣೆಯ ಪೊಲೀಸರು (Bagaluru Police) ಕೊಲೆಗೆ ಸಂಬಂಧಿಸಿದಂತೆ ಓರ್ವವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಪ್ರಮುಖ ಆರೋಪಿ ಅನಿಲ್ ಎಂಬಾತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಭರತೇಶ್ ಬಂಧಿತ ಆರೋಪಿ. ಶುಕ್ರವಾರ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (College Fest) ಆಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಗುಂಪುಗಳ ನಡೆದ ಗಲಾಟೆ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ ಎಂಬಾತನ ಕೊಲೆಯಲ್ಲಿ ಅಂತ್ಯವಾಗಿತ್ತು.
ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದಾನೆ. ಇದೇ ವಿಷಯವಾಗಿ ಭರತೇಶ್ ಮತ್ತು ಶರತ್ ನಡುವೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೊಲೆಯಾದ ಭಾಸ್ಕರ್ ಗೆಳೆಯ ಶರತ್ ಜೊತೆಯಲ್ಲಿದ್ದನು.
ಶರತ್ ಹಾಗೂ ಭರತೇಶ್ ಇಬ್ಬರು ತಮ್ಮ ಗೆಳೆಯರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಅನಿಲ್ ಎಂಬಾತ ಭಾಸ್ಕರ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕಾಲೇಜ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಚಾಕು ಮತ್ತು ರಾಡ್ ತಂದಿರುವ ಮಾಹಿತಿ ಲಭ್ಯವಾಗಿದೆ.
ತಂದೆಯನ್ನ ಕೊಂದ ಮಗ!
ಮದ್ಯಪಾನ ಮಾಡಲು ಹಣ (Money) ಕೊಡಲು ಒಪ್ಪದ ತಂದೆಯನ್ನ (Father) ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluu) ಮಾರೇನಹಳ್ಳಿ ಪಿಎಸ್ ಲೇಔಟ್ನಲ್ಲಿ ನಡೆದಿದೆ. ಬಸವರಾಜು (60) ಕೊಲೆಯಾದ ತಂದೆಯಾದ್ರೆ ನೀಲಾಧರ್ ತಂದೆಯನ್ನ ಕೊಂದ ಆರೋಪಿ.
ಇದನ್ನೂ ಓದಿ: Cash Seize: ದಾಖಲೆ ಇಲ್ಲದೆ ಸಾಗಾಟ ಮಾಡ್ತಿದ್ದ ಐದು ಕೋಟಿ ರೂಪಾಯಿ ನಗದು ಜಪ್ತಿ!
ಘಟನೆ ನಡೆದ 15 ದಿನಗಳ ನಂತರ ಬೆಳಕಿಗೆ ಬಂದಿದೆ. ಕೊಲೆಯಾದ ಬಸವರಾಜು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ಕೊಳೆತು ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಾಗ ಪೊಲೀಸರು (Police Investigation) ಆರಂಭದಲ್ಲಿ ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಮಗನೇ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ