400 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಖಾಸಗಿ ಎಂದು ದಾಖಲೆ ತಿರುಚಿ ಹಂಚಿಕೆ ಮಾಡಿದ್ರಾ ಡೆಮಾಲಿಷನ್​ ಖ್ಯಾತಿಯ ನಿವೃತ್ತ ಜಿಲ್ಲಾಧಿಕಾರಿ?

ದೂರಿನ ಬಗ್ಗೆ ನ್ಯೂಸ್ 18 ಕನ್ನಡ ಶಂಕರ್ ಅವರನ್ನು ಮಾತನಾಡಿಸಿದಾಗ, ಇದು ನಿರಾಧಾರವಾದ ಆರೋಪ. ಎಲ್ಲವೂ ನಿಯಮಗಳ ಚೌಕಟ್ಟಿನಲ್ಲೇ ನಡೆದಿದೆ. ಮೌದ್ಗಿಲ್ ಆರೋಪ ಪೂರ್ವಾಗ್ರಹಪೀಡಿತವಾದಂತಿದೆ. ಕಾನೂನು ಬಿಟ್ಟು ಕೆಲಸ ಮಾಡಿದ್ದು ಸಾಬೀತಾದರೆ  ಯಾವ್ ಶಿಕ್ಷೆ ಎದುರಿಸಲು ಸಿದ್ಧ ಎಂದು ಶಂಕರ್​ ಪ್ರತಿಕ್ರಿಯೆ ನೀಡಿದ್ದಾರೆ.

HR Ramesh | news18-kannada
Updated:September 13, 2019, 7:45 AM IST
400 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಖಾಸಗಿ ಎಂದು ದಾಖಲೆ ತಿರುಚಿ ಹಂಚಿಕೆ ಮಾಡಿದ್ರಾ ಡೆಮಾಲಿಷನ್​ ಖ್ಯಾತಿಯ ನಿವೃತ್ತ ಜಿಲ್ಲಾಧಿಕಾರಿ?
ವಿ.ಶಂಕರ್ ವಿರುದ್ಧ ಮನೀಶ್ ಮೌದ್ಗಿಲ್​ ನೀಡಿರುವ ದೂರಿನ ಪ್ರತಿ.
  • Share this:
ಬೆಂಗಳೂರು: ಡೆಮಾಲಿಷನ್ ಜಿಲ್ಲಾಧಿಕಾರಿ ಎಂದೇ ಹೆಸರಾಗಿದ್ದ ನಿವೃತ್ತ ಜಿಲ್ಲಾಧಿಕಾರಿ ವಿ.ಶಂಕರ್ ಅವರ ವಿರುದ್ಧ ಅತ್ಯಂತ ಗಂಭೀರ ಆರೋಪ ಕೇಳಿಬಂದಿದೆ. ಅದು ಅಂತಿಂಥ ಆರೋಪವಲ್ಲ, ಸುಮಾರು 400 ಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನೇ ಖಾಸಗಿ ಭೂಮಿ ಎಂಬ ದಾಖಲೆ ಸೃಷ್ಟಿಸಿ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ.

ನಿವೃತ್ತ ಜಿಲ್ಲಾಧಿಕಾರಿ ಶಂಕರ್ ವಿರುದ್ದ ಇಂತಹದ್ದೊಂದು ಗಂಭೀರ ಆರೋಪ ಮಾಡಿ ಎಸಿಬಿಗೆ ದೂರನ್ನು ನೀಡಿರುವುದು ಕರ್ನಾಟಕ ಕಂಡ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರಾದ ಹಾಲಿ ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಷ್ ಮೌದ್ಗಿಲ್.

ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಬುಕ್ಕಸಾಗರದ ಸರ್ವೆ ನಂಬರ್ 183ರ ವ್ಯಾಪ್ತಿಯಲ್ಲಿ ಭೂಮಿ ಹಂಚಿಕೆ ಮಾಡುವ ವೇಳೆ ಖಾಸಗಿ ವ್ಯಕ್ತಿಯೊಬ್ಬರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ 2017ರಲ್ಲಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರಂತೆ. ಅಂದರೆ ಈ ವ್ಯಾಪ್ತಿಯ 19.10 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿ ಎಂದು ಸಾಬೀತು ಮಾಡುವುದಕ್ಕೆ ಅಗತ್ಯ ಆದೇಶವನ್ನು ಶಂಕರ್ ಹೊರಡಿಸಿದ್ದರು. ಆ ವೇಳೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಹರೀಶ್ ನಾಯ್ಕ ಹಾಗೂ ಆನೇಕಲ್ ತಹಸೀಲ್ದಾರ್ ಮಹಾದೇವಯ್ಯ ಅವರು ಶಂಕರ್​ ಅವರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸಿದ್ದರು ಎಂದು ಮುನೀಷ್ ಮೌದ್ಗಿಲ್​ ಎಸಿಬಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಖಾಸಗಿ ಎಂದು ಹಂಚಿಕೆ ಮಾಡಿರುವ ಭೂಮಿ ಸರ್ಕಾರಿ ಜಾಗ ಎನ್ನುವುದಕ್ಕೆ ಎಲ್ಲಾ ದಾಖಲೆಗಳಿವೆ. ಇಷ್ಟಾದರೂ ಬೆಂಗಳೂರು ಡಿಸಿಯಾಗಿದ್ದಾಗ ಶಂಕರ್ ತಮ್ಮ ಅಧಿಕಾರ ದುರ್ಬಳಕೆ ಮಾಡುಕೊಂಡು ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿ ಎಂದು ದಾಖಲೆ ತಿರುಚಿ ಖಾಸಗಿಯವರಿಗೆ ಹಂಚಿಕೆ ಮಾಡಿದ್ದಾರಂತೆ. ಗ್ರಾಮಸ್ಥರ ದೂರನ್ನು ಪರಿಶೀಲಿಸಿ ಪ್ರಕರಣವನ್ನು ಅವಲೋಕಿಸಿದಾಗ ಅದು ಸರ್ಕಾರಿ ಭೂಮಿ ಎಂಬುದು ದೃಢಪಟ್ಟಿದೆ ಎನ್ನುವುದು ಮುನೀಷ್ ಅವರ ಆರೋಪ.

ವಿ.ಶಂಕರ್ ವಿರುದ್ಧ ಮನೀಶ್ ಮೌದ್ಗಿಲ್​ ನೀಡಿರುವ ದೂರಿನ ಪ್ರತಿ.


ವಿ.ಶಂಕರ್ ವಿರುದ್ಧ ಮನೀಶ್ ಮೌದ್ಗಿಲ್​ ನೀಡಿರುವ ದೂರಿನ ಪ್ರತಿ.


 
ವಿ.ಶಂಕರ್ ವಿರುದ್ಧ ಮನೀಶ್ ಮೌದ್ಗಿಲ್​ ನೀಡಿರುವ ದೂರಿನ ಪ್ರತಿ.


ಐಎಎಸ್​ ಅಧಿಕಾರಿ ಮುನೀಷ್​ ಮೌದ್ಗಿಲ್​


ಮುನೀಷ್​ ಮೌದ್ಗಿಲ್​ ಅವರು ದಾಖಲೆಗಳ ಸಮೇತ ಸಲ್ಲಿಸಲಾಗಿರುವ ದೂರಿನ ಬಗ್ಗೆ ನ್ಯೂಸ್ 18 ಕನ್ನಡ ಶಂಕರ್ ಅವರನ್ನು ಮಾತನಾಡಿಸಿದಾಗ, ಇದು ನಿರಾಧಾರವಾದ ಆರೋಪ. ಎಲ್ಲವೂ ನಿಯಮಗಳ ಚೌಕಟ್ಟಿನಲ್ಲೇ ನಡೆದಿದೆ. ಮೌದ್ಗಿಲ್ ಆರೋಪ ಪೂರ್ವಾಗ್ರಹಪೀಡಿತವಾದಂತಿದೆ. ಕಾನೂನು ಬಿಟ್ಟು ಕೆಲಸ ಮಾಡಿದ್ದು ಸಾಬೀತಾದರೆ  ಯಾವ್ ಶಿಕ್ಷೆ ಎದುರಿಸಲು ಸಿದ್ಧ ಎಂದು ಶಂಕರ್​ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವುದಕ್ಕೆ ನಿಯಮ ಉಲ್ಲಂಘಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಶಂಕರ್ ಅವರ ಅಕ್ರಮಕ್ಕೆ ಕೆಎಎಸ್ ಅಧಿಕಾರಿಗಳಾದ ಹರೀಶ್ ನಾಯ್ಕ ಹಾಗೂ ಮಹಾದೇವಯ್ಯ ಕೂಡ ಜೊತೆಯಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಒಂದು ವೇಳೆ ಮುನೀಷ್​ ಮೌದ್ಗಿಲ್ ಮಾಡಿರುವ ಆರೋಪ ರುಜುವಾತಾದರೆ ಡೆಮಾಲಿಷನ್​ ಮ್ಯಾನ್​ ಎಂದೇ ಖ್ಯಾತಿ ಗಳಿಸಿದ್ದ ವಿ. ಶಂಕರ್​ ಅವರು ತೀವ್ರ ಸಂಕಷ್ಟಕ್ಕೆ ಸಿಲುಕುವುದಂತು ಸತ್ಯ.

ವಿಶೇಷ ವರದಿ: ಥಾಮಸ್ ಪುಷ್ಪರಾಜ್ 

 

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading