ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ - ನಿವೃತ್ತ ಎ.ಎಸ್.ಐ ಬಂಧನ

news18
Updated:August 28, 2018, 5:43 PM IST
ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ - ನಿವೃತ್ತ ಎ.ಎಸ್.ಐ ಬಂಧನ
news18
Updated: August 28, 2018, 5:43 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಆಗಸ್ಟ್ 28) :  ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಲಬುರ್ಗಿಯ ವಿಶ್ವವಿದ್ಯಾಲಯ‌ ಠಾಣೆ ಪೊಲೀಸರು ನಿವೃತ್ತ ಎಎಸ್ಐಯನ್ನು ಬಂಧಿಸಿದ್ದಾರೆ.

ಚಿಂಚೋಳಿ‌ ನಿವಾಸಿ ನಿವೃತ್ತ ಎಎಸ್ಐ ವೀರಯ್ಯಾ ಎಸ್. ಗುಡಿ ಬಂಧಿತ ಆರೋಪಿ.  ಸಂಚಾರಿ ಪೊಲೀಸ್ ಠಾಣೆಯ ನಿವೃತ್ತ ಎಎಸ್ಐ ವೀರಯ್ಯಾ ಎಸ್. ಗುಡಿ, ಪ್ರಧಾನಿ ಮೋದಿ ಕುರಿತ ಪ್ರಿಯಾಂಕ ಖರ್ಗೆ ಹೇಳಿಕೆಗೆ ಕಾಮೆಂಟ್ ಮಾಡಿದ್ದ ಪೋಸ್ಟ್ ನ್ನು ತನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಅವಹೇಳನ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಲಾಗಿತ್ತು. ಇದಕ್ಕೆ ಕಾಮೆಂಟ್ ಮಾಡುವ ಜೊತೆಗೆ ವೀರಯ್ಯ ಶೇರ್ ಮಾಡಿದ್ದ ಎನ್ನಲಾಗಿದೆ.

ಈ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅಭಿಮಾನಿಗಳು ನೀಡಿದ ದೂರಿನ ಅನ್ವಯ ವಿ.ವಿ. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೀರಯ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ